BR Gavai as the Chief Justice of India: ಭಾರತದ 52 ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರತಿಜ್ಞಾ ವಿಧಿ ಬೋಧಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ, ಹಲವಾರು ಕೇಂದ್ರ ಸಚಿವರು ಮತ್ತು ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಗವಾಯಿ ಅವರನ್ನು ಅಭಿನಂದಿಸಿದರು.
ನ್ಯಾಯಮೂರ್ತಿ ಗವಾಯಿ ಅವರು ನವೆಂಬರ್ 24, 1960 ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದರು. ಅವರು ಮಾರ್ಚ್ 16, 1985 ರಂದು ವಕೀಲರಾಗಿ ವೃತ್ತಿ ಆರಂಭಿಸಿದರು ಮತ್ತು ಕ್ರಮೇಣ ತಮ್ಮ ಕಾನೂನು ವೃತ್ತಿಯನ್ನು ವಿಸ್ತರಿಸಿದರು. 2003 ರಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಮತ್ತು 2005 ರಲ್ಲಿ ಖಾಯಂ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಅವರು ಮುಂಬೈ ಮುಖ್ಯ ಪೀಠದಲ್ಲಿ ಹಾಗೂ ನಾಗ್ಪುರ, ಔರಂಗಾಬಾದ್ ಮತ್ತು ಪಣಜಿ ಪೀಠಗಳಲ್ಲಿ ಸೇವೆ ಸಲ್ಲಿಸಿದರು.
#WATCH | President Droupadi Murmu administers oath of office to Justice BR Gavai as the Chief Justice of India (#CJI).@rashtrapatibhvn pic.twitter.com/gD0NymJdil
— DD India (@DDIndialive) May 14, 2025
ಮೇ 24, 2019 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಸೇರಿದ ಗವಾಯಿ, ಕಳೆದ ಆರು ವರ್ಷಗಳಲ್ಲಿ ಸುಮಾರು 700 ಪ್ರಕರಣಗಳಲ್ಲಿ ಪೀಠದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾಂವಿಧಾನಿಕ ವಿಷಯಗಳು, ಆಡಳಿತಾತ್ಮಕ ವಿಷಯಗಳು, ಸಿವಿಲ್, ಕ್ರಿಮಿನಲ್, ವಾಣಿಜ್ಯ ಕಾನೂನುಗಳು, ಮಧ್ಯಸ್ಥಿಕೆ, ವಿದ್ಯುತ್, ಶಿಕ್ಷಣ ಮತ್ತು ಪರಿಸರ ವಿಷಯಗಳ ಕುರಿತು ಅವರ ತೀರ್ಪುಗಳು ಕಾನೂನು ಕ್ಷೇತ್ರದ ಮೇಲೆ ಹೆಚ್ಚಿನ ಪ್ರಭಾವ ಬೀರಿವೆ.
ಇತಿಹಾಸದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಎರಡನೇ ದಲಿತರಾದರು. ಸಿಜೆಐ ಆಗಿ ಗವಾಯಿ ಅವರ ಅಧಿಕಾರಾವಧಿ ಆರು ತಿಂಗಳಾಗುವ ಸಾಧ್ಯತೆಯಿದೆ. ಅವರು ನವೆಂಬರ್ 23 ರಂದು ನಿವೃತ್ತರಾಗಲಿದ್ದಾರೆ. ಈ ಹಿಂದೆ, ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮೊದಲ ದಲಿತ ಸಿಜೆಐ ಆಗಿ ಸೇವೆ ಸಲ್ಲಿಸಿದರೆ, ಈಗ ಗವಾಯಿ ಅದೇ ಗೌರವವನ್ನು ಮುಂದುವರೆಸಿದ್ದಾರೆ. ಭಾರತೀಯ ನ್ಯಾಯಾಂಗವನ್ನು ಭವಿಷ್ಯದಲ್ಲಿ ಮತ್ತಷ್ಟು ಪ್ರಜಾಪ್ರಭುತ್ವಗೊಳಿಸುವಲ್ಲಿ ನ್ಯಾಯಮೂರ್ತಿ ಗವಾಯಿ ಅವರ ನಾಯಕತ್ವ ನಿರ್ಣಾಯಕವಾಗಿರುತ್ತದೆ.