ಕೆ.ಆರ್.ನಗರ ತಾಪಂ ಉಪಾಧ್ಯಕ್ಷರಾಗಿ ಸಾಕಮ್ಮ ಸಣ್ಣಪ್ಪ ಆಯ್ಕೆ

ಕೆ.ಆರ್.ನಗರ: ಕೆ.ಆರ್.ನಗರ ತಾಲೂಕು ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಸಾಕಮ್ಮ ಸಣ್ಣಪ್ಪ ಅವಿರೋಧವಾಗಿ ಆಯ್ಕೆಯಾದರು.

ತಾಲೂಕು ಪಂಚಾಯಿತಿ ಒಟ್ಟು 22 ಸದಸ್ಯರನ್ನು ಹೊಂದಿದ್ದು ಕಾಂಗ್ರೆಸ್‌ನ 14, ಜೆಡಿಎಸ್‌ನ 8 ಸದಸ್ಯರಿದ್ದಾರೆ.ಉಪಾಧ್ಯಕ್ಷರಾಗಿದ್ದ ನೀಲಾಮಣಿ ರೇವಣ್ಣ ಅವರು ಪಕ್ಷದ ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ್ದರು.ಉಳಿದ 25 ತಿಂಗಳ ಅಧಿಕಾರಾವಧಿಗೆ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಾಕಮ್ಮ ಸಣ್ಣಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಅವರು ಸಾಕಮ್ಮ ಅವರ ಆಯ್ಕೆಯನ್ನು ಘೋಷಿಸಿದರು. 22 ಸದಸ್ಯರ ಪೈಕಿ 15 ಸದಸ್ಯರು ಮಾತ್ರ ಹಾಜರಿದ್ದು 7 ಸದಸ್ಯರು ಗೈರಾಗಿದ್ದರು.

ಅಧ್ಯಕ್ಷೆ ಮಲ್ಲಿಕಾರವಿಕುಮಾರ್, ಸದಸ್ಯರಾದ ನೀಲಾಮಣಿರೇವಣ್ಣ, ವೀಣಾದಿಲೀಪ್, ಜಯರಾಮೇಗೌಡ, ಎಚ್.ಟಿ.ಮಂಜುನಾಥ್, ಕುಮಾರ್, ಜಿ.ಎಸ್.ಮಂಜುನಾಥ್, ಲೋಕೇಶ್, ಮಂಜುನಾಥ್, ಶ್ರೀನಿವಾಸ್‌ಪ್ರಸಾದ್, ಮಾಜಿ ಸದಸ್ಯ ಸಣ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್ ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *