ಕುತ್ತಿಗೆ ಹಿಡಿದು ತಳ್ಳಿದರೂ ಸಿಎಂ ರಾಜೀನಾಮೆ ನೀಡಲ್ಲ : ಈಶ್ವರಪ್ಪ

ಕೊಪ್ಪಳ: ಕಾಂಗ್ರೆಸ್‌ನವರು ಕುತ್ತಿಗೆ ಹಿಡಿದು ತಳ್ಳಿದರೂ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಲ್ಲ. ಅವರಿಗೆ ಮಾನ, ಮರ್ಯಾದೆ ಇದ್ದರೆ ಯಾವತ್ತೋ ರಾಜೀನಾಮೆ ನೀಡುತ್ತಿದ್ದರು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಕುಮಾರಸ್ವಾಮಿಯವರಿಗೆ ಅಧಿಕಾರದ ಹಪಾಹಪಿಯಿದೆ. ಕಾಂಗ್ರೆಸ್‌ನವರು ಮನಸಾರೆ ಅವರನ್ನು ಸಿಎಂ ಎಂದು ಒಪ್ಪಿಲ್ಲ. ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯರೇ ತಮ್ಮ ಸಿಎಂ ಅಂತಾರೆ. ಇದೆಲ್ಲ ಸಿದ್ದರಾಮಯ್ಯನವರ ಆಟ. ಸಿದ್ದರಾಮಯ್ಯ ಒಬ್ಬ ಹುಚ್ಚ. ಅದಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಪ್ರಿಯಾಂಕ ಗಾಂಧಿ ಹಸುಳೆ. ಅವರು ರಾಜಕೀಯ ಪ್ರವೇಶದಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎಂದು ಈಶ್ವರಪ್ಪ ಕಿಡಿ ಕಾರಿದರು.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾಗಿದೆ. ಹಿಂದೆ 50 ವರ್ಷ ದೇಶ ಆಳಿದ ಕಾಂಗ್ರೆಸ್‌ನವರು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಬಹುದಿತ್ತಲ್ಲವಾ ? ಯಾಕೆ ಕೊಡಲಿಲ್ಲ. ಕಾಂಗ್ರೆಸಿಗರು ಶ್ರೀಗಳ ಲಿಂಗೈಕ್ಯ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ.

| ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ