ಕಗ್ಗದ ಬೆಳಕು | ಬದುಕು ಬಂದಂತೆ ಎದುರುಗೊಂಡರೆ ಹಗುರ ಬಾಳು ಸಾಧ್ಯ

ತಲೆಪಾಗಿನೊಳಕೊಳಕ,ಪಂಚೆನಿರಿಯೊಳಹರಕ|ತಿಳಿಸುವೆಯ ರಜಕಗಲ್ಲದೆ ಲೋಗರಿಂಗೆ?||ಅಳಲುದುಗುಡಗಳ ನಿನ್ನೊಳಗೆ ಬೈತಿಡದೆ ನೀ-|ನಿಳೆಗೆ ಹರಡುವುದೇಕೋ-ಮಂಕುತಿಮ್ಮ||719|| ತಲೆಯ ಮೇಲೆ ಇಟ್ಟುಕೊಳ್ಳುವ ಪೇಟದ ಒಳಗಿರುವ ಕೊಳಕನ್ನು, ಪಂಚೆ ನಿರಿಯ ಒಳಗಿರುವ ಹರಿದ ಭಾಗವನ್ನು ಬಟ್ಟೆ ಒಗೆಯುವ ಅಗಸನಿಗೆ ಮಾತ್ರ ಹೇಳುವುದು ತಾನೆ? ಅದನ್ನು ಪೂರ್ತಿ ಲೋಕಕ್ಕೇ ತಿಳಿಸುತ್ತೀಯಾ? ನಿನ್ನ ಅಳು-ದುಗುಡಗಳನ್ನು ನಿನ್ನಲ್ಲೇ ಬಚ್ಚಿಟ್ಟುಕೋ, ಅದನ್ನು ಭೂಮಿಗೆ ಯಾಕೆ ಹರಡುತ್ತಿ ಎಂದು ಪ್ರಶ್ನಿಸುತ್ತದೆ ಈ ಕಗ್ಗ. ಜೀವನದಲ್ಲಿ ಕಷ್ಟ-ನಷ್ಟಗಳಿಗೆ ಒಳಗಾಗದಿರುವ, ಸಮಸ್ಯೆಗಳೇ ಇಲ್ಲದಿರುವ ವ್ಯಕ್ತಿಗಳು ಇಲ್ಲವೇ ಇಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ತೊಂದರೆಗೆ ಒಳಗಾಗಿರುತ್ತಾರೆ.ಬದುಕಿನ ಕಷ್ಟಗಳನ್ನು ಹೇಗೆ … Continue reading ಕಗ್ಗದ ಬೆಳಕು | ಬದುಕು ಬಂದಂತೆ ಎದುರುಗೊಂಡರೆ ಹಗುರ ಬಾಳು ಸಾಧ್ಯ