ಬಾರ್ಬಡೋಸ್: ನಾಯಕ ಜೋಸ್ ಬಟ್ಲರ್ (83 ರನ್, 45 ಎಸೆತ, 8 ಬೌಂಡರಿ, 6 ಸಿಕ್ಸರ್) ಬಿರುಸಿನಾಟದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ತಂಡ ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು 7 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಆಂಗ್ಲರು 2-0 ಮುನ್ನಡೆ ಸಾಧಿಸಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ವಿಂಡೀಸ್, ನಾಯಕ ರೋವ್ಮನ್ ಪೊವೆಲ್ (43 ರನ್, 41 ಎಸೆತ, 2 ಬೌಂಡರಿ, 2 ಸಿಕ್ಸರ್) ಆಸರೆಯಲ್ಲಿ 8 ವಿಕೆಟ್‌ಗೆ 158 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಬಟ್ಲರ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ 14.5 ಓವರ್‌ಗಳಲ್ಲಿ 3 ವಿಕೆಟ್‌ಗೆ 161 ರನ್‌ಗಳಿಸಿ ಗೆಲುವಿನ ಸಂಭ್ರಮ ಕಂಡಿತು. 4 ತಿಂಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದ ಬಟ್ಲರ್ ಮೊದಲ ಪಂದ್ಯದಲ್ಲಿ ಡಕೌಟ್ ಆಗಿ ನಿರಾಸೆ ಅನುಭವಿಸಿದ್ದರು. 2ನೇ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಎದುರಿಸಿದ ಮೊದಲ 10 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದ ಬಟ್ಲರ್ ನಂತರ 35 ಎಸೆತಗಳಲ್ಲಿ 80 ರನ್ ಕಸಿದರು.
ವೆಸ್ಟ್ ಇಂಡೀಸ್: 8 ವಿಕೆಟ್‌ಗೆ 158 (ಪೂರನ್ 14, ರೋಸ್ಟನ್ 13, ರೋವ್ಮನ್ 43, ರೋಮಾರಿಯೊ 22, ಪೋರ್ಡೆ 13*, ಲಿವಿಂಗ್‌ಸ್ಟೋನ್ 16ಕ್ಕೆ 2,ಸಕೀಬ್ 20ಕ್ಕೆ 2). ಇಂಗ್ಲೆಂಡ್: 14.5 ಓವರ್‌ಗಳಲ್ಲಿ 161 (ಸಾಲ್ಟ್ 0, ವಿಲ್ ಜ್ಯಾಕ್ಸ್ 38,ಬಟ್ಲರ್ 83*, ಲಿವಿಂಗ್‌ಸ್ಟೋನ್ 23*, ಬೆತೆಲ್ 3*, ರೋಮಾರಿಯೊ 42ಕ್ಕೆ 2). ಪಂದ್ಯಶ್ರೇಷ್ಠ: ಜೋಸ್ ಬಟ್ಲರ್.