ಹೈದರಾಬಾದ್: ಲಾಕ್‌ಡೌನ್ ನಂತರದಲ್ಲಿ ಎಲ್ಲರೂ ಮನೆಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಿರುವ ಕಾರಣ ಸಹಜವಾಗಿಯೇ ವಿದ್ಯುತ್ ಬಿಲ್ ಹೆಚ್ಚಳವಾಗಿದೆ. ಇದರ ಜತೆಗೆ ಕೆಲವರ ಮನೆಯ ವಿದ್ಯುತ್ ಬಿಲ್ ನಿರೀಕ್ಷೆಗೂ ಮೀರಿ ಬರುತ್ತಿದೆ. ಕೆಲವರ ಮನೆಯ ವಿದ್ಯುತ್ ಬಿಲ್ ನೋಡಿದರೆ ಶಾಕ್ ಹೊಡೆಯುವಂತಿದೆ. ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಅವರ ಮನೆಯ ವಿದ್ಯುತ್ ಬಿಲ್ ಕೂಡ ಇದೇ ರೀತಿಯ ಶಾಕ್ ನೀಡಿದೆ. ಹಾಗಾದರೆ ಅವರ ಮನೆಯ ವಿದ್ಯುತ್ ಬಿಲ್ ಎಷ್ಟು ಬಂದಿದೆ ಗೊತ್ತಾ?
ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಮಹಿಳೆಯರೂ 100 ಮೀ. ಓಡ್ತಾರೆ, 80 ಮೀ. ಅಲ್ಲ ಎಂದಿದ್ದೇಕೆ ಶಿಖಾ ಪಾಂಡೆ?
ಮುಂಬೈ ವ್ಯಕ್ತಿಯೊಬ್ಬರು ತಮ್ಮ ಮನೆಯ ವಿದ್ಯುತ್ ಬಿಲ್ ಸಾಮಾನ್ಯವಾಗಿ 3,500 ರೂ. ಬರುತ್ತಿತ್ತು. ಆದರೆ ಈ ತಿಂಗಳು 13,580 ರೂ. ಬಂದಿದೆ ಎಂದು ಟ್ವೀಟಿಸಿದ್ದರು. ಇದಕ್ಕೆ ಪ್ರತಿಯಾಗಿ ಬಾಲಿವುಡ್ ನಟಿ ರಿಚಾ ಛಡ್ಡಾ ಇದು ನಿಜಕ್ಕೂ ಲೂಟಿ ಎಂದು ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಜ್ವಾಲಾ ಗುಟ್ಟಾ, ‘ನನ್ನ ಮನೆಗೆ 16 ಸಾವಿರ ರೂ. ವಿದ್ಯುತ್ ಬಿಲ್ ಬಂದಿದೆ. ಲಾಕ್‌ಡೌನ್ ವೇಳೆ ನಾನು 3 ತಿಂಗಳು ಮನೆಯಲ್ಲೂ ಇರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಭಾರತದ ಮೊದಲ ಸಿಕ್ಸರ್ ಸಿಡಿಸಿದ್ದು ಯಾರು ಗೊತ್ತೇ?
ಜ್ವಾಲಾ ಗುಟ್ಟಾ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕೆಲ ಅಭಿಮಾನಿಗಳು, ‘ಬಹುಶಃ ನೀವು ಈ ಹಿಂದೆ ಬಾಕಿ ಉಳಿಸಿಕೊಂಡಿದ್ದ ಬಿಲ್‌ಗಳೆಲ್ಲ ಸೇರಿ ಈಗ ಬಂದಿರಬೇಕು’ ಎಂದು ಅವರ ಕಾಲೆಳೆದಿದ್ದಾರೆ. ಇನ್ನು ಕೆಲವರು, ನೀವು ಬಿಲ್ ಕಟ್ಟಿದರೆ ಹಲವು ಬಡವರ ಹೊಟ್ಟೆ ತುಂಬುತ್ತದೆ ಎಂದು ಬರೆದುಕೊಂಡಿದ್ದಾರೆ.
16 k for my house when I wasn’t there for three months of lockdown!!
— Gutta Jwala (@Guttajwala) June 24, 2020