ಕುಂದಾಪುರ: ಇಟಾಲಿಯನ್ ಚರುಮುರಿ, ಪಾಂಪ್ಲೆಟ್ ಫ್ರೈ.. ಘಮಘಮ ಬಿರಿಯಾನಿ, ವೇಸ್ಟ್ ಚಪ್ಪಲಿ ಬಳಸಿ ನಿರ್ಮಿಸಿದ ಸೆಲ್ಫಿ ಪಾಯಿಂಟ್, ಪ್ಲಾಸ್ಟಿಕ್ ಬಳಕೆ ಪರಿಣಾಮ ಎಚ್ಚರಿಕೆ ನೀಡುವ ಮರಳು ಶಿಲ್ಪ, ಪರಿಸರ ಸ್ನೇಹಿ ಅಲಂಕಾರಿಕ ವಸ್ತು, ಚಮಚ, ಸ್ಟ್ರಾ, ಸ್ಪೋರ್ಕ್ ಎಲ್ಲವೂ ಪರಿಸರ ಪೂರಕ.. ಪ್ಲಾಸ್ಟಿಕ್ ಹೇಗೆ ಬಳಕೆ ಮಾಡಲಾಗುತ್ತದೆಯೋ ಅದೇ ರೀತಿ ಪರಿಸರ ಪೂರಕ ವಸ್ತಗಳ ಬಳಸಲು ಸಾಧ್ಯ ಎನ್ನುವುದ ಪ್ರಯತ್ನ ನೋಡುವ ಯೋಗ!
ಶನಿವಾರ ಕೋಡಿ ಕಡಲ ಕಿನಾರೆಯಲ್ಲಿ ಆಯೋಜಿಸಿದ ಪ್ಲಾಸ್ಟಿಕ್ ರಹಿತ ಕಡಲೋತ್ಸವದಲ್ಲಿ ಕಂಡುಬಂದ ಚಿತ್ರಣವಿದು.
ಕುಂದಾಪುರ ನಿರ್ವಾಣ, ಕ್ಲೀನ್ ಕುಂದಾಪುರ, ಎಸ್‌ಎಫ್‌ಎಲ್, ಗೀತಾನಂದ ಫೌಂಡೇಶನ್ ಮಣೂರು, ಮಾತಾ ಅಮೃತಾನಂದಮಯಿ, ಸಾಧನ ಕಲಾಸಂಗಮ ಆಶ್ರಯದಲ್ಲಿ ಕ್ಲೀನ್ ಕುಂದಾಪುರ ಪ್ರೊಜೆಕ್ಟ್ 50ನೇ ವಾರದ ಕಾರ‌್ಯಕ್ರಮದ ನಿಮಿತ್ತ ಕಡಲೋತ್ಸವ ಆಯೋಜಿಸಲಾಗಿತ್ತು.
ಮೀನುಗಾರರ ಬದುಕಿನ ಚಿತ್ರಣ, ಮೀನುಗಾರಿಕೆ ಪರಿಕರ, ಪ್ಲಾಸ್ಟಿಕ್ ಬದಲು ವೈವಿಧ್ಯಮಯ ಹಾಳೆ ತಟ್ಟೆ, ಪ್ಲೇಟ್, ಮನೆ ಅಲಂಕಾರಿಕಾ ವಸ್ತುಗಳು, ಪರಿಸರಸ್ನೇಹಿ ಬ್ಯಾಗ್, ಖಾದಿ ಬಟ್ಟೆಗಳು, ಮೊಬೈಲ್ ಕವರ್ ಪ್ರದರ್ಶನ ವೀಕ್ಷರ ಕುತೂಹಲ ಗರಿಗೆದರುವಂತೆ ಮಾಡಿತು.
ಸಮುದ್ರ ತೀರದಲ್ಲಿ ಸಾಗರೋತ್ಪನ್ನಗಳ ಆಹಾರ ಮೇಳ ಮತ್ತೊಂದು ವಿಶೇಷ. ಅದರಲ್ಲಿ ವಿದೇಶಿ ಯುವಕರು ಎಫ್‌ಎಸ್‌ಎಲ್‌ನ ಜರ್ಮನ್ ಚರುಮುರಿ ಬಾಯಲ್ಲಿ ನೀರೂರಿಸಿದರೆ, ಸಾವಯವ ಎಣ್ಣೆ, ಸಾವಯವ ಆಹಾರ ಪರ್ದಾಥಗಳಲ್ಲಿ ಮಾಡಿದ ಥರಹೇವಾರಿ ತಿಂಡಿ ತಿನಿಸುಗಳು ಬಾಯಲ್ಲಿ ನೀರೂರಿಸಿದ್ದ ಸುಳ್ಳಲ್ಲ. ಒಟ್ಟಾರೆ ಪ್ಲಾಸ್ಟಿಕ್ ಬಳಸದೆ ಉತ್ಸವ ಮಾಡಬಹುದು ಎಂದು ಸಾರಿದ ಕಡಲೋತ್ಸವ ದಾರಿ ತೋರಿಸಿದರೆ, ಪ್ಲಾಸ್ಟಿಕ್ ಇಲ್ಲದೆಯೂ ಬದುಕು ಕಟ್ಟಿಕೊಳ್ಳಬಹುದು ಎನ್ನುವುಕ್ಕೂ ಸಾಕ್ಷಿಯಾಯಿತು.
ಉತ್ಸವ ಉದ್ಘಾಟನೆ: ಕುಂದಾಪುರ ಉಪ ವಿಭಾಗಾಧಿಕಾರಿ ಸಿ ಕೆ.ರಾಜು ಹಾಗೂ ಎಎಸ್ಪಿ ಹರಿರಾಮ್ ಶಂಕರ್ ತೆಂಗಿನ ಮರಕ್ಕೆ ಕಟ್ಟಿದ ಶಾಲಿನ ಗಂಟು ಬಿಚ್ಚುವ ಮೂಲಕ ಉತ್ಸವ ಉದ್ಘಾಟಿಸಿದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕ್ಲೀನ್ ಕುಂದಾಪುರ ಪ್ರೊಜೆಕ್ಟ್‌ನ ಸರಸ್ವತಿ ಜಿ.ಪುತ್ರನ್, ಕಲ್ಪನಾ ಭಾಸ್ಕರ ಪೂಜಾರಿ, ಡಾ.ರಶ್ಮಿ, ಅನಂತಾ ಹರಿರಾಮ್ ಶಂಕರ್, ರೈಲ್ವೆ ಯಾತ್ರಿ ಸಂಘ ವಿವೇಕ್ ಕಾಮತ್, ಕುಂದಾಪುರ ರೆಡ್‌ಕ್ರಾಸ್ ಘಟಕ ಸಭಾಪತಿ ಜಯಕರ ಶೆಟ್ಟಿ, ಭರತ್ ಬಂಗೇರ, ಗಣೇಶ್ ಶ್ರೀಯಾನ್, ರವಿಕಿರಣ್, ಅನಿಕೇತ್ ಶೆಣೈ, ಅರುಣ್, ಅಕ್ಷಯ, ಶಕುಂತಲಾ, ಶಿವರಾಮ ಶೆಟ್ಟಿ, ಆಶಾ ಶೆಟ್ಟಿ, ಶಶಿಧರ್, ಅರಣ್ ಕುಮಾರ್, ಅನುದೀಪ್ ಹೆಗ್ಡೆ, ಶಂಕರ ಪೂಜಾರಿ, ತಿಮ್ಮಪ್ಪ ಖಾರ್ವಿ, ಸಂಜೀವ ಪೂಜಾರಿ, ಭಾಸ್ಕರ ಪುತ್ರನ್ ಇದ್ದರು.
ಒಮ್ಮಲೇ ಪ್ಲಾಸ್ಟಿಕ್ ನಿರ್ಮೂಲನೆ ಅಸಾಧ್ಯವಾದರೂ ಬಳಕೆ ಕಡಿಮೆ ಮಾಡಲು ಸಾಧ್ಯವಿದೆ. ಪ್ಲಾಸ್ಟಿಕ್ ಮಾತ್ರವಲ್ಲದೆ ಪ್ರಕೃತಿಯಲ್ಲಿ ಕರಗದೆ ಇರುವ ಅನೇಕ ಪರಿಸರ ಮಾರಕ ವಸ್ತುಗಳಿದ್ದು, ಅವುಗಳಿಂದಾಗುವ ದುಷ್ಪರಿಣಾಮ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಜವಾಬ್ದಾರಿಯಾಗಿದೆ. ನೆಲ, ಜಲ, ಪ್ರಕೃತಿ, ನೀರು ಉಳಿಸುವ ನಿಟ್ಟಿನಲ್ಲಿ ಪರಿಸರ ಮಾರಕ ವಸ್ತುಗಳ ಬಳಕೆಯಿಂದ ದೂರು ಉಳಿಯಬೇಕಾದಂತ ಆನಿವಾರ್ಯತೆ ಇದೆ. ಉತ್ಸವಗಳ ಮೂಲಕ ಜಾಗೃತಿ ಮೂಡಿಸುವುದು ಉತ್ತಮ ಬೆಳವಣಿಗೆ
ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕ, ಕುಂದಾಪುರನದಿ, ಸಮುದ್ರ ಪ್ರವಾಸಿತಾಣಗಳು ಮಲಿನವಾಗುತ್ತಿದ್ದು, ಅಂತಹ ಪರಿಸರದಲ್ಲಿ ಪರಿಸರ ಜಾಗೃತಿ ಮೂಡಿಸುವ ಜನಾಂದೋಲನ ಆಗಬೇಕಿದೆ. ಕೋಡಿ ಕಡಲ ಕಿನಾರೆ ಮಾನವ ಸ್ನೇಹಿಯಾಗಿ ಪರಿವರ್ತಸಿವ ಕೆಲಸ ಎನ್ನೆರಡು ತಿಂಗಳಲ್ಲಿ ಆಗುತ್ತಿದ್ದು, ಲೈಟಿಂಗ್ ಹಾಗೂ ಸಿಸಿಟಿವಿ ಆಳವಡಿಕೆ ಮಾಡಿಲಾಗುತ್ತದೆ.
ಹರಿರಾಮ್ ಶಂಕರ್ ಎಎಸ್ಪಿ, ಕುಂದಾಪುರಪ್ಲಾಸ್ಟಿಕ್ ಬಳಕೆ ಕಡಿವಾಣ ಹಾಕಿ ನೆಲ, ಜಲ ಸಂರಕ್ಷಣೆ ಮಾಡಬೇಕಿದೆ. ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಿಂದ ಪರಿಸರದ ಮೇಲಾಗುವ ಪರಿಣಾಮದ ಅರವು ಮೂಡಿಸಬೇಕು. ಎಲ್ಲೆಂದರಲ್ಲಿ, ನದಿ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಹಾಕುವುದರಿಂದ ಜಲಚರಗಳ ಮೇಲೂ ಪರಿಣಾಮ ಬೀರಿ ಮೀನು ಸಂತತಿ ಕೂಡ ಕ್ಷೀಣಿಸಲಿದೆ.
ಕೆ.ರಾಜು ಎಸಿ, ಕುಂದಾಪುರ