ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೋಯಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಸುಪ್ರೀಂಕೋರ್ಟ್​ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೋಯಿ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಬೋಧಿಸಿದರು.

ಗೊಗೋಯಿ ಅವರು ಈಶಾನ್ಯ ಭಾರತದ ಮೊದಲ ಮುಖ್ಯನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಅಧಿಕಾರ ಅವಧಿ 2019ರ ನವೆಂಬರ್​ 17ರವರೆಗೆ ಇರಲಿದ್ದು, 13 ತಿಂಗಳು ಕಾರ್ಯನಿರ್ವಹಿಸಲಿದ್ದಾರೆ.

ದೀಪಕ್​ ಮಿಶ್ರಾ ಅವರಿಂದ ತೆರವಾದ ಸ್ಥಾನಕ್ಕೆ ಗೊಗೋಯಿ​ ಅವರು ಆಯ್ಕೆಯಾಗಿದ್ದಾರೆ. ಸುಪ್ರೀಂ ಕೋರ್ಟ್​ನ ಎರಡನೇ ಹಿರಿಯ ನ್ಯಾಯಮೂರ್ತಿಯಾಗಿರುವ ಗೊಗೋಯಿ ಅವರ ಹೆಸರನ್ನು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ವಾಡಿಕೆಯಂತೆ ಸಿಜೆಐ ದೀಪಕ್​ ಮಿಶ್ರಾ ಅವರು ಶಿಫಾರಸು ಮಾಡಿದ್ದರು.

ಗೊಗೋಯಿ​ ಜೀವನ
# ನವೆಂಬರ್ 18, 1954: ಅಸ್ಸಾಂನ ದಿಬ್ರುಗಢ್​ದಲ್ಲಿ ಜನನ
# 1978: ವಕೀಲರ ಸಂಘದಲ್ಲಿ ನೋಂದಣಿ
# ಫೆಬ್ರವರಿ 28, 2001: ಗೌಹಾಟಿ ಹೈಕೋರ್ಟ್​​ನಲ್ಲಿ ಶಾಶ್ವತ ನ್ಯಾಯಾಧೀಶರಾಗಿ ನೇಮಕ
# ಸೆಪ್ಟೆಂಬರ್ 9, 2010: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ಗೆ ವರ್ಗ
# ಫೆಬ್ರವರಿ 12, 2011: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ
# ಏಪ್ರಿಲ್ 23, 2012: ಸುಪ್ರೀಂ ಕೋರ್ಟ್​ ನ್ಯಾಯಾಧೀಶರಾಗಿ ನೇಮಕ
# ಸೆಪ್ಟೆಂಬರ್ 13, 2018: ಸುಪ್ರೀಂ ಕೋರ್ಟ್​ನ 46 ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕ
# ಅಕ್ಟೋಬರ್ 3, 2018: ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ
# ನವೆಂಬರ್​ 17, 2019: ವೃತ್ತಿ ಜೀವನದಿಂದ ನಿವೃತ್ತಿ
(ಏಜೆನ್ಸೀಸ್)

ಸಿಜೆಐ ಹುದ್ದೆಗೆ ಈಶಾನ್ಯ ರಾಜ್ಯದ ಮೊದಲಿಗ ನ್ಯಾ. ಗೊಗೋಯ್

ಸಿಜೆಐ ಸ್ಥಾನಕ್ಕೆ ಗೊಗೋಯ್​ ಹೆಸರು ಶಿಫಾರಸು ಮಾಡಿದ ದೀಪಕ್​ ಮಿಶ್ರಾ