ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ

ಕಡೂರು: ಕಡೂರು-ಬೀರೂರು ಜಂಕ್ಷನ್ ಮಧ್ಯೆ ಹಳಿ ನಿರ್ವಹಣೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಮಾ.20ರವರೆಗೆ ಕೆಲ ರೈಲುಗಳ ಸಂಚಾರ ನಿಗದಿತ ಸಮಯಕ್ಕಿಂತ ವಿಳಂಬವಾಗಲಿದೆ.

ಬೆಳಗ್ಗೆ 5.35ಕ್ಕೆ ತೆರಳಬೇಕಿದ್ದ ಅರಸೀಕೆರೆ-ಹುಬ್ಬಳ್ಳಿ ಪ್ಯಾಸೆಂಜರ್ ರೈಲು (ಗಾಡಿ ಸಂಖ್ಯೆ 56273) 40 ನಿಮಿಷ ತಡವಾಗಿ ಸಂಚರಿಸಲಿದೆ. ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ತೆರಳುವ ರೈಲು ಒಂದು ತಾಸು ತಡವಾಗಲಿದೆ.

11.05ಕ್ಕೆ ಕಡೂರಿಗೆ ಬರಬೇಕಿದ್ದ ಶಿವಮೊಗ್ಗದಿಂದ ಮೈಸೂರಿಗೆ ತೆರಳುವ ರೈಲು ಮಧ್ಯಾಹ್ನ 1.20ಕ್ಕೆ ಬಂದಿದೆ. ಟಿಕೆಟ್ ಪಡೆದ ಪ್ರಯಾಣಿಕರು ಇಲಾಖೆಗೆ ಹಿಡಿಶಾಪ ಹಾಕಿದರು.

ಹಳಿ ನಿರ್ವಹಣೆ ಕಾಮಗಾರಿಗೆ ವಿಶೇಷ ಉಪಕರಣಗಳನ್ನು ಕಡೂರು ಮತ್ತು ಬೀರೂರು ನಿಲ್ದಾಣಕ್ಕೆ ತರಲಾಗಿದೆ. ಕಾಮಗಾರಿ ಮಾ.20ರವರೆಗೆ ಬೆಳಗಿನ ಜಾವ 4ರಿಂದ 7.30ರವರೆಗೆ ನಡೆಯಲಿದೆ. ಹುಬ್ಬಳ್ಳಿ ಕಡೆ ಮಾರ್ಗವನ್ನು ನಿರ್ವಹಣೆಗಾಗಿ ಕಾಯ್ದಿರಿಸಿರುವುದರಿಂದ ರೈಲುಗಳ ಸಂಚಾರದಲ್ಲಿ ವಿಳಂಬವಾಗುತ್ತದೆ. ರೈಲ್ವೆ ನಿಲ್ದಾಣದಲ್ಲಿ ಸೂಚನಾಫಲಕಗಳನ್ನು ಅಳವಡಿಸಿದ್ದು, ಪ್ರಯಾಣಿಕರು ಓದಿ ಟಿಕೆಟ್ ಪಡೆಯಬಹುದು ಎಂದು ಇಲಾಖೆ ಅಧಿಕಾರಿಗಳು