More

    ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರ ನಿಧಿಗೆ 28 ಸಾವಿರ ರೂಪಾಯಿ ಪಾಕೆಟ್​ ಮನಿ ನೀಡಿದ ನಟಿ ಜೂಹಿ ಚಾವ್ಲಾ ಪುತ್ರ!

    ಮುಂಬೈ: ಹಿಂದೆಂದೂ ಕಾಣದ ಭೀಕರ ಕಾಡ್ಗಿಚ್ಚಿಗೆ ಕಾಂಗರೂ ನಾಡು ಆಸ್ಟ್ರೇಲಿಯಾ ತುತ್ತಾಗಿದೆ. ಲಕ್ಷಾಂತರ ಪ್ರಾಣಿಗಳ ಸಾವು, 25 ಜನರ ಪ್ರಾಣ ಹಾನಿ ಹಾಗೂ ಅನೇಕ ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಬಾಲಿವುಡ್​ ನಟಿ ಜೂಹಿ ಚಾವ್ಲಾ ಮಗ ನೆರವಿಗೆ ಧಾವಿಸಿ ಮಾದರಿಯಾಗಿದ್ದಾರೆ.

    ಜೂಹಿ ಚಾವ್ಲಾ ಮಗ ಅರ್ಜುನ್​ ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರ ನಿಧಿಗೆ 300 ಪೌಂಡ್​(ಅಂದಾಜು 28 ಸಾವಿರ ರೂ.) ಹಣವನ್ನು ನೀಡಿದ್ದಾರೆ. ಅದೂ ಕೂಡ ಕೂಡಿಟ್ಟಿದ್ದ ಪಾಕೆಟ್​ ಮನಿಯನ್ನು ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಜೂಹಿ ಚಾವ್ಲಾ, ಆಸ್ಟ್ರೇಲಿಯಾ ಕಾಡ್ಗಿಚ್ಚಿನಲ್ಲಿ 500 ಮಿಲಿಯನ್​ ಪ್ರಾಣಿಗಳು ಸಾವಿಗೀಡಾಗಿರುವ ಬಗ್ಗೆ ನನ್ನ ಮಗ ಹೇಳಿದ. ಬಳಿಕ ನಾವೇನು ಮಾಡುತ್ತಿದ್ದೇವೆ ಎಂದು ಪ್ರಶ್ನಿಸಿದ. ಕಾವೇರಿ ಕೂಗು ಯೋಜನೆಯಡಿ ನಮ್ಮ ದೇಶದಲ್ಲಿ ಗಿಡಗಳನ್ನು ನೆಡಲು ಸಹಾಯ ಮಾಡುತ್ತಿರುವುದಾಗಿ ಹೇಳಿದೆ. ಅದೇ ದಿನ ಸಂಜೆ 300 ಪೌಂಡ್​ ಪಾಕೆಟ್​ ಮನಿಯನ್ನು ಕಳುಹಿಸಿದ್ದಾಗಿ ಹೇಳಿದ. ಅದು ಒಳ್ಳೆಯ ಜಾಗಕ್ಕೆ ತಲುಪಿದೆ ಎಂದು ನಾನು ಭಾವಿಸಿದ್ದೇನೆ. ನಾನು ನಿಜಕ್ಕೂ ಸಂತಸಗೊಂಡಿದ್ದು, ದೇವರಿಗೆ ಕೃತಜ್ಞಳಾಗಿದ್ದೇನೆ ಎಂದು ಚಾವ್ಲಾ ತಿಳಿಸಿದ್ದಾರೆ.

    ಅಂದಹಾಗೆ ಅರ್ಜುನ್​ ಯುಕೆಯ ಬೋರ್ಡಿಂಗ್​ ಶಾಲೆಯಲ್ಲಿ ಓದುತ್ತಿದ್ದಾನೆ.

    ಮೂಲಗಳ ಪ್ರಕಾರ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿಗೆ 25 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ, ಬಿಲಿಯನ್​ ಡಾಲರ್​ನಷ್ಟು ನಷ್ಟ ಉಂಟಾಗಿದೆ. ಸದ್ಯ ಆಸ್ಟ್ರೇಲಿಯಾದ ಕೆಲವಡೆ ಮಳೆಯಾಗುತ್ತಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts