ಸುಮಲತಾ ಗೆಲುವಿಗೆ ಸಂತಸ, ಮಲ್ಲಿಕಾರ್ಜುನ ಖರ್ಗೆ, ದೇವೇಗೌಡ ಗೆಲ್ಲಬೇಕಾಗಿತ್ತು ಎಂದ ರವಿ ಬೆಳಗೆರೆ

ಬೆಂಗಳೂರು: ತುಂಬಾ ಘನತೆಯಿಂದ ನಡೆದುಕೊಂಡ ಸುಮಲತಾ ವಿಜಯಿಯಾಗಿದ್ದು, ಸಂತಸದ ವಿಷಯ. ದೇವೇಗೌಡರು ಮನೆಮಂದಿಯನ್ನೆಲ್ಲ ನಿಲ್ಲಿಸಿ ಅದ್ವಾನ ಮಾಡಿಕೊಂಡರು ಎಂದು ಪತ್ರಕರ್ತ, ಅಂಕಣಕಾರ ರವಿಬೆಳಗೆರೆ ಹೇಳಿದ್ದಾರೆ.

ದೇವೇಗೌಡ ಮತ್ತು ಖರ್ಗೆಯಂತ ಹಿರಿಯ ಮುತ್ಸದ್ಧಿಗಳು ಗೆಲ್ಲಬೇಕಾಗಿತ್ತು. ಪ್ರಜಾಪ್ರಭುತ್ವದಲ್ಲಿ ಇಂಥ ಕ್ಲೀನ್ ಸ್ವೀಪ್ಗಳು ಆತಂಕಕಾರಿ. ಸಮರ್ಥ ವಿರೋಧ ಪಕ್ಷವಿದ್ದರೆ ಮಾತ್ರ ದೇಶಕ್ಕೆ ಒಳ್ಳೆಯದು ಎಂದು ಹೇಳಿದರು.

ರೇವಣ್ಣನ ಮಗ ಪ್ರಜ್ವಲ್ ಹೋಗಿ ಪಾರ್ಲಿಮೆಂಟಿನಲ್ಲಿ ಏನುಮಾಡುತ್ತಾನೆ. ನೋಡುತ್ತಿದ್ದರೆ ದೇವೇಗೌಡರ ಕುಟುಂಬ ಶಾಶ್ವತವಾಗಿ ಒಡೆದುಹೋಯಿತಾ ಅನ್ನಿಸುತ್ತದೆ. ಅಲ್ಲಿ ಚಂದ್ರಬಾಬು ನಾಯ್ಡು ಧೂಳೆದ್ದು ಹೋದದ್ದು ಸಂತಸದ ಸಂಗತಿ. ಆದರೆ ಜಗನ್ ಸಾಧಿಸಿದ ಕ್ಲೀನ್ ಸ್ವೀಪ್ ಒಳ್ಳೆಯದಲ್ಲ. ವಿರೋಧ ಪಕ್ಷಗಳೇ ಇಲ್ಲದಿದ್ದರೆ ಏನು ಗತಿ ಎಂದು ಪ್ರಶ್ನಿಸಿದ್ದಾರೆ.

ಮೋದಿ ಗೆಲುವು ನಿಶ್ಚಿತವಿತ್ತು. ಅವರು ಸರ್ವಾಧಿಕಾರಿಯಾಗದಿದ್ದರೆ ಕ್ಷೇಮ. ನಿಚ್ಚಳ ಬಹುಮತ ಸಿಕ್ಕಿದ್ದು ಸಂತಸದ ವಿಷಯ. ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಪ್ರಸಾದ್ ಗೆದ್ದದ್ದು ಖುಷಿಯ ಸಂಗತಿ. ಕರ್ನಾಟಕದಲ್ಲಿ ಕಾಂಗ್ರೆಸ್ ಸತ್ತು ಹೋಗಿದೆ. ರಾಜ್ಯ ಸರ್ಕಾರದ ಗತಿ ಏನೋ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)

2 Replies to “ಸುಮಲತಾ ಗೆಲುವಿಗೆ ಸಂತಸ, ಮಲ್ಲಿಕಾರ್ಜುನ ಖರ್ಗೆ, ದೇವೇಗೌಡ ಗೆಲ್ಲಬೇಕಾಗಿತ್ತು ಎಂದ ರವಿ ಬೆಳಗೆರೆ”

  1. Such a Mature Note by Very Senior Journalist. Well said Sir !
    While rejoicing the victory of Mr. Narendra Modi, rightly said that a Credible Opposition is an Important element in a Democracy…!

  2. If these people start their family business, people will elect the person who does not have any family and think the nation as his family. The politicians are not kings… they are the representatives of the common people.

Leave a Reply

Your email address will not be published. Required fields are marked *