More

  ರಾಮೋತ್ಸವ ನೇರಪ್ರಸಾರ ವೀಕ್ಷಿಸಿದ ಸಚಿವ ಜೋಶಿ, ಗೊಂದಲದಲ್ಲಿರುವ ಕಾಂಗ್ರೆಸ್ ಎಂದು ಟೀಕೆ

  ಹುಬ್ಬಳ್ಳಿ: ವಿಶ್ವದೆಲ್ಲೆಡೆ ಶ್ರೀರಾಮನ ಆರಾಧನೆ ನಡೆದಿದೆ, ರಾಮಭಕ್ತರು ಉತ್ಸಾಹದ ಚಿಲುಮೆಯಾಗಿದ್ದಾರೆ, ನಮ್ಮ ಮನೆಗೇ ರಾಮ ಬಂದಿದ್ದಾನೆನೋ ಎನ್ನುವಷ್ಟು ಜನರು ಖುಷಿಯಾಗಿ ಸಂಭ್ರಮಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ನವರು ಈಗಲೂ ಗೊಂದಲದಲ್ಲಿ ತೇಲಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

  ಇಲ್ಲಿಯ ವೀರಾಪುರ ಓಣಿ ಗಡಿ ದುರ್ಗಮ್ಮನ ದೇವಸ್ಥಾನ ಆವರಣದಲ್ಲಿ ಸ್ಥಳಿಯರು ಏರ್ಪಡಿಸಿದ್ದ ರಾಮೋತ್ಸವದಲ್ಲಿ ಪಾಲ್ಗೊಂಡು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

  ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಸಲುವಾಗಿ 500 ವರ್ಷಗಳಷ್ಟು ಹಿಂದಿನಿಂದ ಹೋರಾಟ ನಡೆದಿತ್ತು. ಅತ್ಯಂತ ಸರಳ ಸುಸೂತ್ರವಾಗಿ ರಾಮನ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿದೆ. ಆ ದೇವರು ಸಹ ಒಳ್ಳೆಯ ಭಕ್ತನಿಗಾಗಿ ಕಾಯುತ್ತಿದ್ದ. ನರೇಂದ್ರ ಮೋದಿ ಅವರಂತಹ ಒಳ್ಳೆಯ ಭಕ್ತ ಸಿಕ್ಕ ಮೇಲೆಯೇ ಪ್ರಾಣ ಪ್ರತಿಷ್ಠಾಪನೆಯಾಗಿದೆ ಎಂದು ಬಣ್ಣಿಸಿದರು.

  ದೇಶವೇ ಇದನ್ನು ಸಂಭ್ರಮಿಸುತ್ತಿರುವಾಗ ಕರ್ನಾಟಕದಲ್ಲಿ ರಜೆ ನೀಡಬೇಕೋ ಬೇಡವೋ? ಎಂಬ ಗೊಂದಲದಲ್ಲಿ ರಾಜ್ಯ ಸರ್ಕಾರ ಮುಳುಗಿದೆ. ಕಾಂಗ್ರೆಸ್ ತುಷ್ಟೀಕರಣವೇ ಇದಕ್ಕೆ ಕಾರಣ.

  ಅಯೋಧ್ಯೆಗೆ ಹೋಗುವುದರ ಬಗ್ಗೆಯೂ ಅವರಲ್ಲಿ ಗೊಂದಲ ಇತ್ತು. ರಾಮ ಜನ್ಮಭೂಮಿ ಹೋರಾಟ ಆರಂಭವಾದಾಗಿನಿಂದಲೂ ಕಾಂಗ್ರೆಸ್ ಇಂತಹ ಸ್ಥಿತಿಯಲ್ಲಿದೆ. ಮೊದಲು ಅಯೋಧ್ಯೆಗೆ ಆಹ್ವಾನ ಪತ್ರಿಕೆ ಬಂದಿಲ್ಲ ಎಂದರು.

  ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ರ್ಖಗೆ ಅವರಿಗೆ ಆಹ್ವಾನ ನೀಡಲಾಗಿತ್ತು. ಆಹ್ವಾನ ಬಂದ ಮೇಲೆ “ನಾವು ಹೋಗಲ್ಲ’ ಎಂದರು. ಈಗ ರಜೆ ಕೊಡುವ ವಿಚಾರದಲ್ಲಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಕೇಳಿರಬಹುದು. ಅವರು ಬೇಡ ಅಂದಿದ್ದಕ್ಕೆ ಕೊಟ್ಟಿರಲಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು.

  ಸಿಎಂ ಸಿದ್ದರಾಮಯ್ಯ ಅವರು ಮೊದಲಿನಿಂದಲೂ ಹಿಂದು ವಿರೋಧಿ. ಈಗ ಮತಕ್ಕಾಗಿ ಅವರು ಅಯೋಧ್ಯೆಗೆ ಹೋಗುತ್ತೇನೆ ಎನ್ನುತ್ತಿದ್ದಾರೆ ಎಂದು ಜೋಶಿ ಟೀಕಿಸಿದರು.

  ಎಲ್ಇಡಿ ಪರದೆಯಲ್ಲಿ ವೀಕ್ಷಣೆ:
  ನಗರದ ವೀರಾಪುರ ಓಣಿ ಗಡಿ ದುರ್ಗಮ್ಮ ದೇವಸ್ಥಾನ ಆವರಣದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಸಚಿವ ಪ್ರಲ್ಹಾದ ಜೋಶಿ ಅವರು ಪೂಜೆ ಸಲ್ಲಿಸಿದರು. ಅಯೋಧ್ಯೆಯಲ್ಲಿ ನಡೆದ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದ ಎಲ್ಇಡಿ ಪರದೆಗೆ ಪುಷ್ಪಾರ್ಚನೆ ಮಾಡಿದರು. ನಂತರ ರಾಮಭಕ್ತರೊಂದಿಗೆ ಕಾರ್ಯಕ್ರಮ ವೀಸಿದರು.

  ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆಯ ಐತಿಹಾಸಿಕ ಸಮಾರಂಭವನ್ನು ಕಣ್ತುಂಬಿಕೊಂಡರು. ಕೋಟ್ಯಂತರ ಭಾರತೀಯರ ಶತಮಾನಗಳ ತಪಸ್ಸಿಗೆ ಶ್ರೀರಾಮ ಇಂದು ಒಲಿದಿದ್ದಾನೆ ಎಂದು ಜೋಶಿ ಸ್ಮರಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts