ನಿರಾಳ ಭಾವದಲ್ಲಿ ಜೊಲ್ಲೆ ದಂಪತಿ, ಚುನಾವಣೆ ಚರ್ಚೆ

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರು ತಮ್ಮ ಧರ್ಮಪತ್ನಿ ಮತ್ತು ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಕ್ಕಳೊಂದಿಗೆ ಬುಧವಾರ ಬೆಳಗಿನ ಜಾವ ಯಕ್ಸಂಬಾದ ತಮ್ಮ ಾರ್ಮಹೌಸ್‌ನಲ್ಲಿ ಕೆಲ ಕಾಲ ವಿಶ್ರಾಂತ ಭಾವದಲ್ಲಿ ಕಾಲ ಕಳೆದರು.

ಬೆಳಗ್ಗೆ 7 ಗಂಟೆ ಹೊತ್ತಿಗೆ ಸುಮಾರು 2 ಕಿ.ಮೀ. ವಾಕಿಂಗ್ ಮುಗಿಸಿ ನಿವಾಸದಲ್ಲಿನ ಸದಸ್ಯರಾಗಿರುವ ಬಾತುಕೋಳಿ, ಸಾಕು ನಾಯಿ ಹಾಗೂ ಗೋವುಗಳ ಜತೆ ದಂಪತಿ ಮತ್ತು ಮಕ್ಕಳು ಕಾಲ ಕಳೆದರು.
ಬೆಳಗ್ಗೆ 9 ಗಂಟೆಯ ಬಳಿಕ ತಮ್ಮ ಾರ್ಮಹೌಸ್‌ಗೆ ಆಗಮಿಸಿದ ಕಾರ್ಯಕರ್ತರೊಂದಿಗೆ ಲೋಕಸಭೆ ಚುನಾವಣೆಯ ಕುರಿತು ಸಮಾಲೋಚನೆ ನಡೆಸಿದ ಅಣ್ಣಾಸಾಹೇಬ ಜೊಲ್ಲೆ, ಭರ್ಜರಿ ಮತದಾನ ಮತ್ತು ಬಿಜೆಪಿ ಪರ ಒಲವು ವ್ಯಕ್ತವಾಗಿರುವುದನ್ನು ತಿಳಿದು ಖುಷಿಪಟ್ಟರು.

ಲೋಕಸಭೆ ಚುನಾವಣೆ ಗೆದ್ದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಮಹದಾಸೆಯಿಮದ ಬಿಜೆಪಿ ಅಭ್ಯರ್ಥಿಯಾಗಿರುವ ನನ್ನ ಪರವಾಗಿ ಕ್ಷೇತ್ರದ ಮತದಾರರು ನಿಂತಿದ್ದಾರೆ. ಕಾರ್ಯಕರ್ತರು ಹಗಲಿರುಳು ಪ್ರಚಾರ ಮಾಡುವಲ್ಲಿ ಶ್ರಮಿಸಿದ್ದಾರೆ. ಪದಾಧಿಕಾರಿಗಳು ಮತ್ತು ಯುವ ಕಾರ್ಯಕರ್ತರ ಸೇವೆ ಇದರಲ್ಲಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು. ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಮತಗಟ್ಟೆಗಳಲ್ಲಿ ಶೇಕಡಾವಾರು ಮತದಾನದ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ವಿಜಯವಾಣಿ ಜತೆ ಮಾತನಾಡಿದ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ದೇಶದೆಲ್ಲೆಡೆ ಮೋದಿ ಸಾಧನೆ ಬಗ್ಗೆ ಮೆಚ್ಚುಗೆ ಇದೆ. ಬಿಜೆಪಿ ಪರ ಮತದಾರರಿಗೆ ಒಲವಿದೆ. ಹಾಗಾಗಿ ಅಣ್ಣಾಸಾಹೇಬರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕ್ಷೇತ್ರದಲ್ಲಿ ಜನ ಪರಿವರ್ತನೆ ಬಯಸಿ ಸ್ಪರ್ಧಿಸುವಂತೆ ನನ್ನನ್ನು ಪ್ರೋತ್ಸಾಹಿಸಿದರು. ಜನ ಬೆಂಬಲ ಇದ್ದರೆ ಗೆಲುವು ಸುಲಭವಾಗುತ್ತದೆ. ಕಮಲ ಅರಳುವುದು ಗ್ಯಾರಂಟಿ ಎಂದರು. ಕ್ಷೇತ್ರದಲ್ಲಿ ಕುಡಿಯುವ ನೀರು ಸಮಸ್ಯೆ, ರೈತರ ಆರ್ಥಿಕ ಪ್ರಗತಿಗೆ ಪೂರಕವಾಗುವ ಹಾಗೂ ಕೃಷಿ ಅಭಿವೃದ್ಧಿ ಸಮಸ್ಯೆ ಮತ್ತಿತರ ಹಲವು ಸವಾಲುಗಳಿವೆ.

ಈ ಸಮಸ್ಯೆಗಳಿಗೆ ಸ್ಪಂದಿಸಬೇಕು. ಚಿಕ್ಕೋಡಿ ಲೋಕಸಭೆ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿಸಬೇಕು ಎಂಬ ಸಂಕಲ್ಪ ನನ್ನದು ಎಂದರು. ಬೆಳಿಗ್ಗೆಯಿಂದ ಾರ್ಮಹೌಸಗೆ ಬಿಜೆಪಿ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಆಗಮಿಸಿ ತಮ್ಮ ಕ್ಷೇತ್ರದಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ಚರ್ಚಿಸಿದರು.