ಕೆ.ಎಸ್​.ಈಶ್ವರಪ್ಪ ಮನೆಗೆ ನಾಗಾಸಾಧುಗಳ ದಿಢೀರ್ ಭೇಟಿ

ಶಿವಮೊಗ್ಗ: ಬಿಜೆಪಿ ಶಾಸಕ ಕೆ.ಎಸ್​.ಈಶ್ವರಪ್ಪ ಮನೆಗೆ ನಾಗಾಸಾಧುಗಳು ಭಾನುವಾರ ದಿಢೀರ್​ ಭೇಟಿ ನೀಡಿದರು.
ನಾಗಾಸಾಧುಗಳಿಗೆ ಯಾರು ಆಹ್ವಾನ ಕೊಡದಿದ್ದರೂ ಏಕಾಏಕಿ ಭೇಟಿ ನೀಡಿ ಈಶ್ವರಪ್ಪ ಅವರ ಜತೆ 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ನಂತರ ಅವರನ್ನು ಆಶೀರ್ವದಿಸಿ ಅಲ್ಲಿಂದ ತೆರಳಿದರು. ಈಶ್ವರಪ್ಪ ಪುತ್ರ ಕಾಂತೇಶ್​ ಕೂಡ ನಾಗಾಸಾಧುಗಳಿಂದ ಆಶೀರ್ವಾದ ಪಡೆದರು ಎಂದು ಗೊತ್ತಾಗಿದೆ.