ಕಪಿಲಾ ನದಿಯಲ್ಲಿ ಈಜಲುಹೋದ ಯುವಕ ನಾಪತ್ತೆ

ಮೈಸೂರು: ನಂಜನಗೂಡು ಪಟ್ಟಣ ಬಳಿಯಲ್ಲಿ ಈಜಲು ಕಪಿಲಾ ನದಿಗೆ ಧುಮುಕಿದ್ದ ನಾಲ್ವರು ಯುವಕರಲ್ಲಿ ಓರ್ವ ನಾಪತ್ತೆಯಾಗಿದ್ದಾನೆ. ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಳವಾಗಿದ್ದು ತುಂಬಿದ ನದಿಯಲ್ಲಿ ಈಜಾಡಲು ನಾಲ್ವರು ತೆರಳಿದ್ದರು. ಅವರಲ್ಲಿ ಮೂವರು ಈಜಿ ದಡ ಸೇರಿದ್ದು ಮುಜಾಫಿರ್​ ಶರೀಫ್​ ಎಂಬಾತ ನಾಪತ್ತೆಯಾಗಿದ್ದಾನೆ.

ಸೇತುವೆಯಿಂದ ನದಿಗೆ ಧುಮುಕಿರುವ ಮುಜಾಫಿರ್​ ಶರೀಫ್​ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಸಾಧ್ಯತೆಯಿದ್ದು ಶೋಧಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜು ತಜ್ಞರು ಆಗಮಿಸಿದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ ಯುವಕರ ತಂಡ ಈಜುವ ದುಸ್ಸಾಹಸಕ್ಕೆ ಇಳಿಯುತ್ತಿತ್ತು. ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.