ರೇಪ್​, ಕೊಲೆ ಮಾಡುವುದಾಗಿ ಜೂ. ಎನ್​ಟಿಆರ್ ಅಭಿಮಾನಿಗಳಿಂದ ಬೆದರಿಕೆ: ನಟಿ ಮೀರಾ ಚೋಪ್ರಾ ದೂರು​

ಹೈದರಾಬಾದ್​: ನಟಿ ಮೀರಾ ಚೋಪ್ರಾ ಟಾಲಿವುಡ್​ ಸ್ಟಾರ್​ ಜೂನಿಯರ್​​ ಎನ್​ಟಿಆರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಟ್ರೋಲ್​ಗಳಿಗೆ ದಾಳವಾಗಿದ್ದಾರೆ. ಅಷ್ಟಕ್ಕೂ ಮೀರಾ ಮತ್ತು ಎನ್​ಟಿಆರ್​ ಫ್ಯಾನ್ಸ್​ ನಡುವೆ ನಡೆದಿದ್ದಾರೂ ಏನು ಎಂಬ ಕುತೂಹಲವಿದ್ದರೆ ಮುಂದೆ ಓದಿ…

ಇದನ್ನೂ ಓದಿ: VIDEO| ಚಿತ್ರರಂಗದಿಂದ ನಾಪತ್ತೆಯಾಗಿ ಟಿಕ್​ಟಾಕ್​​ನಲ್ಲಿ ಪತ್ತೆಯಾದ ನಟಿಯರಿವರು…!

ಇತ್ತೀಚೆಗಷ್ಟೇ ಮೀರಾ ಟ್ವಿಟರ್​ನಲ್ಲಿ ಆಸ್ಕ್​ ಮೀರಾ ಸೆಷೆನ್ (#AskMeera session) ಅಡಿಯಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಜೂನಿಯರ್​​ ಎನ್​ಟಿಆರ್​ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ಏನಾದರೂ ಹೇಳಿ ಎಂದು ಕೇಳಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ಮೀರಾ, ಅವರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅವರ ಅಭಿಮಾನಿಯಲ್ಲ ಎಂದು ಟ್ವೀಟ್​ ಮೂಲಕ ಉತ್ತರ ನೀಡಿದ್ದರು. ಇದೇ ವಿಚಾರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಕೆಲವು ಅಭಿಮಾನಿಗಳು ಮೀರಾ ಅವರ ಟ್ವೀಟ್​ ಅನ್ನು ಗಂಭೀರವಾಗಿ ತೆಗೆದುಕೊಂಡು ತೀರ ಕೆಟ್ಟದಾಗೆಲ್ಲ ಟ್ರೋಲ್​ ಮಾಡುತ್ತಿದ್ದಾರೆ. #AttentionB***hMeeraChopra ಎಂಬ ಹ್ಯಾಷ್​ಟ್ಯಾಗ್​ ಟ್ರೆಂಡ್​ ಆಗಿದ್ದು, ಅದರ ಮೂಲಕ ಬಹಳ ಕೆಟ್ಟದಾಗಿ ಕಮೆಂಟ್​ ಮಾಡುತ್ತಿದ್ದಾರೆ. ಕೆಲವರಂತೂ ಅತಿರೇಕಕ್ಕೆ ಹೋದಂತೆ ಮೀರಾರಿಗೆ ರೇಪ್​ ಮತ್ತು ಕೊಲೆ ಬೆದರಿಕೆಯನ್ನು ಸಹ ಹಾಕಿದ್ದಾರೆ. ಅಲ್ಲದೆ, ಅವರ ಕುಟುಂಬಕ್ಕೂ ಬೆದರಿಕೆಯೊಡ್ಡಿದ್ದಾರೆ.

https://www.instagram.com/p/B-rMhA6JhKK/

ಇದ್ಯಾವುದಕ್ಕೂ ಬಗ್ಗದ ಮೀರಾ ಇದೀಗ ಸೈಬರ್​ ಕ್ರೈಂ ತಜ್ಞರ ಮೊರೆ ಹೋಗಿದ್ದು, ಟ್ರೋಲಿಗರ ಬಾಯಿಗೆ ಬೀಗ ಜಡಿಯಲು ಹೈದರಾಬಾದ್​ ಸೈಬರ್​ ಕ್ರೈ ಪೊಲೀಸರಿಗೂ ದೂರು ನೀಡಿದ್ದಾರೆ. ತುಂಬಾ ಅಸಹ್ಯವಾಗಿ ಮಾಡಿರುವ ಕಮೆಂಟ್​ಗಳ ಸ್ಕ್ರೀನ್​ ಶಾಟ್​ ತೆಗೆದುಕೊಂಡಿರುವ ಮೀರಾ ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದೇ ವಿಚಾರವಾಗಿ ಜ್ಯೂನಿಯರ್​ ಎನ್​ಟಿಆರ್​ರನ್ನು ಟ್ಯಾಗ್​ ಮಾಡಿ ಟ್ವೀಟ್​ ಮಾಡಿರುವ ಮೀರಾ, ನಾನು ಹೆಚ್ಚು ಮಹೇಶ್​ ಬಾಬು ಅವರನ್ನು ಇಷ್ಟಪಡುತ್ತೇನೆಂಬ ಒಂದೇ ಕಾರಣಕ್ಕೆ ನನ್ನನ್ನು ವೇಶ್ಯೆ, ನೀಲಿ ಚಿತ್ರದ ನಾಯಕಿ ಹಾಗೂ ಹೆಣ್ಣು ನಾಯಿಯಂತೆಲ್ಲಾ ಕರೆಯುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ನಿಮ್ಮ ಅಭಿಮಾನಿಗಳು ನಮ್ಮ ಪಾಲಕರಿಗೂ ಸಹ ಕೆಟ್ಟ ಸಂದೇಶಗಳನ್ನು ಕಳುಹಿಸಿದ್ದಾರೆ. ಅಂತಹ ಅಭಿಮಾನಿಗಳಿಂದ ನೀವು ಯಶಸ್ವಿ ಸಾಧಿಸಿದ್ದೀರಿ ಎಂದು ಭಾವಿಸಿದ್ದೀರಾ? ನನ್ನ ಟ್ವೀಟ್ ಅನ್ನು ನೀವು ನಿರ್ಲಕ್ಷಿಸುವುದಿಲ್ಲ ಎಂದು ಭಾವಿಸಿದ್ದೇನೆ ಎಂದು ಮೀರಾ ಬರೆದುಕೊಂಡಿದ್ದಾರೆ.

https://www.instagram.com/p/B_owvOLJMTa/

ಮತ್ತೊಂದು ಟ್ವೀಟ್​ನಲ್ಲೂ ಎನ್​ಟಿಆರ್​ ಟ್ಯಾಗ್​ ಮಾಡಿ, ಯಾರೊಬ್ಬರ ಅಭಿಮಾನಿಯಾಗದಿರುವುದು ಅಪರಾಧ ಎಂದು ನನಗೆ ತಿಳಿದಿರಲಿಲ್ಲ. ಎಲ್ಲ ಯುವತಿಯರಿಗೆ ನಾನು ಗಟ್ಟಿಯಾಗಿ ಹೇಳುವುದೇನೆಂದರೆ, ನೀವೇನಾದರೂ ಎನ್​ಟಿಆರ್​ ಅಭಿಮಾನಿಯಾಗಿರದಿದ್ದರೆ, ನೀವು ಅತ್ಯಾಚಾರ, ಕೊಲೆ, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಬಹುದು. ನಿಮ್ಮ ಕುಟುಂಬವು ಸಹ ಕೊಲೆಯಾಗಬಹುದು. ಅವರ (ಅಭಿಮಾನಿಗಳು) ಆದರ್ಶದಿಂದ ಎನ್​ಟಿಆರ್​ ಹೆಸರನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. (ಏಜೆನ್ಸೀಸ್​)

https://www.instagram.com/p/CAUxg3Jpcvm/

Share This Article

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…