Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ನಾನು ಅಜಯ್​ ಮದುವೆಯಾಗುವುದು ಯಾರಿಗೂ ಇಷ್ಟವಿರಲಿಲ್ಲ: ಕಾಜೋಲ್​

Thursday, 18.10.2018, 7:08 PM       No Comments

ಮುಂಬೈ: ಬಾಲಿವುಡ್​ ತಾರಾ ಜೋಡಿಗಳಲ್ಲಿ ಮೆಚ್ಚುಗೆಗೆ ಪಾತ್ರರಾದ ಅಜಯ್​ ದೇವಗನ್​ ಮತ್ತು ಕಾಜೋಲ್​ ಮದುವೆಯಾಗಬೇಕು ಎಂದಿ ನಿರ್ಧರಿಸಿದಾಗ ಎಲ್ಲರೂ ವಿರೊಧ ವ್ಯಕ್ತಪಡಿಸಿದ್ದರಂತೆ…

ಹೌದು, ನೀವು ಕೇಳಿದ್ದು ಸತ್ಯ. 1999 ಫೆ.24ರಂದು ಕಾಜೋಲ್​, ಅಜಯ್​ ಸಪ್ತಪದಿ ತುಳಿದಿದ್ದರು. ಜೀವನದ ಪ್ರತಿ ಘಟ್ಟದಲ್ಲೂ ಎದುರಾದ ಏರಿಳಿತಗಳನ್ನು ಯಶಸ್ವಿಯಾಗಿ ಎದುರಿಸಿ ಜನ ಮನ ಗೆದ್ದಿದ್ದಾರೆ.

ಆದರೆ, ಇಷ್ಟು ವರ್ಷಗಳಾದ ನಂತರ ಕಾಜೋಲ್​, ನೇಹಾ ಧೂಫಿಯಾ ಅವರ ಶೋನಲ್ಲಿ ಇದೇ ಮೊದಲ ಬಾರಿಗೆ ತಮ್ಮ ಮದುವೆ ವೇಳೆ ಎದುರಿಸಿದ ಕೆಲ ಘಟನೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

‘ನಾನು ಮತ್ತು ಅಜಯ್​ ಮದುವೆಯಾಗುವುದು ಯಾರಿಗೂ ಇಷ್ಟವಿರಲಿಲ್ಲ. ಏಕೆಂದರೆ ನಾವಿಬ್ಬರು ಬೇರೆ ಸ್ವಭಾವದವರಾಗಿದ್ದೆವು. ನನ್ನ ತಂದೆಯೂ ನನ್ನ ಮದುವೆಗೆ ವಿರೋಧ ವ್ಯಕ್ತಪಡಿಸಿ, ನನ್ನೊಂದಿಗೆ ಒಂದು ವಾರ ಮಾತು ಬಿಟ್ಟಿದ್ದರು’ ಎಂದು ಕಾಜೋಲ್​ ಹೇಳಿಕೊಂಡಿದ್ದಾರೆ.

ನನ್ನ ತಂದೆಗೆ ನಾನು ಮದುವೆಯಾಗುವುದೇ ಇಷ್ಟವಿರಲಿಲ್ಲ. ನಾನು ಮದುವೆಯಾಗುತ್ತೇನೆ ಎಂದಾಗ ಕೋಪಿಸಿಕೊಂಡಿದ್ದರು. ಈಗಷ್ಟೇ ಕರಿಯರ್​ನಲ್ಲಿ ಉತ್ತಮ ನೆಲೆ ಕಂಡುಕೊಳ್ಳುತ್ತಿದ್ದೀಯ. ಇಷ್ಟು ಬೇಗ ಮದುವೆ ಯಾಕೆ ಎಂದು ಪ್ರಶ್ನಿಸಿದ್ದರು. ಆದರೆ ನಾನು ಮದುವೆಯಾಗಲೇಬೇಕು ಎಂದಿದ್ದೆ ಎಂದರು.

ನಾನು ಮತ್ತು ಅಜಯ್​ ವಿಭಿನ್ನ ಸ್ವಭಾವದವರಾಗಿದ್ದೆವು. ನಾವು ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಿರಲಿಲ್ಲ. ಎಷ್ಟೋ ಜನರನ್ನು ನಾವು ಭೇಟಿಯೇ ಮಾಡಿರಲಿಲ್ಲ. ನಮ್ಮ ಮದುವೆಯ ಬಗ್ಗೆ ಎಲ್ಲರಿಗೂ ಅನುಮಾನವೇ ಹೆಚ್ಚಿತ್ತು ಎಂದಿರುವ ಕಾಜೋಲ್​, ನಾವಿಬ್ಬರು ಇಷ್ಟು ವರ್ಷಗಳಾದರೂ ಒಟ್ಟಿಗಿದ್ದೇವೆ ಎಂದರೆ ಇಬ್ಬರೂ ಅದಕ್ಕಾಗಿ ಹೊಂದಾಣಿಕೆಯೆಂಬ ಮಂತ್ರವನ್ನು ಮೈಗೂಡಿಸಿಕೊಂಡಿದ್ದೇವೆ. ನಮಗೆ ಇಬ್ಬರು ಮಕ್ಕಳಿದ್ದಾರೆ. ಇವರಿಬ್ಬರನ್ನೂ ನೋಡಿಕೊಳ್ಳುವ ಒಂದು ಜೀವದಂತೆ ಆಗಿಬಿಟ್ಟಿದ್ದೇವೆ ಎಂದರು. (ಏಜೆನ್ಸೀಸ್)

View this post on Instagram

Au revoir….. Paris!

A post shared by Kajol Devgan (@kajol) on

Leave a Reply

Your email address will not be published. Required fields are marked *

Back To Top