ಪಾರ್ವತಿ ದೇವಿ ಕಾಜಲ್ : ‘ಕಣ್ಣಪ್ಪ’ ಚಿತ್ರದಲ್ಲಿ ಬಹುಭಾಷೆ ನಟಿಯ ಹೊಸ ಅವತಾರ

blank

ಹಿಂದಿ, ತೆಲುಗು, ತಮಿಳು ಸೇರಿ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ನಟಿ ಕಾಜಲ್ ಅಗರ್ವಾಲ್‌ಗೆ ಸಲ್ಲುತ್ತದೆ. 2020ರಲ್ಲಿ ಉದ್ಯಮಿ ಗೌತಮ್ ಕಿಚ್ಲೂ ಜತೆ ಮದುವೆಯಾದ ಕಾಜಲ್, 2022ರಲ್ಲಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು. ಆ ಸಂದರ್ಭದಲ್ಲಿ ಕೆಲ ತಿಂಗಳ ಕಾಲ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ಅವರು, ಇದೀಗ ಮತ್ತೆ ನಟನೆಯಲ್ಲಿ ಬಿಜಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಘೋಸ್ಟಿ’, ‘ಭಗವಂತ್ ಕೇಸರಿ’, ‘ಸತ್ಯಭಾಮ’, ‘ಇಂಡಿಯನ್ 2’ ಸೇರಿ ಐದು ಚಿತ್ರಗಳಲ್ಲಿ ಮಿಂಚಿರುವ ಕಾಜಲ್, ಈ ವರ್ಷ ನಾಲ್ಕು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ಮುಕೇಶ್ ಕುಮಾರ್ ಸಿಂಗ್ ನಿರ್ದೇಶಿಸುತ್ತಿರುವ ವಿಷ್ಣು ಮಂಚು ಮುಖ್ಯಭೂಮಿಕೆಯಲ್ಲಿರುವ ತೆಲುಗಿನ ಬಿಗ್ ಬಜೆಟ್ ‘ಕಣ್ಣಪ್ಪ’ ಚಿತ್ರ ಕೂಡ ಒಂದು. ಇತ್ತೀಚೆಗಷ್ಟೆ ಕಾಜಲ್ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಪಾರ್ವತಿ ದೇವಿಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಪಾರ್ವತಿ ದೇವಿ ಕಾಜಲ್ : ‘ಕಣ್ಣಪ್ಪ’ ಚಿತ್ರದಲ್ಲಿ ಬಹುಭಾಷೆ ನಟಿಯ ಹೊಸ ಅವತಾರ

ಗಿರಿ ಶಿಖರಗಳ ನಡುವೆ ಶ್ವೇತವಸಧಾರಿಯಾಗಿರುವ ಕಾಜಲ್, ಪಾರ್ವತಿ ರೂಪ ತಳೆದಿದ್ದಾರೆ. ‘ಮೂರು ಲೋಕದ ತ್ರಿಶಕ್ತಿಯಾಗಿ ಪಾರ್ವತಿ ದೇವಿ ತನ್ನ ಭಕ್ತರನ್ನು ರಕ್ಷಿಸುತ್ತಾಳೆ. ಪವಿತ್ರವಾದ ಶ್ರೀ ಕಾಳಹಸ್ತಿಯಲ್ಲಿ ಜ್ಞಾನ ಹಾಗೂ ಅನುಗ್ರಹದ ಸಂಕೇತವಾಗಿ ಪ್ರಸೂನಾಂಬಿಕಾ ದೇವತೆಯಾಗಿ ಪ್ರತಿಷ್ಠಾಪಿತವಾಗಿದ್ದಾಳೆ’ ಎಂದು ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿದೆ. ಇನ್ನು, ಪ್ಯಾನ್ ಇಂಡಿಯಾ ಮೂಡಿಬರುತ್ತಿರುವ ‘ಕಣ್ಣಪ್ಪ’ ಚಿತ್ರದಲ್ಲಿ ಅಕ್ಷಯ್ ಕುಮಾರ್, ಪ್ರಭಾಸ್, ಮೋಹನ್ ಲಾಲ್, ಮೋಹನ್ ಬಾಬು ಸೇರಿ ಹಲವರು ಕಲಾ ಬಳಗದಲ್ಲಿದ್ದಾರೆ. ಇದೇ ಏ. 25ಕ್ಕೆ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. -ಏಜೆನ್ಸೀಸ್.

Share This Article

ಒಂದು ದಿನಕ್ಕೆ ಒಬ್ಬರು ಎಷ್ಟು ಸಿಹಿ ತಿನ್ನಬೇಕು? ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳೊದೇನು? ಇಲ್ಲಿದೆ ಮಾಹಿತಿ..| WHO

WHO: ನೀವು ಪ್ರತಿದಿನ ಸಿಹಿ ತಿನ್ನುತ್ತಿದ್ದೀರಾ? ದಿನಂಪ್ರತಿ ಸಿಹಿತಿಂಡಿಗಳು-ಚಾಕಲೇಟ್​ ಸೇರಿದಂತೆ ಸಿಹಿ ಪಾನೀಯಗಳು ಸೇವನೆಯ ಅಭ್ಯಾಸವು…

ಅಡುಗೆಮನೆಯಲ್ಲಿ ಈ ಫೋಟೋವನ್ನು ಇಟ್ಟರೆ, ಮನೆಯಲ್ಲಿ ಅದೃಷ್ಟ, ಸಂಪತ್ತು ಸದಾ ತುಂಬಿರುತ್ತದಂತೆ! Vastu Tips

Vastu Tips: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ವಾಸ್ತು ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು…

ಫ್ರಿಡ್ಜ್​​​ನಲ್ಲಿಟ್ಟ ಮಾಂಸ ತಿನ್ನುತ್ತಿದ್ದೀರಾ? ನೀವು ಇದನ್ನು ಖಂಡಿತ ತಿಳಿದುಕೊಳ್ಳಬೇಕು..meat

meat: ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ರೆಫ್ರಿಜರೇಟರ್‌ಗಳು ಅತ್ಯಗತ್ಯವಾಗಿರುತ್ತವೆ. ಪ್ರತಿಯೊಂದು ವಸ್ತುವನ್ನು ಫ್ರಿಡ್ಜ್‌ನಲ್ಲಿ ಇಡುವುದನ್ನು ಅವರು…