ಕಿಕ್ಕೇರಿ: ಬಯಲುಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧಿ ಪಡೆದಿರುವ ಸಾಸಲು ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಕಡೇ ಸೋಮವಾರ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ವಿವಿಧೆಡೆಯಿಂದ ಬೆಳಗಿನ ಜಾವವೇ ಆಗಮಿಸಿದ ಭಕ್ತರು ಪವಿತ್ರ ಸೋಮೇಶ್ವರ ಪುಷ್ಕರಿಣಿಯಲ್ಲಿ ಸ್ನಾನ ಮಾಡಿದರು. ಸರತಿಯಲ್ಲಿ ನಿಂತು ಶ್ರದ್ಧಾಭಕ್ತಿಯಿಂದ ಬಾಲಾಲಯದಲ್ಲಿ ಪ್ರತಿಷ್ಠಾಪಿಸಿರುವ ಸೋಮೇಶ್ವರ, ಶಂಭುಲಿಂಗೇಶ್ವರ ಮೂರ್ತಿ ಹಾಗೂ ಗ್ರಾಮದಲ್ಲಿರುವ ಸಹೋದರಿ ಕುದುರೆಮಂಡಮ್ಮ ದೇವಿ ದರ್ಶನ ಪಡೆದರು,
ಶಂಭುಲಿಂಗೇಶ್ವರ ದೇಗುಲ ತಾಣದಲ್ಲಿರುವ ನಾಗಬನಕ್ಕೆ ಭಕ್ತರು ತೆರಳಿ ಹುತ್ತಕ್ಕೆ ಅರಿಶಿಣ, ಹಾಲು, ಮೊಸರು ಅಭಿಷೇಕ ನೆರವೇರಿಸಿ, ಪುಷ್ಪಗಳಿಂದ ಅಲಂಕರಿಸಿದರು. ರೋಗರುಜಿನ, ಚರ್ಮವ್ಯಾಧಿ ಬಾರದಂತೆ ಪ್ರಾರ್ಥಿಸಿದರು.
ಶಂಭುಲಿಂಗೇಶ್ವರ, ಸೋಮೇಶ್ವರ ಅನ್ನದಾಸೋಹ ಸಮಿತಿ ಸದಸ್ಯರು ದಾನಿಗಳ ಸಹಕಾರದಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು.