ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಝಡ್ ಕೆಟಗರಿ ಭದ್ರತೆ: ಗೃಹ ಸಚಿವಾಲಯ ನಿರ್ಧಾರ

ನವದೆಹಲಿ: ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರ ಜೀವಕ್ಕೆ ಅಪಾಯ ಇರುವ ಕಾರಣ, ಅವರಿಗೆ ಝಡ್ ಕೆಟಗರಿ ಭದ್ರತೆ ನೀಡಲು ಕೇಂದ್ರದ ಗೃಹ ಇಲಾಖೆ ನಿರ್ಧರಿಸಿದೆ.

ಇದರಂತೆ, ನಡ್ಡಾರಿಗೆ ಕೇಂದ್ರ ಮೀಸಲು ಪೊಲೀಸ್​ ಪಡೆ(ಸಿಆರ್​ಪಿಎಫ್​)ಯ ಕಮಾಂಡೋಗಳು ಸದಾ ಭದ್ರತೆ ಒದಗಿಸಲಿದ್ದಾರೆ. ಬಿಜೆಪಿಯ ಹಿರಿಯ ನೇತಾರ ನಡ್ಡಾರಿಗೆ ಜೀವ ಬೆದರಿಕೆ ಇದ್ದು, ಸಂಭಾವ್ಯ ಅಪಾಯ ತಡೆಯಲು ಸಚಿವಾಲಯ ಈ ನಿರ್ಧಾರ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಡ್ಡಾರಿಗೆ 35 ಕಮಾಂಡೋಗಳು ಭದ್ರತೆ ಒದಗಿಸಲಿದ್ದಾರೆ. 8-9 ಕಮಾಂಡೋಗಳು ನಡ್ಡಾ ಸಮೀಪವಿದ್ದು, ಭದ್ರತೆ ನೀಡುತ್ತಾರೆ. ಅವರ ಮನೆಗೂ ಬಿಗಿ ಬಂದೋಬಸ್ತ್​ ಇರಲಿದೆ. ದೇಶದಲ್ಲಿ ಎಲ್ಲೇ ಅವರು ಪ್ರಯಾಣಿಸಿದರೂ ಈ ಸೌಲಭ್ಯ ಸಿಗಲಿದೆ.

 

Leave a Reply

Your email address will not be published. Required fields are marked *