ಜೀವ ಜಾಲಾಡುವ ಜಂಕ್​ಫುಡ್

Latest News

 ನಟನದಲ್ಲಿ ‘ಅಶೋಕವನ’ ನಾಟಕ

ಮೈಸೂರು: ರಾಮಕೃಷ್ಣನಗರದಲ್ಲಿರುವ ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯಲ್ಲಿ ನ.17ರಂದು ಸಂಜೆ 6.30ಕ್ಕೆ ಬೆಳ್ಳಾವೆ ನರಹರಿ ಶಾಸ್ತ್ರಿಗಳ ಪೌರಾಣಿಕ ನಾಟಕ ಆಧರಿತ ‘ಅಶೋಕವನ’...

ಪುತ್ರನ ಮದುವೆ ಕಣ್ತುಂಬಿಕೊಳ್ಳಲೆಂದು ಆಸ್ಪತ್ರೆಯಲ್ಲೇ ವಿವಾಹ ಕಾರ್ಯಕ್ರಮ: ಆಸ್ಪತ್ರೆ ಸಿಬ್ಬಂದಿಯಿಂದ ಅಚ್ಚರಿಯ ಉಡುಗೊರೆ!

ನವದೆಹಲಿ: ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವಿದೆ ಎಂದಾಗ ಮದುವೆ ಸಮಾರಂಭವನ್ನು ಮುಂದೂಡುವುದು ಸಾಮಾನ್ಯ. ಆದರೆ ಇದಕ್ಕೆ ಅಪವಾದ ಎಂಬಂತೆ ಟೆಕ್ಸಾಸ್​ ಮೂಲದ ಜೋಡಿಯೊಂದು ಅನಾರೋಗ್ಯದಿಂದ...

ವಾಹನಗಳ ಸಂಖ್ಯಾ ಫಲಕದಲ್ಲಿ ಕನ್ನಡ ಅಂಕಿ

ಮೈಸೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಗುರುವಾರ ವಿವಿಧ ವಾಹನಗಳ ಸಂಖ್ಯಾ ಫಲಕದಲ್ಲಿ ಕನ್ನಡ ಅಂಕಿಯನ್ನು ಬರೆಸಲಾಯಿತು. ಮೈಸೂರು...

ಮೊಬೈಲ್‌ನಿಂದಾಗಿ ಪುಸ್ತಕ ಓದುವವರ ಸಂಖ್ಯೆ ಕ್ಷೀಣ

ಮೈಸೂರು: ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆಯಿಂದ ಪುಸ್ತಕವನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ಬೇಸರ ವ್ಯಕ್ತಪಡಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ...

ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ನಿಷೇಧದ ಅರಿವು

ಮೈಸೂರು: ಸ್ವಚ್ಛ ಸರ್ವೇಕ್ಷಣಾ-2020ರ ಸರ್ವೇ ಕಾರ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಮರ್ಪಕ ನಿರ್ವಹಣೆ ಗಣನೀಯ ಅಂಶವಾಗಿದ್ದು, ಪರಿಸರ ಮಾಲಿನ್ಯ ತಡೆಗಟ್ಟಲು ಪ್ಲಾಸ್ಟಿಕ್ ನಿಷೇಧ ಅವಶ್ಯಕವಾಗಿದೆ. ಈ...

ಜಗತ್ತಿನಾದ್ಯಂತ ಕೋಟ್ಯಂತರ ಜನರು ನಿತ್ಯವೂ ಜಂಕ್​ಫುಡ್ ದಾಸರಾಗುತ್ತಿದ್ದಾರೆ ಎಂದು ಆಹಾರ ಮತ್ತು ಕೃಷಿ ಸಂಸ್ಥೆ ಈಚೆಗೆ ನೀಡಿರುವ ವರದಿಯಲ್ಲಿ ತಿಳಿಸಿದೆ. ಎಲ್ಲರನ್ನೂ ಮೋಹದ ಪಾಶಕ್ಕೆ ಸಿಲುಕಿಸಿರುವ ಜಂಕ್​ಫುಡ್ ಎಂಬ ಮಾಯೆಯಿಂದ ಹೊರಬಂದವರೂ ಸಾಕಷ್ಟು ಜನ ಇದ್ದಾರೆ. ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು, ಜಂಕ್​ಫುಡ್​ಗಳನ್ನು ಆದಷ್ಟು ದೂರವಿಟ್ಟ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ‘ವಿಜಯವಾಣಿ’ ಜತೆ ಅನುಭವ ಹಂಚಿಕೊಂಡಿದ್ದಾರೆ. ಮಕ್ಕಳನ್ನು ಆಕ್ರಮಿಸಿಕೊಂಡಿರುವ ಜಂಕ್​ಫುಡ್ ಜಾಲದಿಂದ ಅವರನ್ನು ಬಿಡುಗಡೆ ಮಾಡುವುದು ಹೇಗೆ ಎಂಬ ಬಗ್ಗೆ ಆಹಾರ ತಜ್ಞರೂ ಇಲ್ಲಿ ವಿವರಿಸಿದ್ದಾರೆ.

ರಸ್ತೆ ಬದಿಯಲ್ಲಿ ಸಾಗುತ್ತಿರುವಾಗ ಘಮಘಮ ಎಂದು ಚಾಟ್ಸ್ ಪರಿಮಳ ಮೂಗಿಗೆ ಬಡಿಯುತ್ತಿದ್ದರೆ, ‘ಇವತ್ತೊಂದು ದಿನ ತಿಂದೇ ಬಿಡುವ’ ಎಂದು ಮಕ್ಕಳಿಗಷ್ಟೇ ಏಕೆ, ದೊಡ್ಡವರಿಗೂ ಅನ್ನಿಸದೇ ಇರಲಾರದು. ಮಾರನೆಯ ದಿನವೂ ಅದೇ ಮಾತು… ‘ಇವತ್ತೊಂದು ದಿನ’…!

ಕಷ್ಟಪಟ್ಟು ಮನಸ್ಸು ಗಟ್ಟಿಮಾಡಿಕೊಂಡು ಒಂದಿಷ್ಟು ಹೆಜ್ಜೆ ಮುಂದೆ ಹೋದರೂ ಮನಸ್ಸಿನಲ್ಲಿ ಅದೇ ಘಮಲು!

ಈ ಬೀದಿಯ ಸಹವಾಸವೇ ಬೇಡ ಎಂದು ಪಕ್ಕದ ಬೀದಿಗೆ ಹೋದರೆ ಕಣ್ಸೆಳೆಯುವ ಪಿಜ್ಜಾ, ಬರ್ಗರ್ ಹೌಸ್, ಎಲ್ಲವನ್ನೂ ಮರೆತು ಅವುಗಳನ್ನು ಆಸ್ವಾದಿಸುತ್ತಿರುವವರು… ವಾವ್! ‘ಇವತ್ತೊಂದು ದಿನ…!’

ಇನ್ನೊಂದು ಮಗ್ಗುಲಲ್ಲಿ, ಬಣ್ಣಬಣ್ಣದ ರಾಸಾಯನಿಕ ಮಿಶ್ರಣ ಮಾಡಿ, ಅದಕ್ಕೊಂದಿಷ್ಟು ಡೆಕೊರೇಷನ್ ಮಾಡಿ, ಪರಿಮಳಯುಕ್ತ ಪದಾರ್ಥ ಸಿಂಪಡಿಸಿ, ಮತ್ತೆ ಮತ್ತೆ ತಿನ್ನಬೇಕು ಎನಿಸುವ ಟೇಸ್ಟಿಂಗ್ ಪೌಡರ್ ಹಾಕಿ ಇಟ್ಟಿರುವ ಬಗೆಬಗೆಯ ಕುರುಕಲು ತಿಂಡಿಗಳು…!

ಮನಸ್ಸು ಇನ್ನಷ್ಟು ಗಟ್ಟಿಮಾಡಿಕೊಂಡು ಮನೆಗೆ ಹೋಗಿ ಮೊಬೈಲ್ ತೆರೆದರೆ, ಬಾಯಲ್ಲಿ ನೀರೂರಿಸುವ ತಿಂಡಿಗಳ ಜಾಹೀರಾತುಗಳು, ಪಕ್ಕದಲ್ಲಿಯೇ ‘ಈಗಲೇ ಆನ್​ಲೈನ್​ನಲ್ಲಿ ಆರ್ಡರ್ ಮಾಡಿ’ ಎಂದು ಕಣ್ಣುಕುಕ್ಕಿಸುವಂತೆ ಕಾಣುವ ಫಲಕಗಳು!

ಎತ್ತ ಸಾಗಿದರೂ ಈಗ ಜಂಕ್​ಫುಡ್​ಗಳದ್ದೇ ಕಾರುಬಾರು. ಅಲ್ಪ ಅವಧಿಯಲ್ಲಿಯೇ ಸಾವಿರಾರು ಕೋಟಿ ಜನರನ್ನು ತನ್ನ ಜಾಲದೊಳಕ್ಕೆ ಬೀಳಿಸಿಕೊಂಡಿರುವ ಜಂಕ್​ಫುಡ್​ಗಳ ಸವಿ ಅದೆಷ್ಟು ಅಪಾಯಕಾರಿ ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಮಕ್ಕಳ ಮೇಲೆ ಇವು ಬೀರುವ ಗಂಭೀರ ಪರಿಣಾಮವೇನು ಎಂಬುದು ಕ್ಯಾನ್ಸರ್, ಡಯಾಬಿಟಿಸ್ ಕೇಂದ್ರಗಳಿಗೆ ಹೋಗಿ ನೋಡಿದರೆ ತಿಳಿಯುತ್ತದೆ!

ಡಯಾಬಿಟಿಸ್, ಹೃದ್ರೋಗ, ಕ್ಯಾನ್ಸರ್ ಮಾತ್ರವಲ್ಲದೆ ರಕ್ತಹೀನತೆ, ರಕ್ತದೊತ್ತಡ, ಅತಿಸಾರ, ವಾಂತಿ, ಹೊಟ್ಟೆಯಲ್ಲಿ ಹುಳು, ಜಾಂಡೀಸ್, ಬೊಜ್ಜು, ಗ್ಯಾಸ್ಟ್ರಿಕ್, ಅಜೀರ್ಣ, ಉಸಿರಾಟದ ತೊಂದರೆ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಈ ಆಹಾರಗಳು ಎಡೆಮಾಡುತ್ತವೆೆ. ಇವುಗಳಲ್ಲಿ ಹೆಚ್ಚಾಗಿ ಬಳಸುವ ವಿನೆಗರ್ ಮಿದುಳಿನ ಕೋಶಗಳನ್ನು ಕೊಲ್ಲುತ್ತದೆ ಎನ್ನುವುದು ಈಗಾಗಲೇ ಸಾಬೀತಾಗಿದೆ.

ಶಾಲೆಯ ಸುತ್ತ ಜಾಹೀರಾತು ನಿಷಿದ್ಧ

ಶಾಲಾ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಜಂಕ್ ಫುಡ್​ಗೆ ಸಂಬಂಧಿಸಿದ ಯಾವುದೇ ಜಾಹೀರಾತನ್ನು ಶಾಲೆಯ ಆವರಣದ 50 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ ಮಾಡಬಾರದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ಇದೇ 16ರಂದು ಶಿಫಾರಸು ಮಾಡಿದೆ. 2015ರಲ್ಲಿ ದೆಹಲಿ ಹೈಕೋರ್ಟ್ ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಇಂಥದ್ದೊಂದು ಶಿಫಾರಸು ಮಾಡಲಾಗಿದ್ದು, ಇದನ್ನು ಅನುಮೋದನೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕಳುಹಿಸಲಾಗಿದೆ.

1.1 ಕೋಟಿ ಜನರ ಸಾವು

ಅಮೆರಿಕದ ಇನ್​ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಆಂಡ್ ಇವ್ಯಾಲ್ಯುಯೇಷನ್ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಜಂಕ್​ಫುಡ್​ನಿಂದ ಸಾಯುತ್ತಿರುವವರ ಸಂಖ್ಯೆ ಧೂಮಪಾನಿಗಳ ಸಾವಿನ ಸಂಖ್ಯೆಗಿಂತಲೂ ಮಿಗಿಲಾಗಿದೆ. ತಂಬಾಕು ಪದಾರ್ಥಗಳ ಸೇವನೆಯಿಂದ ಕಳೆದ ವರ್ಷ ಜಗತ್ತಿನಾದ್ಯಂತ 80 ಲಕ್ಷ ಜನರು ಸತ್ತಿದ್ದರೆ, ಅತಿಯಾದ ಜಂಕ್​ಫುಡ್ ಸೇವನೆಯಿಂದ ಉಂಟಾದ ಮಾರಣಾಂತಿಕ ಕಾಯಿಲೆಗಳಿಂದ 1.1 ಕೋಟಿ ಜನ ಸತ್ತಿದ್ದಾರೆ. ಇವುಗಳ ಪೈಕಿ ಹೃದಯಾಘಾತದಿಂದ ಸತ್ತ ಯುವಕರ ಪ್ರಮಾಣವೇ ಹೆಚ್ಚು.

ಲಿಮಿಟ್​ನಲ್ಲಿದ್ದರೆ ಎಲ್ಲವೂ ಸರಿಯೇ

ಅತಿಯಾದರೆ ಅಮೃತವೂ ವಿಷವಲ್ಲವೇ? ಹಾಗೆನೇ ಜಂಕ್​ಫುಡ್ ಕೂಡ. ಅತಿಯಾದರೆ ವಿಷವಾಗುತ್ತದೆ. ನನಗೆ ಎಲ್ಲಾ ರೀತಿಯ ಕುರುಕಲು ತಿಂಡಿಗಳು ಇಷ್ಟವೇ. ಹಾಗೆಂದು ಅತಿಯಾಗಿ ಯಾವುದನ್ನೂ ತಿನ್ನಲಾರೆ. ಎಲ್ಲವೂ ಲಿಮಿಟ್​ನಲ್ಲಿಯೇ ಇರುತ್ತದೆ. ಹಾಗೆಂದು ಚೆನ್ನಾಗಿ ತಿಂದು ಯಾವುದೇ ಕೆಲಸ ಮಾಡದೇ ಕುಳಿತುಕೊಳ್ಳಬಾರದು. ನಾನು ನಿತ್ಯವೂ ಚೆನ್ನಾಗಿ ವರ್ಕ್​ಔಟ್ ಮಾಡುತ್ತೇನೆ. ಇದರಿಂದ ಜಂಕ್​ಫುಡ್​ನ ಕೆಟ್ಟ ಪರಿಣಾಮ ನನ್ನ ಆರೋಗ್ಯದ ಮೇಲೆ ಅಷ್ಟು ಪರಿಣಾಮ ಬೀರುವುದಿಲ್ಲ. ವ್ಯಾಯಾಮ, ಯೋಗ ಚೆನ್ನಾಗಿ ಮಾಡುತ್ತಿರುವುದರಿಂದಲೇ ಇಂಥ ಆರೋಗ್ಯ ಪಡೆಯಲು ಸಾಧ್ಯವಾಗಿದೆ. ಅನಾರೋಗ್ಯಕರ ಆಹಾರ ತಿಂದು ಸುಮ್ಮನೆ ಕುಳಿತುಕೊಂಡರೆ ಸಹಜವಾಗಿ ಕಾಯಿಲೆಗಳು ಸುತ್ತಿಕೊಳ್ಳುತ್ತವೆ. ನಮ್ಮ ದೇಹದ ಬಗ್ಗೆ ನಮಗೆ ಅರಿವಿರಬೇಕು. ಏನನ್ನೇ ಆಗಲಿ ಎಷ್ಟು ಬೇಕೋ ಅಷ್ಟನ್ನು ಸೇವಿಸಿ, ಅದಕ್ಕೆ ತಕ್ಕನಾಗಿ ವರ್ಕ್​ಔಟ್ ಮಾಡಿ.

| ಕಾವ್ಯಾ ಶೆಟ್ಟಿ ಚಿತ್ರ ನಟಿ

ಕತ್ತಲು ಓಡಿಸುವ ಪ್ರೋಗ್ರಾಂ ಹಾಕಿಕೊಳ್ಳಬೇಡಿ

ಅಹಾರದ ವಿಷಯದಲ್ಲಿ ಕನ್​ಫ್ಯೂಷನ್ನೇ ಜಾಸ್ತಿಯಾಗಿಬಿಟ್ಟಿದೆ. ಎಲ್ಲರೂ ಆಹಾರ ತಜ್ಞರೇ ಆಗಿರುವುದು ಇಂಥ ಅನಾರೋಗ್ಯಕರ ಆಹಾರ ಪದ್ಧತಿ ಹೆಚ್ಚಾಗಲು ಕಾರಣವಾಗಿದೆ. ಇದಕ್ಕೆ ಇಂಬು ಎಂಬಂತೆ, ಶಾಲೆಯಲ್ಲಿ ನ್ಯೂಟ್ರಿಷನ್ ಶಿಕ್ಷಣವೇ ನಮ್ಮಲ್ಲಿ ಇಲ್ಲ. ‘ಹಾಲು ಅನಾರೋಗ್ಯಕರ’ ಎಂದು ಗೂಗಲ್ ಮಾಡಿದರೆ ಸಾವಿರಾರು ಪುಟಗಳು ತೆರೆದುಕೊಳ್ಳುತ್ತವೆ, ‘ಹಾಲು ಆರೋಗ್ಯಕರ’ ಎಂದು ಟೈಪಿಸಿದರೂ ಅಷ್ಟೇ ಪುಟಗಳು ಬರುತ್ತವೆ. ಪರಿಸ್ಥಿತಿ ಹೀಗಿರುವ ಕಾರಣ, ಎಲ್ಲೆಲ್ಲೂ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಜಂಕ್​ಫುಡ್ ಮಾರಾಟದಿಂದ ವ್ಯಾಪಾರಸ್ಥರಿಗೆ ಲಾಭ ಹೆಚ್ಚಿಗೆ ಸಿಗುವ ಕಾರಣ, ನೀವು ಎಲ್ಲೇ ಹೋದರೂ ಅವೇ ಕಣ್ಣಿಗೆ ರಾರಾಜಿಸುತ್ತವೆ.

ಆದ್ದರಿಂದ ನಮ್ಮ ಸಂಸ್ಕೃತಿ, ಭೌಗೋಳಿಕ ಹಿನ್ನೆಲೆ ಇವುಗಳ ಆಧಾರದ ಮೇಲೆ ಯಾವ ಆಹಾರ ತಿನ್ನಬೇಕು ಎಂಬುದನ್ನು ಮಕ್ಕಳಿಗೆ ಕಲಿಸಿಕೊಡುವ ಅಗತ್ಯ ಇಂದು ತುಂಬಾ ಇದೆ. ಆ ದೇಶದವರು ತಿಂದರೂ ಸರಿ ಇರುತ್ತಾರೆ, ಇವರು ತಿಂದರೂ ಆರೋಗ್ಯವಂತರಾಗಿದ್ದಾರೆ ಎಂದು ಹೇಳುತ್ತಾ ಕೂತರೆ ಆಗುವುದಿಲ್ಲ. ನಮ್ಮ ಪ್ರದೇಶಕ್ಕೆ ತಕ್ಕನಾದ ಆಹಾರದ ಬಗೆಗಿನ ಅರಿವು ನಮಗಿರಬೇಕು. ‘ಇಫ್ ವಿ ಬ್ಯಾನ್ ಎ ಬುಕ್, ಎವ್ರಿಬಡಿ ವಿಲ್ ರೀಡ್’ (ಒಂದು ಪುಸ್ತಕ ಬ್ಯಾನ್ ಮಾಡಿದರೆ ಅದನ್ನೇ ಎಲ್ಲರೂ ಓದುತ್ತಾರೆ) ಎನ್ನುವ ಮಾತು ಮಕ್ಕಳ ವಿಷಯ ಬಂದಾಗ ನೆನಪಿಟ್ಟುಕೊಳ್ಳಬೇಕು. ‘ನೀನು ಇದನ್ನು ತಿನ್ನಲೇಬೇಡ’ ಎಂದು ಮಕ್ಕಳಿಗೆ ಹೇಳಿದರೆ ಮಕ್ಕಳು ಅದನ್ನೇ ತಿನ್ನುತ್ತಾರೆ.

ಆದ್ದರಿಂದ ಚಿಕ್ಕವರಿರುವಾಗಲೇ ಆಹಾರದ ರಸವೈವಿಧ್ಯವನ್ನು ಮಕ್ಕಳಿಗೆ ಪರಿಚಯಿಸುವ ಜವಾಬ್ದಾರಿ ಪಾಲಕರದ್ದು. ಒಳ್ಳೆಯ ಸಂಗೀತಗಾರನ ಬಳಿ ಹೋಗಿ, ದಯವಿಟ್ಟು ಒಂದೇ ಒಂದು ಕೆಟ್ಟ ಹಾಡನ್ನು ಹಾಡಿ ಎಂದರೆ ಆತ ಹಾಡಲು ಸಾಧ್ಯವೆ? ಇಲ್ಲವಲ್ಲ! ಹಾಗೆಯೇ ಬೆಳಕು ಬಂದರೆ ಕತ್ತಲು ತಂತಾನೇ ಓಡುತ್ತದೆ. ಅದರ ಬದಲು ‘ಕತ್ತಲು ಓಡಿಸುವ ಪ್ರೋಗ್ರಾಂ’ ಹಾಕಿ ಕೊಂಡರೆ ಅದು ಅಸಮಂಜಸ ಎನಿಸುವಂತೆ, ಮಕ್ಕಳಲ್ಲಿ ಕತ್ತಲು ಓಡಿಸುವ ಪ್ರೋಗ್ರಾಂ ಹಾಕಿಕೊಳ್ಳಬೇಡಿ. ‘ಬೆಳಕು’ ಯಾವುದು, ಒಳ್ಳೆಯ ಸಂಗೀತ (ಆಹಾರ) ಯಾವುದು ಎನ್ನುವುದನ್ನು ತೋರಿಸಿ.

| ಡಾ.ಕೆ.ಸಿ. ರಘು ಆಹಾರ ತಜ್ಞ

ಮನಸ್ಸು ಹೌದು, ತಲೆ ಬೇಡ

ನನಗೆ ಚಿಕ್ಕಂದಿನಿಂದಲೂ ಜಂಕ್​ಫುಡ್ ಎಂದರೆ ತುಂಬಾನೇ ಇಷ್ಟ. ಆದರೆ ಇದರಿಂದ ಆಗುವ ಗಂಭೀರ ಪರಿಣಾಮ ಕೇಳಿದಾಗ, ಬಿಡುವ ಮನಸ್ಸು ಮಾಡಿದೆ. ಹಾಗಂತ, ಚಾಕಲೇಟ್, ಐಸ್ಕ್ರೀಂ, ಚಿಕನ್ ಇಂಥವುಗಳನ್ನು ಒಂದೇ ಸಲಕ್ಕೆ ಬಿಡುವುದು ಸುಲಭ ಏನೂ ಆಗಿರಲಿಲ್ಲ. ಮನಸ್ಸನ್ನು ಸ್ಟ್ರಾಂಗ್ ಮಾಡಿಕೊಂಡೆ. ನಟಿ ಆದ ಮೇಲೆ ಫಿಟ್​ನೆಸ್ ಎನ್ನುವುದು ನನಗೆ ಮುಖ್ಯವಾಗಿ ಬೇಕೇ ಬೇಕಿತ್ತು. ಆದ್ದರಿಂದ ಆಹಾರದ ಮೇಲೆ ಕಂಟ್ರೋಲ್ ಇಡುವುದು ಮುಖ್ಯವಾಯಿತು. ಜಂಕ್​ಫುಡ್ ತಿನ್ನಬೇಕೆಂದು ತುಂಬಾ ಆಸೆಯಾದರೆ ಅದನ್ನು ಅಪರೂಪಕ್ಕೆ ತಿನ್ನುತ್ತೇನೆ. ಆದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಾರದು ಎಂದು ಅಷ್ಟೇ ವರ್ಕ್​ಔಟ್ ಕೂಡ ಮಾಡುತ್ತೇನೆ. ‘ನಿಮಗೆ ಏನಾದರೂ ತುಂಬಾ ತಿನ್ನಬೇಕು ಎಂದು ಅನಿಸುತ್ತಿದೆಯೇ? ಎಂದು ಯಾರಾದರೂ ಕೇಳಿದರೆ ಮನಸ್ಸು ‘ಹೌದು ಹೌದು’ ಅನ್ನುತ್ತಿದ್ದರೂ ತಲೆಯನ್ನು ‘ಇಲ್ಲ, ಇಲ್ಲ’ ಎನ್ನುವಂತೆ ಆಡಿಸಿದರೆ ಆ ತಿನಿಸು ತಿನ್ನಲು ಮನಸ್ಸಾಗುವುದಿಲ್ಲ’ ಎಂದು ನಮ್ಮ ಗುರುಗಳೊಬ್ಬರು ಹೇಳಿದ ಮಾತನ್ನು ನಾನೂ ಪಾಲಿಸುತ್ತಿದ್ದೇನೆ. ಈ ಮಾತು ಆಹಾರದ ವಿಷಯದಲ್ಲಿ ನನ್ನನ್ನು ಇನ್ನಷ್ಟು ಸ್ಟ್ರಾಂಗ್ ಮಾಡಿದೆ.

| ಹರ್ಷಿಕಾ ಪೂಣಚ್ಚ ಚಿತ್ರ ನಟಿ

ತಾಯಂದಿರು ಹುಷಾರಾಗಬೇಕು

ಮಕ್ಕಳ ಆಹಾರ ಪದ್ಧತಿಗೆ ಬ್ರೇಕ್ ಹಾಕುವಲ್ಲಿ ಅಮ್ಮಂದಿರ ಪಾತ್ರ ಬಲುಮುಖ್ಯ. ಹೆಚ್ಚಿನ ಶಾಲೆಗಳಲ್ಲಿ ಲಂಚ್ ಟೈಂ ಮೊದಲು ಸ್ನಾ್ಯಕ್ಸ್ ಗಾಗಿ ಷಾರ್ಟ್ ಬ್ರೇಕ್ ಇರುತ್ತದೆ. ಆಗ ಬಹುತೇಕ ಮಕ್ಕಳ ಟಿಫನ್ ಬಾಕ್ಸ್​ನಲ್ಲಿ ಚಿಪ್ಸ್, ಬಿಸ್ಕೆಟ್ಸ್, ಕಪ್​ಕೇಕ್ ಇದೇ ರೀತಿಯ ಜಂಕ್​ಫುಡ್​ಗಳೇ ಇರುತ್ತವೆ. ಅದರ ಬದಲು ಬೇರೆಬೇರೆ ಬಣ್ಣಗಳ ಹಣ್ಣುಗಳನ್ನು ಹಾಕಿ, ಮೊಳಕೆ ಇರುವ ಕಾಳುಗಳನ್ನು ಹಾಕಿ. ಅವುಗಳಿಗೆ ಉಪು್ಪ, ಸ್ವಲ್ಪ ಖಾರ, ಸ್ವಲ್ಪ ಹುಳಿ ಸೇರಿಸಿ ಇನ್ನಷ್ಟು ಟೇಸ್ಟಿಯಾಗಿಸಬಹುದು. ಲಂಚ್ ಬಾಕ್ಸ್​ಗೆ ಬರೀ ಚಪಾತಿ ಹಾಕುವ ಬದಲು ಬೇರೆ ಬೇರೆ ರೀತಿಯ ಸೊಪು್ಪಗಳನ್ನು ಚಪಾತಿ ಹಿಟ್ಟಿಗೆ ಮಿಕ್ಸ್ ಮಾಡಿದರೆ ಮಕ್ಕಳಿಗೆ ಇಷ್ಟವಾಗುತ್ತದೆ. ಸಂಜೆ ಮಕ್ಕಳು ಶಾಲೆಯಿಂದ ಬಂದಾಗ ಹಸಿವಾಗಿರುತ್ತದೆ. ಆಗ ಜಂಕ್​ಫುಡ್​ಗಳನ್ನೇ ಅಮ್ಮಂದಿರು ನೀಡುತ್ತಾರೆ. ಅದರ ಬದಲು ಮನೆಯಲ್ಲಿಯೇ ಪಿಜ್ಜಾ, ಬರ್ಗರ್ ಮಾಡಿ ಇಡಬಹುದು. ಕೆಚಪ್ ಬದಲು ಟೊಮ್ಯಾಟೋ, ಕೊತ್ತಂಬರಿ ಸೊಪ್ಪಿನ ಚಟ್ನಿ ಇಡಬಹುದು, ಬಾಟಲ್​ಗಳಲ್ಲಿನ ಜ್ಯೂಸ್ ಬದಲು, ಮನೆಯಲ್ಲಿಯೇ ಜ್ಯೂಸ್ ರೆಡಿ ಮಾಡಿ ಇಡಬಹುದು, ಕ್ಯಾರೆಟ್, ಸೌತೆಕಾಯಿ ಹೆಚ್ಚಿಟ್ಟರೆ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಸಕ್ಕರೆ ಬದಲು ಜೇನುತುಪ್ಪ ಅಥವಾ ಬೆಲ್ಲ ನೀಡಿ.

ಕೆಲಸಕ್ಕೆ ಹೋಗುವ ಅಮ್ಮಂದಿರು ಹಿಂದಿನ ರಾತ್ರಿಯೇ ಪ್ಲಾ್ಯನ್ ಮಾಡಿ ಎಲ್ಲವನ್ನೂ ರೆಡಿ ಇಟ್ಟುಕೊಂಡರೆ ನಿಮ್ಮ ಆರೋಗ್ಯದ ಜತೆಗೆ, ಮಕ್ಕಳ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

| ಡಾ. ಹೇಮಾ ಅರವಿಂದ್ ಆಹಾರ ತಜ್ಞೆ

ಸುಸ್ತು ಮಾಡಿದ ಐಸ್ಕ್ರೀಂ

ಆಹಾರದ ವಿಷಯದಲ್ಲಿ ಯಾರನ್ನೂ ಜಾಸ್ತಿ ಫೋರ್ಸ್ ಮಾಡಲೇಬಾರದು. ಅದರಲ್ಲೂ ಮಕ್ಕಳಿಗೆ ಫೋರ್ಸ್ ಮಾಡಿದಷ್ಟೂ ಇನ್ನೂ ಹಠಕ್ಕೆ ಬಿದ್ದು ಅದನ್ನೇ ತಿನ್ನುತ್ತಾರೆ. ಅದರ ಬದಲು ಇಂಥ ಆಹಾರ ತಿಂದರೆ, ಮುಂದೆ ಏನಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು. ನನಗೂ ಅಷ್ಟೇ. ಚಿಕ್ಕಂದಿನಿಂದಲೂ ಜಂಕ್​ಫುಡ್​ಗಳ ಅಡ್ಡ ಪರಿಣಾಮಗಳ ಅರಿವು ಆಗಿದ್ದ ಕಾರಣ, ಈಗಲೂ ಅವು ಇಷ್ಟವಾಗುವುದಿಲ್ಲ. ತೀರಾ ಅಪರೂಪಕ್ಕೆ ಸ್ನೇಹಿತರು ತುಂಬಾ ಫೋರ್ಸ್ ಮಾಡಿದಾಗ ತಿನ್ನಲೇಬೇಕಾಗುತ್ತದೆ. ಕೂಡಲೇ ಬಿಸಿಬಿಸಿಯಾದ ನೀರು ಕುಡಿದುಬಿಡುತ್ತೇನೆ. ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿ ಸಂಗೀತ ಕಾರ್ಯಕ್ರಮವಿತ್ತು. ಬೇಸಿಗೆ ಕಾಲವದು. ದೆಹಲಿಯಲ್ಲಿ ಸಹಿಸಲಾರದ ಸೆಖೆ. ಒಂದು ದಿನ ಮುಂಚೆ ಹೋಗಿದ್ದೆ. ಸೆಖೆ ಇದ್ದುದರಿಂದ ಐಸ್ಕ್ರೀಂ ತಿಂದುಬಿಟ್ಟೆ. ಬೆಳಗಾಗುವುದರೊಳಗೆ ಗಂಟಲು ಕಟ್ಟಿ ಹೋಯಿತು. ಅಪರಿಚಿತ ಊರು ಬೇರೆ. ಅವರಿವರ ಬಳಿ ಕೇಳಿ ವೈದ್ಯರ ಬಳಿ ಹೋದರೆ, ಮೂರು ದಿನ ರೆಸ್ಟ್ ಬೇಕು ಗಂಟಲು ಸರಿಯಾಗಲು ಎಂದರು ವೈದ್ಯರು! ಅದೇ ರಾತ್ರಿ ಬೃಹತ್ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ಬೇರೆ. ನನ್ನ ಪರಿಸ್ಥಿತಿ ಯಾರಿಗೂ ಬೇಡವಾಯ್ತು. ರಾತ್ರಿಯವರೆಗೆ ಬಿಸಿ ನೀರು, ಅದೂ ಇದು ಅಂತೆಲ್ಲಾ ಉಪಚಾರ ಮಾಡಿಕೊಂಡೆ. ನನ್ನ ಅದೃಷ್ಟಕ್ಕೆ ರಾತ್ರಿಯ ವೇಳೆ ಗಂಟಲು ಸರಿಯಾಗಿ ಕಾರ್ಯಕ್ರಮವೂ ಯಶಸ್ವಿಯಾಯಿತು. ಅದೇ ಕೊನೆ. ಐಸ್ಕ್ರೀಂ ಸಹವಾಸಕ್ಕೂ ಹೋಗುವುದಿಲ್ಲ.

| ನವೀನ್ ಸಜ್ಜು ಗಾಯಕ

ಉತ್ತಮ ಆಟಗಾರನಾಗಲು ಕುರುಕಲು ತಿಂಡಿ ತ್ಯಜಿಸಿದೆ

ಮೊದಲು ನಾನು ಕುರುಕಲು ತಿಂಡಿಗಳನ್ನು ಚೆನ್ನಾಗಿಯೇ ತಿನ್ನುತ್ತಿದ್ದೆ. ಆದರೆ ಕಬಡ್ಡಿ ಆಟಗಾರ ಆಗಬೇಕು ಎಂದು ಯಾವಾಗ ಅಂದುಕೊಂಡೆನೋ ಆಗ ಇಂಥ ತಿನಿಸುಗಳಿಗೆ ಗುಡ್​ಬೈ ಹೇಳಲು ನಿರ್ಧರಿಸಿದೆ. ಆದರೆ ಎಷ್ಟೋ ವರ್ಷಗಳಿಂದ ಇಂಥ ತಿಂಡಿಗಳನ್ನು ತಿನ್ನುತ್ತಾ ಬಂದಿರುವ ಕಾರಣ, ಒಂದೇ ಸಲಕ್ಕೆ ಬಿಡುವುದು ಕಷ್ಟವೇ ಆಯಿತು. ‘ಉತ್ತಮ ಆಟಗಾರನಾಗಲು ಉತ್ತಮ, ಸದೃಢ ಆರೋಗ್ಯ ಮುಖ್ಯ. ಆದ್ದರಿಂದ ಇಂಥ ಆಹಾರಗಳನ್ನು ತಿನ್ನಬಾರದು’ ಎಂದು ನಮ್ಮ ಕೋಚ್ ಹೇಳುತ್ತಾ ಬಂದರು. ಇಂಥ ತಿಂಡಿಗಳನ್ನು ವರ್ಜಿಸಲೇ ಬೇಕು ಎಂದು ಮನಸ್ಸನ್ನು ಗಟ್ಟಿಮಾಡಿಕೊಂಡೆ. ಗುರಿಯತ್ತ ಚಿತ್ತ ಹರಿಸಿದೆ. ಈಗ ನನಗೆ ಇಂಥ ತಿಂಡಿಗಳನ್ನು ಕಂಡರೂ ತಿನ್ನಬೇಕು ಎನ್ನಿಸುವುದೇ ಇಲ್ಲ. ಯಾರಾದರೂ ನೀಡಲು ಬಂದರೂ ನಾನು ನಯವಾಗಿ ನಿರಾಕರಿಸುತ್ತೇನೆ.

| ಹರೀಶ್ ನಾಯ್ಕ ಕಬಡ್ಡಿ ಆಟಗಾರ

ಗುರಿ ಇಟ್ಟುಕೊಂಡರೆ ಮಾತ್ರ ಸಾಧ್ಯ

ಏನಾದರೊಂದು ಗುರಿ ಇಟ್ಟುಕೊಂಡರೆ ಮಾತ್ರ ಕೆಟ್ಟ ಆಹಾರದಿಂದ ದೂರ ಇರಲು ಸಾಧ್ಯ. ಸುಂದರವಾಗಿ, ಸ್ಲಿಮ್ ಆಗಿ ಕಾಣಬೇಕು, ಎಲ್ಲರೂ ನಮ್ಮನ್ನು ಹೊಗಳಬೇಕು, ಇಂಥದ್ದೊಂದು ಡ್ರೆಸ್ ನನಗೆ ಫಿಟ್ ಆಗಬೇಕು ಎನ್ನುವ ಆಸೆ ಬಹುತೇಕ ಎಲ್ಲರಿಗೂ ಇದ್ದೇ ಇರುತ್ತದೆ. ಅದನ್ನೇ ಗುರಿಯಾಗಿಸಿಕೊಂಡರೂ ಸಾಕು, ಜಂಕ್​ಫುಡ್ ತಿನ್ನುವ ಮನಸ್ಸಾದಾಗಲೆಲ್ಲಾ ಇದನ್ನು ನೆನಪು ಮಾಡಿಕೊಂಡರೆ ತಿನ್ನುವ ಆಸೆ ಆಗುವುದಿಲ್ಲ. ಅಪರೂಪಕ್ಕೆ ಆಸೆಯಾದರೆ ಆ ದಿನ ಮಾತ್ರ ಮನಃಪೂರ್ವಕವಾಗಿ ತಿಂದುಬಿಡಿ. ಇದು ರಿಪೀಟ್ ಆಗಬಾರದು. ಜಂಕ್​ಫುಡ್ ತಿನ್ನುವಾಗ ಎರಡು ತುತ್ತಿನ ನಡುವೆ ತುಂಬಾ ಅಂತರ ಕೊಟ್ಟು ತಿನ್ನಿ. ಉದಾಹರಣೆಗೆ, ಚಿಪ್ಸ್ ಎಂದುಕೊಂಡರೆ ಒಂದು ಚಿಪ್ಸ್ ಅನ್ನು ಬಾಯಲ್ಲಿ ಹಾಕಿ ತುಂಬಾ ಹೊತ್ತು ಜಗಿಯುತ್ತಾ ಬೇರೆ ಕೆಲಸ ಮಾಡುತ್ತಿರಬೇಕು. ತುಂಬಾ ಹೊತ್ತಿನ ನಂತರ ಮತ್ತೊಂದು ತಿನ್ನಬೇಕು. ಆಗ ತುಂಬಾ ತಿಂದಿದ್ದೇನೆ ಎನ್ನಿಸುವ ಜತೆಗೆ, ತಿಂದದ್ದು ಸಾಕು ಎನ್ನಿಸುತ್ತದೆ ಕೂಡ. ಪಿಜ್ಜಾ, ಬರ್ಗರ್, ಚಿಪ್ಸ್ ಇತ್ಯಾದಿಗಳನ್ನು ನಾನು ಮಕ್ಕಳಿಂದಲೇ ಮಾಡಿಸುತ್ತಿದ್ದೆ. ಮನೆಯಲ್ಲಿಯೇ ಉತ್ತಮ ಎಣ್ಣೆ, ಹಿಟ್ಟು ಇತ್ಯಾದಿಗಳನ್ನು ಬಳಸುವುದರಿಂದ ಅಷ್ಟು ಅಪಾಯಕಾರಿಯಾಗುವುದಿಲ್ಲ. ಜತೆಗೆ, ತಾವೇ ಮಾಡಿರುವ ತಿಂಡಿ ತಿನ್ನಲು ಮಕ್ಕಳಿಗೆ ಬಲುಖುಷಿ. ಆಗ ಅವರಿಗೆ ಹೊರಗಡೆಯ ತಿನಿಸುಗಳು ಬೇಕು ಎನಿಸುವುದಿಲ್ಲ.

| ಪ್ರತಿಭಾ ಸಂಶಿಮಠ ರೂಪದರ್ಶಿ

- Advertisement -

Stay connected

278,463FansLike
562FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...