More

  ಕಾ.ಪು.ಸಿದ್ದಲಿಂಗಸ್ವಾಮಿ ಸೇವಾ ಕಾರ್ಯ ಅನನ್ಯ: ಮಾಜಿ ಸಚಿವ ನಾರಾಯಣಗೌಡ ಬಣ್ಣನೆ

  ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಕಾ.ಪು. ಸಿದ್ದಲಿಂಗಸ್ವಾಮಿ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನಾನುರಾಗಿಯಾಗಿದ್ದರು ಎಂದು ಮಾಜಿ ಸಚಿವ ನಾರಾಯಣಗೌಡ ಸ್ಮರಿಸಿದರು.
  ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಕಾ.ಪು.ಸಿದ್ದಲಿಂಗಸ್ವಾಮಿ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
  ಕಾ.ಪು.ಸಿದ್ದಲಿಂಗಸ್ವಾಮಿ ವಿಶಾಲ ಮನೋಭಾವ ಉಳ್ಳವರಾಗಿದ್ದರು. ಸಮಾಜ ಸೇವೆಯಲ್ಲಿ ಅವರು ಎಂದಿಗೂ ಮುಂಚೂಣಿಯಲ್ಲಿ ಇದ್ದರು. ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಎಲೆಮರೆ ಕಾಯಿಯಂತೆ ಉಳಿದುಕೊಂಡವರು. ದೇವಸ್ಥಾನ ಜೀರ್ಣೋದ್ಧಾರ, ಶಾಲೆಗಳ ಅಭಿವೃದ್ಧಿ, ಉದ್ಯಾನಗಳ ಅಭಿವೃದ್ಧಿ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಬಡತನದಲ್ಲಿ ಬೆಂದ ಹಲವಾರು ಜನರಿಗೆ ನೆರವು ನೀಡುವ ಮೂಲಕ ಸ್ಮರಣೀಯರಾಗಿದ್ದಾರೆ ಎಂದರು.
  ವೀರಶೈವ ಲಿಂಗಾಯತ ಸಮುದಾಯಕ್ಕೆ ಕಾ.ಪು.ಸಿದ್ದಲಿಂಗಸ್ವಾಮಿ ಅವರು ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಸಮಾಜ ಗುರುತಿಸುವಂತ ಕಾರ್ಯದಲ್ಲಿ ಸಿದ್ದಲಿಂಗಸ್ವಾಮಿ ಅವರು ತೊಡಗಿಸಿಕೊಂಡಿದ್ದರು. ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿದ್ದ ಅವರು ನೆರವು ಕೇಳಿಕೊಂಡು ಬರುತ್ತಿದ್ದ ಜನರಿಗೆ ಉದಾರವಾಗಿ ಸಹಾಯ ಮಾಡಿಸುತ್ತಿದ್ದರು ಎಂದು ನೆನಪಿಸಿಕೊಂಡರು.
  ಕಾರ್ಯ ಎಂಬ ಗ್ರಾಮದಲ್ಲಿ ಹುಟ್ಟಿ ಸಮುದಾಯದ ಜನರು ಕೊಂಡಾಡುವ ರೀತಿಯಲ್ಲಿ ಬೆಳೆದ ಕಾ.ಪು.ಸಿದ್ದಲಿಂಗಸ್ವಾಮಿ ಅವರ ಶ್ರಮ ಅಪಾರ. ಕಾರ್ಯ ಗ್ರಾಮದಲ್ಲೇ ಇರುವ ಶ್ರೀ ಸಿದ್ಧೇಶ್ವರ ಬೆಟ್ಟದಲ್ಲಿ ರಸ್ತೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇದರಿಂದ ಇಲ್ಲಿಗೆ ಬರುವ ಭಕ್ತರಿಗೆ ಈಗ ಅನುಕೂಲವಾಗಿದೆ. ಈಗಲೂ ಜನರು ಅದನ್ನು ಸ್ಮರಿಸುತ್ತಾರೆ ಎಂದರು.
  ಅನಾರೋಗ್ಯದಿಂದ ಕಾ.ಪು.ಸಿದ್ದಲಿಂಗಸ್ವಾಮಿ ಅವರು ಬಹಳ ಚಿಕ್ಕ ವಹಿಸ್ಸಿನಲ್ಲೇ ಅಸುನೀಗಿದರು. ಇದನ್ನು ಸಮಾಜ ಹಾಗೂ ಆಪ್ತ ವಲಯಕ್ಕೆ ಅರಗಿಸಿಕೊಳ್ಳಲಾಗದ ನೋವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ನಾವೆಲ್ಲರೂ ಪ್ರಾರ್ಥನೆ ಮಾಡೋಣ ಎಂದು ನಾರಾಯಣಗೌಡ ತಿಳಿಸಿದರು.
  ಮುಖಂಡರಾದ ಮಾಲಂಗಿ ಸುರೇಶ್, ಕೇಶವ, ದೂರ ರಾಜಣ್ಣ, ಬಿಳೆಗೆರೆ ಮಹೇಶ್, ಶಂಕರ್ ಗಣೇಶ್ ಇತರರಿದ್ದರು.

  See also  ರಕ್ತದಾನಕ್ಕೆ ಯುವ ಸಮೂಹ ಕೈಜೋಡಿಸಲಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts