More

    ಇಂದಿನಿಂದ ಉದ್ಯಾನ ನಗರಿಯಲ್ಲಿ ಕಬಡ್ಡಿ ಹಬ್ಬ: ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಳೂರು- ದಬಾಂಗ್ ದೆಹಲಿ ಮುಖಾಮುಖಿ, ದಕ್ಷಿಣ ಭಾರತದ ಸ್ಟಾರ್ ನಟ ಹಾಜರಿ

    ಬೆಂಗಳೂರು: ಏಕದಿನ ಹಾಗೂ ಟಿ20 ಕ್ರಿಕೆಟ್ ಪಂದ್ಯಗಳನ್ನು ಕಣ್ತುಂಬಿಕೊಂಡಿದ್ದ ಕ್ರೀಡಾಭಿಮಾನಿಗಳಿಗೆ ದೇಸೀಯ ಕ್ರೀಡೆಯ ರೋಚಕತೆ ಸವಿಯುವ ಅವಕಾಶ ಒದಗಿಬಂದಿದೆ. ಮೂರು ವರ್ಷಗಳ ಬಳಿಕ ಸಂಪೂರ್ಣ ಕ್ಯಾರವಾನ್ ಮಾದರಿಯಲ್ಲಿ ಮರಳಿರುವ ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯ 2ನೇ ಚರಣದ ಆತಿಥ್ಯಕ್ಕೆ ಗಾರ್ಡನ್ ಸಿಟಿಯ ಕಂಠೀರವ ಒಳಾಂಗಣ ಕ್ರೀಡಾಂಗಣ ಸಜ್ಜಾಗಿದ್ದು, ಶುಕ್ರವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ದೆಹಲಿ ಸೆಣಸಾಟ ನಡೆಸಲಿವೆ.

    2018ರ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಅಹಮದಾಬಾದ್‌ನ ಚರಣದ ಮೊದಲೆರಡು ಪಂದ್ಯದಲ್ಲಿ ಸೋಲು ಅನುಭವಿಸಿದೆ. ತವರಿನ ಅಭಿಮಾನಿಗಳ ಎದುರು ಗೆಲುವಿನ ಖಾತೆ ತೆರೆಯುವ ಆತ್ಮವಿಶ್ವಾಸದಲ್ಲಿದೆ. ಕಳೆದ ಬಾರಿ ಉಪಾಂತ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ಎದುರು ನಿರಾಸೆ ಆನುಭವಿಸಿತ್ತು. ಹಾಲಿ ಆವೃತ್ತಿಯಲ್ಲಿ ಯುವ ಹಾಗೂ ಅನುಭವಿ ಆಟಗಾರರ ಸಂಯೋಜನೆಯೊಂದಿಗೆ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲಿರುವ ಬೆಂಗಳೂರು ತಂಡ ಮತ್ತೆ ಟ್ರೋಫಿ ಜಯಿಸುವ ವಿಶ್ವಾಸವನ್ನು ರೈಡರ್ ವಿಕಾಸ್ ಕಂಡೋಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿಂದಿನ ಪಂದ್ಯದ ವೈಲ್ಯಗಳನ್ನು ತಿದ್ದಿ ಬುಲ್ಸ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯುವ ನಿರೀಕ್ಷೆ ಇದೆ. ಯುವ ಡಿೆಂಡರ್ ಸೌರಭ್ ನಂದಲ್ ತಂಡವನ್ನು ಮುನ್ನಡೆಸಲಿದ್ದು, ರೈಡರ್ ರಕ್ಷಿತ್ ತಂಡದಲ್ಲಿರುವ ಏಕೈಕ ರಾಜ್ಯದ ಆಟಗಾರ ಎನಿಸಿದ್ದಾರೆ.

    ಸುದೀಪ್ ಆಕರ್ಷಣೆ: ಬೆಂಗಳೂರ ಬುಲ್ಸ್‌ನ ತವರಿನ ಮೊದಲ ಪಂದ್ಯಕ್ಕೆ ನಟ, ರಾಯಭಾರಿ ಸುದೀಪ್ ಹಾಜರಿರಲಿದ್ದು, ಆತಿಥೇಯ ತಂಡವನ್ನು ಹುರಿದಂಬಿಸಲಿದ್ದಾರೆ. ಕಳೆದ ಆವೃತ್ತಿಯಲ್ಲೂ ತಂಡದ ರಾಯಭಾರಿ ಆಗಿದ್ದ ಸುದೀಪ್ ಈ ಬಾರಿಯೂ ದೇಸೀಯ ಕ್ರೀಡೆಗೆ ಬೆಂಬಲ ಮುಂದುವರಿಸಿದ್ದಾರೆ.

    ಬೆಂಗಳೂರು ಚರಣದ ವೇಳಾಪಟ್ಟಿ
    ಡಿ.8 ಬೆಂಗಳೂರು ಬುಲ್ಸ್- ದಬಾಂಗ್ ದೆಹಲಿ
    ಪುಣೇರಿ ಪಲ್ಟನ್- ಯು ಮುಂಬಾ
    ಡಿ.9 ಬೆಂಗಳೂರು ಬುಲ್ಸ್- ಹರಿಯಾಣ ಸ್ಟೀಲರ್ಸ್‌
    ಯುಪಿ ಯೋಧಾಸ್-ತೆಲುಗು ಟೈಟಾನ್ಸ್
    ಡಿ.10 ಬೆಂಗಾಲ್ ವಾರಿಯರ್ಸ್‌-ತಮಿಳ್ ತಲೈವಾಸ್
    ದಬಾಂಗ್ ದೆಹಲಿ-ಹರಿಯಾಣ ಸ್ಟೀಲರ್ಸ್‌
    ಡಿ.11 ಜೈಪುರ ಪಿಂಕ್ ಪ್ಯಾಂಥರ್ಸ್‌-ಗುಜರಾತ್ ಜೈಂಟ್ಸ್
    ಬೆಂಗಳೂರು ಬುಲ್ಸ್-ಯುಪಿ ಯೋಧಾಸ್
    ಡಿ.12 ಬೆಂಗಾಲ್ ವಾರಿಯರ್ಸ್‌-ಪಟನಾ ಪೈರೇಟ್ಸ್
    ಡಿ.13 ತಮಿಳ್ ತಲೈವಾಸ್-ತೆಲುಗು ಟೈಟಾನ್ಸ್
    ಬೆಂಗಳೂರು ಬುಲ್ಸ್-ಜೈಪುರ ಪಿಂಕ್ ಪ್ಯಾಂಥರ್ಸ್‌

    ಪಂದ್ಯ ಆರಂಭ: ರಾತ್ರಿ 8ಕ್ಕೆ
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್ ಸ್ಟಾರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts