More

    ಮಾಜಿ ಸಚಿವ ಕೆ.ಜೆ.ಜಾರ್ಜ್​ಗೆ ಸಂಕ್ರಾಂತಿ ಸಂಕಷ್ಟ: ಇಡಿಯಿಂದ ಇಡೀ ಕುಟುಂಬಕ್ಕೆ ಸಮನ್ಸ್​

    ಬೆಂಗಳೂರು: ಮಾಜಿ ಸಚಿವ ಕೆ.ಜೆ.ಜಾರ್ಜ್​ ಅವರಿಗೆ ಸಂಕ್ರಾಂತಿಯ ಹೊಸ್ತಿಲಲ್ಲೇ ಸಂಕಷ್ಟ ಶುರುವಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಜಾರ್ಜ್​ ಸೇರಿ ಅವರ ಕುಟುಂಬಕ್ಕೂ ಜಾರಿನಿರ್ದೇಶನಾಲಯ ಮಂಗಳವಾರ ಸಮನ್ಸ್​ ನೀಡಿದೆ.​

    ಜನವರಿ 16 ರಂದು ವಿಚಾರಣೆಗೆ ಹಾಜರಾಗಲು ಜಾರ್ಜ್​ಗೆ ನೋಟಿಸ್​ನಲ್ಲಿ ತಿಳಿಸಲಾಗಿದೆ. ಜಾರ್ಜ್ ವಿರುದ್ಧ ಮೂರು ತಿಂಗಳ ಹಿಂದೆ ರವಿಕೃಷ್ಣಾರೆಡ್ಡಿ ಎಂಬುವರು ದೂರು ನೀಡಿದ್ದರು. ಜಾರ್ಜ್ ಸಚಿವರಾಗಿದ್ದಾಗ ದೇಶ-ವಿದೇಶಗಳಲ್ಲಿ ತಮ್ಮ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ, ಈ ಸಂಬಂಧ ಚುನಾವಣಾ ಅಫಿಡವಿಟ್​ನಲ್ಲಿ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಆರೋಪಿಸಿ, ದಾಖಲೆ ಸಮೇತ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ಎಂಬುವರು ಇಡಿಗೆ ದೂರು ನೀಡಿದ್ದರು.

    ರವಿಕೃಷ್ಣಾ ರೆಡ್ಡಿ ನೀಡಿದ್ದ ದಾಖಲೆಗಳ ಆಧಾರದ ಮೇಲೆ ಇಡಿ ತನಿಖೆ ನಡೆಸಿತ್ತು. ಹೀಗಾಗಿ ಜಾರ್ಜ್, ಪತ್ನಿ ಸುಜಾತಾ, ಪುತ್ರಿ ರೇನಿತಾ ಹಾಗೂ ಪುತ್ರ ರಾಣಗೆ ಡಿಸೆಂಬರ್ 23ರಂದು ಇಡಿ ನೋಟಿಸ್ ನೀಡಿ, ಜನವರಿ 16ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

    ಜಾರ್ಜ್ ಕೇರಳದಿಂದ‌ ಬರಿಗೈಯನಲ್ಲಿ ಬಂದು ಸಾವಿರಾರು ಕೋಟಿ ವ್ಯವಹಾರ ಮಾಡುತ್ತಿದ್ದಾರೆ. ಮಗಳು ಮತ್ತು ಅಳಿಯನ ಹೆಸರಲ್ಲಿ ಅಮೆರಿಕದ ನ್ಯೂಯಾರ್ಕ್ ಹಾಗೂ ಆಸ್ಟ್ರೇಲಿಯಾದಲ್ಲಿ ಆಸ್ತಿ ಇದೆ ಎಂದೂ ರೆಡ್ಡಿ ಆರೋಪಿಸಿದ್ದರು. ಇದೀಗ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಆರೋಪ ಮಾಡಿದ್ದು, ಉತ್ತರ ನೀಡಲು ಹಾಜರಾಗುವಂತೆ ನೋಟಿಸ್​ ನೀಡಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts