More

    ಕಡಲೆಕಾಯಿ ಪರಿಷೆಗೆ ವಿಧ್ಯುಕ್ತ ಚಾಲನೆ ನಾಳೆ: ಬಸವನಗುಡಿ ಸುತ್ತ ಕಳೆಗಟ್ಟಿದ ಜಾತ್ರಾ ದೃಶ್ಯ

    ಬೆಂಗಳೂರು: ರಾಜಧಾನಿಯ ಸಂಸ್ಕೃತಿ ಪ್ರತೀಕವಾಗಿರುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಸೋಮವಾರ ಬೆಳಗ್ಗೆ 10 ಗಂಟೆಗೆ ವಿಧ್ಯುಕ್ತ ಚಾಲನೆ ಸಿಗಲಿದ್ದು, ಅದಕ್ಕೂ ಮುನ್ನವೇ ವಾರಾಂತ್ಯದ ರಜೆ ವೇಳೆ ಅಸಂಖ್ಯ ಜನರು ಆಗಮಿಸಿ ಹಬ್ಬದಲ್ಲಿ ಸಂಭ್ರಮಿಸಿದರು.

    ಬಿಬಿಎಂಪಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಸೇರಿ ಆಚರಿಸುತ್ತಿರುವ ಪರಿಷೆಯಲ್ಲಿ ಈಗಾಗಲೇ ನೂರಾರು ಮಳಿಗೆಗಳಲ್ಲಿ ಖರೀದಿ ಭರಾಟೆ ಆರಂಭವಾಗಿದ್ದು ಹಬ್ಬದ ವಾತಾವರಣ ಕಂಡುಬಂದಿದೆ. ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಿಂದ ವ್ಯಾಪಾರಿಗಳು ಬಗೆ ಬಗೆಯಾದ ಕಡಲೆಕಾಯಿಯನ್ನು ಬಸವನಗುಡಿ ರಸ್ತೆಯ ಇಕ್ಕೆಲಗಳಲ್ಲಿ ಇಟ್ಟು ಮಾರಾಟ ಮಾಡುವಲ್ಲಿ ನಿರತರಾಗಿದ್ದಾರೆ. ಲಕ್ಷಗಟ್ಟಲೇ ಜನ ಆಗಮಿಸುವುದರಿಂದ ಪೊಲೀಸರು ಬಿಗಿ ಬಂದೋಬಸ್ತ್‌ಗೆ ನಿಗಾ ವಹಿಸಿದ್ದಾರೆ.

    ಪರಿಷೆ ಹಿನ್ನೆಲೆಯಲ್ಲಿ ದೊಡ್ಡಬಸವಣ್ಣ ಮತ್ತು ದೊಡ್ಡ ಗಣಪತಿ ಆವರಣದ ದೇಗುಲಗಳನ್ನು ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿದೆ. ದೇವಾಲಯದ ಪ್ರವೇಶದ್ವಾರ ಹಾಗೂ ದೊಡ್ಡಗಣಪತಿ ಮೂರ್ತಿ ಇರುವ ಕಡೆಗಳಲ್ಲಿ ಪುಷ್ಪಾಲಂಕಾರ ಮಾಡಿದ್ದು, ಭಕ್ತರು ಸರತಿ ಸಾಲಿನಲ್ಲಿ ಬಂದು ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಕಾರಣದಿಂದ ಬಸವನಗುಡಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲಾಗಿದೆ. ಪಾರ್ಕಿಂಗ್‌ಗೆ ದೂರದ ಸ್ಥಳಗಳಲ್ಲಿ ವಾಹನ ನಿಲ್ಲಿಸಿ ದೇವಾಲಯಕ್ಕೆ ಆಗಮಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

    ಜನವೋ ಜನ:

    ಭಾನುವಾರ ವೀಕೆಂಡ್ ಆಗಿದ್ದರಿಂದ ಸಾವಿರಾರು ಜನರು ಪರಿಷೆ ಸ್ಥಳಕ್ಕೆ ಭೇಟಿ ನೀಡಿ ಹಬ್ಬದ ಸವಿಯುಂಡರು. ಶಾಲೆಗಳಿಗೆ ರಜೆ ಇದ್ದ ಕಾರಣ ಪಾಲಕರು ತಮ್ಮ ಮಕ್ಕಳು ಹಾಗೂ ಕುಟುಂಬದೊಂದಿಗೆ ಆಗಮಿಸಿ ಪರಿಷೆಯನ್ನು ಕಣ್ತುಂಬಿಕೊಂಡರು. ಕಡಲೆಕಾಯಿ ಜತೆಗೆ ಸೌತೇಕಾಯಿ, ಚುರುಮುರಿ, ಮಿಠಾಯಿ, ಸಿಹಿ ತಿನಿಸು ಸೇರಿ ಹಲವು ಖಾದ್ಯಗಳನ್ನು ಜನರು ಖರೀದಿಸಿ ಆಸ್ವಾದಿಸಿದರು. ಬಹುತೇಕ ಮಂದಿ ಕಡಲೇಕಾಯಿಯನ್ನು ಖರೀದಿಸಿ ಮನೆಗೆ ಕೊಂಡೊಯ್ಯದರು.

    ಈ ಬಾರಿಯೂ ಪರಿಷೆಯನ್ನು ಪರಿಸರ ಸ್ನೇಹಿ ರೀತಿ ಆಚರಿಸಲಿದ್ದು, ಪಾ ್ಲ್ಯಸ್ಟಿಕ್ ಮುಕ್ತ ಕಾರ್ಯಕ್ರಮಕ್ಕೆ ಒತ್ತು ನೀಡಲಾಗಿದೆ. ಇದಕ್ಕಾಗಿ ‘ಪರಿಷೆಗೆ ಬನ್ನಿ, ಕೈಚೀಲ ತನ್ನಿ’ ೋಷವಾಕ್ಯವನ್ನು ಸೃಷ್ಟಿಸಿ ಸಂಘಟಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    ಸಿಸಿಟಿವಿ ಅಳವಡಿಕೆ:

    ಪರಿಷೆ ಹಿನ್ನೆಲೆಯಲ್ಲಿ ದೊಡ್ಡಗಣಪತಿ ದೇಗುಲದ ಆಸುಪಾಸಿನಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜತೆಗೆ ದೇಗಲದ ಒಂದು ಕಿ.ಮೀ. ಸುತ್ತ ಹೆಚ್ಚುವರಿಯಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಲ್ಲಲ್ಲಿ ಪೊಲೀಸ್ ಔಟ್‌ಪೋಸ್ಟ್‌ಅನ್ನು ತೆರೆಯಲಾಗಿದೆ. ನಾಗರಿಕರಿಗೆ ಅನುಕೂಲವಾಗಲೆಂದು ಪ್ರಮುಖ ವೃತ್ತ ಹಾಗೂ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

    ಸಿಎಂರಿಂದ ಉದ್ಘಾಟನೆ:

    ಕಡಲೆಕಾಯಿ ಪರಿಷೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಸುಬ್ರಹ್ಮಣ್ಯ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಬಸವನಗುಡಿ ಭಾಗದ ಮಾಜಿ ಪುರಪಿತೃಗಳು ಪಾಲ್ಗೊಳ್ಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts