ದಾವಣಗೆರೆ ವೃತ್ತಿ ರಂಗಾಯಣಕ್ಕೆ ಕಡಕೋಳ ನಿರ್ದೇಶಕರಾಗಿ ನೇಮಕ ಮಾಡಿ ಸರ್ಕಾರ ಆದೇಶ

ಕಲಬುರಗಿ : ಮಲ್ಲಿಕಾರ್ಜುನ ಕಡಕೋಳ ಅವರನ್ನು ದಾವಣಗೆರೆ ವೃತ್ತಿ ರಂಗಾಯಣದ ನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಕಳೆದ ಎರಡು ವರ್ಷಕಾಲ ಖಾಲಿ ಇದ್ದ ಹುದ್ದೆಗೆ ನಿರ್ದೇಶಕರಾಗಿ ಕಡಕೋಳ ಮೂರು ವರ್ಷದ ಅವಧಿಗೆ ನೇಮಕವಾಗಿದ್ದಾರೆ.

ಈ ಹಿಂದೆ ಕರ್ನಾಟಕ ನಾಟಕ ಅಕಾಡೆಮಿ ಮತ್ತು ರಂಗ ಸಮಾಜದ ಸದಸ್ಯರಾಗಿ ಬಾ ಅತಿಥಿ, ರಂಗ ಸಮಾಗಮ, ತಿಂಗಳ ಬೆಳಕಲಿ ರಂಗದ ಮೆರಗು ಮೊದಲಾದ ಕಾರ್ಯಕ್ರಮಗಳ ಮೂಲಕ ಕಡಕೋಳ ಅವರು ರಂಗಾಸಕ್ತರು ಮತ್ತು ಸರಕಾರದ ಗಮನ ಸೆಳೆದಿದ್ದರು. ನಾಟಕಕಾರಾಗಿ, ಲೇಖಕರಾಗಿ ಕಡಕೋಳ ಅವರು ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ. ದಾವಣಗೆರೆ ವೃತ್ತಿ ರಂಗಾಯಣ ಸ್ಥಾಪನೆಗಾಗಿ ಶ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಗಳಾಗಿದ್ದಾಗ ಕಡಕೋಳ ಅವರೇ ಸ್ವತಃ ಪ್ರಸ್ತಾವನೆ ಸಲ್ಲಿಸಿದ್ದರು. ಅವರ ಪ್ರಸ್ತಾಪವನ್ನು ಪರಿಗಣಿಸಿ ವೃತ್ತಿ ರಂಗಭೂಮಿ ರಂಗಾಯಣ ಸ್ಥಾಪಿಸಲಾಗಿತ್ತು. “ವೃತ್ತಿ ರಂಗಭೂಮಿ : ವರ್ತಮಾನದ ಸವಾಲುಗಳು” ವಿಷಯದ ಮೇಲೆ ಫೆಲೋಶಿಪ್ ಮಾಡಿದ್ದಾರೆ.

ರಾಜ್ಯವ್ಯಾಪ್ತಿ ವೃತ್ತಿ ರಂಗಭೂಮಿಯ ಚಟುವಟಿಕೆಗಳು, ಸಂಶೋಧನೆ, ಕಲೆ ಪ್ರಸಾರ ಸೇರಿದಂತಹ ಅಧಿಕಾರ ಕಾರ್ಯವ್ಯಾಪ್ತಿಯನ್ನು ಈ ವೃತ್ತಿ ರಂಗಾಯಣ ಹೊಂದಿದೆ. ಸದ್ಯ ಈ ರಂಗಾಯಣವು ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಮಟ್ಟದ ಈ ರಂಗಾಯಣವನ್ನು ಸ್ವತಃ ಕಟ್ಟಡ ಇತ್ಯಾದಿ ನಿರ್ಮಿಸಲು ಕೊಂಡಜ್ಜಿಯ ಬಳಿ ಹತ್ತು ಎಕರೆ ಭೂಮಿಯನ್ನು ಕಾದಿರಿಸಲಾಗಿದೆ.

ಸರ್ಕಾರದಲ್ಲಿ ರಾಜ್ಯ ಮಟ್ಟದ ಈ ಹುದ್ದೆಗೆ ಮಲ್ಲಿಕಾರ್ಜುನ ಅವರನ್ನು ನೇಮಕ ಮಾಡಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕನ್ನಡ ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ಹಾಗೂ ಶಿಪಾರಸ್ಸು ಮಾಡಿದ ಎಲ್ಲರಿಗೂ ಧನ್ಯವಾದಗಳು. ನೇಮಕಗೊಂಡಿರುವ ಮಲ್ಲಿಕಾರ್ಜುನ ಕಡಕೋಳ ಅವರಿಗೆ ಅಭಿವ್ಯಕ್ತಿ ಅಭಿನಂದನೆಗಳು.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…