Wednesday, 12th December 2018  

Vijayavani

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹಕ್ಕು ಮಂಡನೆ        ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಸಮಯ ಕೋರಿದ ಟಿಎಂಸಿ        ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ        ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೆ. ಚಂದ್ರಶೇಖರ್​ ರಾವ್​       
Breaking News

ಜೀವವೈವಿಧ್ಯದ ಸೊಬಗು ಉರುಗ

Monday, 16.07.2018, 3:04 AM       No Comments

| ರಾಜು ಹೊಸಮನಿ ನರಗುಂದ(ಗದಗ)

ಹಾವೆಂದರೆ ಭಯದಿಂದ ಮಾರುದೂರ ಓಡುವ ಮನುಷ್ಯ, ಕಲ್ಲುನಾಗರಕ್ಕೆ ಭಕ್ತಿಯಿಂದ ಹಾಲೆರೆಯುತ್ತಾನೆ. ಪುರಾಣಗಳಲ್ಲಿ ಬರುವ ರೋಚಕ ಸಂಗತಿಗಳು, ಸಿನಿಮಾ-ಸೀರಿಯಲ್​ಗಳಲ್ಲಿ ತೋರಿಸುವ ವಿಜೃಂಭಿತ ದೃಶ್ಯಗಳಿಂದ ಹಾವುಗಳು ಜನರ ದೃಷ್ಟಿಯಲ್ಲಿ ಭಯಂಕರ ಜೀವಿಯಾಗಿ ಉಳಿದಿವೆ. ಆದರೆ, ಉರಗಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳಿಗೆ ತೊಂದರೆಯಾದರಷ್ಟೇ ತಿರುಗಿ ಬೀಳುತ್ತವೆ. ಅಂಥ ಹಾವುಗಳ ರಕ್ಷಣೆಗಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 16ರಂದು ‘ವಿಶ್ವ ಹಾವುಗಳ ದಿನ’ ಆಚರಿಸಲಾಗುತ್ತದೆ. ಇದು 2013ರ ಜುಲೈ 16ರಿಂದ ಪ್ರಾರಂಭವಾಯಿತು.

3500ಕ್ಕೂ ಹೆಚ್ಚು ಪ್ರಭೇದ

ಪ್ರಪಂಚದಲ್ಲಿ 3,500ಕ್ಕೂ ಹೆಚ್ಚಿನ ಜಾತಿಯ ಹಾವುಗಳಿದ್ದು, ಶೇ. 90 ವಿಷರಹಿತ (ನಾನ್-ವೆನಮಸ್). ಉಳಿದ ಶೇ. 10 ಮಾತ್ರ ವಿಷಪೂರಿತ. ಸುಮಾರು 270ಕ್ಕೂ ಅಧಿಕ ಜಾತಿಯ ಹಾವುಗಳು ಭಾರತದಲ್ಲಿವೆ. ಅವುಗಳಲ್ಲಿ ಕಾಳಿಂಗ (ಕಿಂಗ್-ಕೋಬ್ರಾ), ನಾಗರಹಾವು (ಕೋಬ್ರಾ), ಕನ್ನಡಿ ಅಥವಾ ಕೊಳಕುಮಂಡಲ (ವೈಪರ್), ಕಡಂಬಳ ಅಥವಾ ಕೆಟ್ಟಹಾವು (ಕಾಮನ್-ಕ್ರೈಯೆಟ್) ವಿಷಕಾರಿ ಹಾವು (ಬಿಗ್-ಫೋರ್ ವೆನಮಸ್) ಪ್ರಮುಖವಾದವು. ತಿಳಿವಳಿಕೆಯ ಕೊರತೆ ಅಥವಾ ಅಜಾಗರೂಕತೆಯಿಂದಾಗಿ ಭಾರತದಲ್ಲಿ ಹಾವುಗಳ ಕಡಿತದಿಂದ ಪ್ರತಿ ವರ್ಷ 45,000ಕ್ಕೂ ಅಧಿಕ ಜನ ಮೃತಪಡುತ್ತಾರೆ. ಬಯಲುಸೀಮೆಯಲ್ಲಿ ನಾಗರಹಾವುಗಳ ಸಂತತಿ ಹೆಚ್ಚಾಗಿದ್ದು, ಜೀವವೈವಿಧ್ಯದ ಮಹತ್ವ ಮತ್ತು ಜಾಗೃತಿ ಕೊರತೆಯಿಂದಾಗಿ ನಿತ್ಯ ಸಾಯಿಸಲ್ಪಡುತ್ತಿವೆ. ಸಾಮಾನ್ಯವಾಗಿ ಕಂಡುಬರುವ ವಿಷಕಾರಿಯಲ್ಲದ ಹಾವುಗಳೆಂದರೆ ತೋಳ ಹಾವು (ವೂಲ್ಪ್ ಸ್ನೇಕ್), ಕೇರೆ ಹಾವು (ರ್ಯಾಟ್ ಸ್ನೇಕ್), ಹಸಿರು ಚೌಕಳಿ ಹಾವು (ಗ್ರೀನ್ ಕೀಲ್ ಬ್ಯಾಕ್ ಸ್ನೇಕ್), ಚೌಕಳಿ ಹಾವು (ಚೆಕ್ಕರ್ಡ್ ಕೀಲ್ ಬ್ಯಾಕ್), ಕುಕ್ರಿ ಹಾವು, ಆಭರಣ ಹಾವು (ಕಾಮನ್ ಟ್ರಿಂಕೆಟ್ ಸ್ನೇಕ್), ಹಸಿರು ಬಳ್ಳಿ ಹಾವು (ಗ್ರೀನ್​ವೈನ್ ಸ್ನೇಕ್), ಮಣ್ಣುಮುಕ್ಕ ಹಾವು (ಸ್ಯಾಂಡ್ ಬೊವಾ), ವ್ಹಿಟ್ಟಕರ್ಸ್ ಬೊವಾ, ಬೋಲನಾಥಿ ಹಾವು ಮತ್ತು ಬ್ಯಾಂಡೆಡ್ ರೇಸರ್.

ಶಾಲಾ ಕೊಠಡಿ, ಬಿಸಿಯೂಟ ಅಡುಗೆ ಕೋಣೆ, ಸರ್ಕಾರಿ ಕಚೇರಿ, ಮನೆಗಳಲ್ಲಿ ಇತ್ತೀಚೆಗೆ ಹಾವು ಕಾಣಿಸಿಕೊಳ್ಳುತ್ತಿವೆ. ಇದರಿಂದ ಮಕ್ಕಳು ತೊಂದರೆಗೊಳಗಾಗುವುದು ಹೆಚ್ಚು. ಆದಷ್ಟು ಶಾಲೆ, ಸರ್ಕಾರಿ ಕಚೇರಿ, ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ. ಹಾವು ಕಂಡರೆ ಭಯಪಡದೆ, ನುರಿತ ಉರಗ ಸಂರಕ್ಷಕರನ್ನು ಸಂರ್ಪಸಿ. ಅವುಗಳನ್ನು ಕೊಲ್ಲಬೇಡಿ. ಯಾವುದೇ ಹಾವು ಹಾಲು ಕುಡಿಯುವುದಿಲ್ಲ. ಮೂಢನಂಬಿಕೆಗೊಳಗಾಗಿ ಒತ್ತಾಯಪೂರ್ವಕವಾಗಿ ಹಾಲು ಕುಡಿಸಲು ಮುಂದಾಗಬೇಡಿ. ಇದರಿಂದ ಅಪಾಯವೇ ಹೆಚ್ಚು.

ಇಲಿಗಳ ಕಾಟಕ್ಕೆ ಮುಕ್ತಿ

ಸಾಮಾನ್ಯವಾಗಿ ಹಾವುಗಳು ಮನುಷ್ಯನ ವಾಸಸ್ಥಾನದಿಂದ ದೂರವಿರಲು ಇಷ್ಟಪಡುತ್ತವೆ. ಕಪ್ಪೆ ಅಥವಾ ಇಲಿಯನ್ನು ನುಂಗಿದಾಗ ಮಾತ್ರ ಮನೆ ಅಥವಾ ಪಾಳು ಬಿದ್ದ ಕಟ್ಟಡಗಳಲ್ಲಿ ಆಶ್ರಯ ಪಡೆಯುತ್ತವೆ. ಹಾವುಗಳು ಜೀವಿತಾವಧಿಯಲ್ಲಿ ಸಾವಿರಕ್ಕೂ ಹೆಚ್ಚು ಇಲಿಗಳನ್ನು ಭಕ್ಷಿಸುವ ಮೂಲಕ ಇಲಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗದಿಂದ ರಕ್ಷಿಸುತ್ತವೆ.

ಮರಿಗಳು ಡೇಂಜರ್!

ಜೂನ್​ನಿಂದ ಆಗಸ್ಟ್ ಅವಧಿಯಲ್ಲಿ ಹೆಚ್ಚಾಗಿ ಹಾವುಗಳು ಮೊಟ್ಟೆ ಇಡುತ್ತವೆ. ಪ್ರತಿ ಹಾವು ಅಂದಾಜು 40 ಮೊಟ್ಟೆ ಇಡುವುದರಿಂದ ಸಹಜವಾಗಿಯೇ ಮರಿ ಹಾವುಗಳು ಮಳೆ ನೀರಿಗೆ ಜನವಸತಿ ಕಡೆಗೆ ಬರುತ್ತವೆ. ಈ ವೇಳೆ ಅರಿವಿಲ್ಲದೆ ತುಳಿಯುವುದು, ಮಕ್ಕಳು ಆಟವಾಡಲು ಮುಂದಾಗುವುದರಿಂದ ಕಚ್ಚುವ ಸಾಧ್ಯತೆ ಇರುತ್ತದೆ. ಮರಿಗಳು ಕೂಡ ವಿಷ ಕಕ್ಕುತ್ತವೆ. ಹೀಗಾಗಿ ಮಳೆಗಾಲದ ಅವಧಿಯಲ್ಲಿ ಹಾವು ಕಚ್ಚಿದ ಪ್ರಕರಣ ಅಧಿಕವಾಗುತ್ತವೆ ಎನ್ನುತ್ತಾರೆ ಉರಗತಜ್ಞ ಪ್ರಸನ್ನ ಕುಮಾರ್.

ಶೇ. 90ರಷ್ಟು ಹಾವುಗಳು ವಿಷ ಕಕ್ಕುವುದಿಲ್ಲ. ಹಾಗಂತ ಕಡೆಗಣಿಸಬಾದರು. ಪ್ರಾಥಮಿಕ ಚಿಕಿತ್ಸೆ ಪಡೆದು ಆದಷ್ಟು ಬೇಗ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು.

| ಪ್ರಸನ್ನ ಕುಮಾರ್ ಉರಗತಜ್ಞ ಬೆಂಗಳೂರು

ಹಾವು ಕಡಿತಕ್ಕೀಡಾದವರಿಗೆ ನೀಡುವ ಆಂಟಿ ಸ್ನೇಕ್ ವೆನಮ್ ಅಗತ್ಯ ಪ್ರಮಾಣದಲ್ಲಿ ಸದ್ಯ ಲಭ್ಯವಿದೆ. ಮುಂದೆ ಕೂಡ ಕೊರತೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಆನ್​ಲೈನ್​ನಲ್ಲಿ ಸಹ ಮಾರಾಟ ವ್ಯವಸ್ಥೆ ಮಾಡಲಾಗಿದೆ.

| ಡಾ. ಲತಾ ಪ್ರಮೀಳಾ ಮುಖ್ಯ ಮೇಲ್ವಿಚಾರಕರು ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್


ಮಳೆ ಅಬ್ಬರಕ್ಕೆ ಹಾವಳಿ

| ವರುಣ ಹೆಗಡೆ ಬೆಂಗಳೂರು

ಕಾನನದಲ್ಲಿ ನೆಲೆಯೂರಿದ್ದ ಹಾವುಗಳು ಮಳೆ ಅಬ್ಬರಕ್ಕೆ ಜನವಸತಿ ಪ್ರದೇಶದ ಕಡೆ ಮುಖ ಮಾಡಿರುವುದು ಆತಂಕದ ವಾತಾವರಣ ಸೃಷ್ಟಿಸಿದೆ. ವರ್ಷದ ಆರಂಭದಲ್ಲೇ 3,070 ಮಂದಿ ಹಾವುಕಡಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.18 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಮೇನಲ್ಲಿ 863 ಮಂದಿಗೆ ಕಚ್ಚಿದ್ದು, ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯದ ಆಸ್ಪತ್ರೆಗಳಲ್ಲಿ ಹಾವಿನ ವಿಷಕ್ಕೆ ಔಷಧಗಳ ಕೊರತೆ ಎದುರಾಗಿರುವುದು ಕಡಿತಕ್ಕೆ ಒಳಗಾದವರಿಗೆ ಮೃತ್ಯು ಭಯ ಹೆಚ್ಚುವಂತೆ ಮಾಡಿದೆ.

ಬೆನ್ನು ಬಿಡದ ಹಾವು: ಹಾವಿನ ಕಡಿತ ಪ್ರಕರಣದಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, 993 ಮಂದಿಗೆ ಕಚ್ಚಿದೆ. ಮೂವರು ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 768 ಮಂದಿಯಲ್ಲಿ ನಾಲ್ವರು, ಕಲಬುರಗಿಯಲ್ಲಿ 459ರಲ್ಲಿ 9 ಮಂದಿ ಅಸುನೀಗಿದ್ದಾರೆ. ಮೈಸೂರು (768-4 ಸಾವು), ಶಿವಮೊಗ್ಗ (288-1 ಸಾವು) ಹಾಸನ (202) ಹಾಗೂ ಹಾವೇರಿ (202)ಯಲ್ಲಿ ಅಧಿಕ ಹಾವು ಕಡಿತ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಹಾಗೂ ತುಮಕೂರಿನಲ್ಲಿ ತಲಾ 2, ಕೊಡಗು, ಉಡುಪಿ, ರಾಯಚೂರು, ಉ.ಕನ್ನಡ ಹಾಗೂ ಗದಗದಲ್ಲಿ ತಲಾ ಒಬ್ಬರು ಹಾವು ಕಚ್ಚಿ ಅಸುನೀಗಿದ್ದಾರೆ.

ತುರ್ತು ಶುಶ್ರೂಷೆ ಅಗತ್ಯ

ಕೆಲವೊಂದು ಹಾವುಗಳ ವಿಷ ಅಧಿಕವಾಗಿರುವ ಕಾರಣ ತಕ್ಷಣ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ 2-3 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ನೀಡಬೇಕು. ಕಚ್ಚಿದಾಗ ಆಂಟಿ ಸ್ನೇಕ್​ವೆನಮ್ ನೀಡಬೇಕು. ಬಹುತೇಕ ಸಂದರ್ಭದಲ್ಲಿ ಹಾವಿನ ವಿಷ ದೇಹದಲ್ಲಿ ಹರಡಿ ಸಾಯುವುದಕ್ಕಿಂತ, ಕಚ್ಚಿದ ಆಘಾತಕ್ಕೆ ಅಥವಾ ವಿಷಕ್ಕೆ ಪ್ರತಿರೋಧಕವಾಗಿ ನೀಡುವ ಚುಚ್ಚುಮದ್ದಿನ ಅಡ್ಡ ಪರಿಣಾಮದಿಂದಲೂ ಸಾವು ಸಂಭವಿಸುವ ಸಾಧ್ಯತೆಗಳಿರುತ್ತವೆ. ಮುಖ್ಯವಾಗಿ ಕಚ್ಚಿದ ಹಾವು ವಿಷಕಾರಿ ಆಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

ಜೀವ ಉಳಿಸುವ ಪ್ರಥಮ ಚಿಕಿತ್ಸೆ

ಹಾವು ಕಡಿತಕ್ಕೆ ಒಳಗಾದ ಜಾಗದ 5ರಿಂದ 8 ಇಂಚು ಮೇಲ್ಭಾಗ, ಕೆಳಭಾಗದಲ್ಲಿ ಬಟ್ಟೆ ಅಥವಾ ಹಗ್ಗದಿಂದ ಬಿಗಿಯಾಗಿ ಕಟ್ಟುವ ಮೂಲಕ ವಿಷ ದೇಹವ್ಯಾಪಿ ಸಂಚರಿಸುವುದಕ್ಕೆ ತಡೆಯೊಡ್ಡಲು ಸಾಧ್ಯ. ಬಳಿಕ ಕಚ್ಚಿದ ಜಾಗದಲ್ಲಿ ವಿಷಯುಕ್ತ ಕಪು್ಪ ರಕ್ತ್ತನ್ನು ಹೊರಹಾಕಬೇಕು. ನಂತರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು.

ಔಷಧ ಕೊರತೆ

ಹೆಚ್ಚಾಗಿ ಹಾವು ಕಡಿತಕ್ಕೆ ಒಳಪಡುವವರು ಬಡ ಕೃಷಿ ಕಾರ್ವಿುಕರು. ಸಹಜವಾಗಿ ಇವರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ತೆರಳುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಆಂಟಿ ಸ್ನೇಕ್ ವೆನಮ್ ಲಸಿಕೆ ಕೊರತೆ ಇದೆ. ಸದ್ಯ ರಾಜ್ಯದಲ್ಲಿ 31,765 ಇಂಜೆಕ್ಷನ್ ಮಾತ್ರ ಲಭ್ಯವಿದೆ. ಕುದುರೆ ರಕ್ತದ ಮೂಲಕ ಆಂಟಿ ಸ್ನೇಕ್ ವೆನಮ್ ತಯಾರಿಸಲಾಗುತ್ತದೆ.

Leave a Reply

Your email address will not be published. Required fields are marked *

Back To Top