ಕಡೂರಿನ ಶ್ರೀ ವೀರಭದ್ರೇಶ್ವರ ರಥೋತ್ಸವ ಸಂಪನ್ನ

ಕಡೂರು: ಪಟ್ಟಣದ ಛತ್ರದ ಬೀದಿಯ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ಶ್ರೀ ವೀರಭದ್ರಸ್ವಾಮಿಗೆ ಮೂಲ ಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಸಲಾಯಿತು. ವೀರಭದ್ರಸ್ವಾಮಿ ಉತ್ಸವ ಮೂರ್ತಿಯನ್ನು ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ನಂತರ ಅಲಂಕಾರಗೊಂಡ ರಥದಲ್ಲಿ ಪ್ರತಿಷ್ಠಾಪಿಸಿ ಬಲಿಹರಣದ ನಂತರ ಮಧ್ಯಾಹ್ನ 12.30ಕ್ಕೆ ತೇರನ್ನು ಎಳೆಯಲಾಯಿತು. ನೂರಾರು ಭಕ್ತರು ಬಾಳೆಹಣ್ಣನ್ನು ರಥಕ್ಕೆ ಎಸೆದು ಹರಕೆ ತೀರಿಸಿದರು. ರಥೋತ್ಸವದಲ್ಲಿ ಮಲ್ಲೇಶ್ವರದ ಸ್ವರ್ಣಾಬಾ ದೇವಿ, ಚೌಡ್ಲಾಪುರದ ಕರಿಯಮ್ಮ ದೇವಿ, ಬನಶಂಕರಿ ದೇವಿ ಉತ್ಸವ ಮೂರ್ತಿಗಳು ಇದ್ದವು.

ಪುರಸಭೆ ನೂತನ ಸದಸ್ಯ ಮರುಗುದ್ದಿ ಮನು 2.60 ಲಕ್ಷ ರೂ.ಗೆ ವೀರಭಧ್ರೇಶ್ವರ ಸ್ವಾಮಿ ಪ್ರದಾನ ಬಾವುಟವನ್ನು ಹರಾಜಿನಲ್ಲಿ ತಮ್ಮದಾಗಿಸಿಕೊಂಡರು. ಈ ಬಾವುಟವನ್ನು ಮನೆಯ ಪೂಜಿಸಿದರೆ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಹನ್ನೆರಡು ಹರಿವಾಣದ ಗೌಡ ಕೆ.ಎಂ.ಕೆಂಪರಾಜು ಮಾತನಾಡಿ, ಶ್ರೀ ಸ್ವಾಮಿ ಕೃಪೆಯಿಂದ ನಾಡಿನ ಬರದ ಬೇಗೆ ದೂರವಾಗಿ ನಾಡು ಸಮೃದ್ಧವಾಗಲಿ. ರೈತರು ನೆಮ್ಮದಿಯ ಬದುಕು ಕಾಣಲಿ ಎಂದರು.

Leave a Reply

Your email address will not be published. Required fields are marked *