ಎಂ.ಕೆ.ಹುಬ್ಬಳ್ಳಿ: ಸಹಕಾರಿ ಕ್ಷೇತ್ರದಲ್ಲಿ ಜೊಲ್ಲೆ ದಂಪತಿಗಳು ತಮ್ಮದೆ ಆದ ಚಾಪು ಮೂಡಿಸಿದ್ದಾರೆ. ಸಹಕಾರಿ ಸಂಘ-ಸಂಸ್ಥೆ, ಶಿಕ್ಷಣ ಸಂಸ್ಥೆ ಸೇರಿ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದಾರೆ ಎಂದು ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಬೈಲಹೊಂಗಲ ರಸ್ತೆ ಪಕ್ಕದ ಶ್ರೀಶೈಲ ಗಣಾಚಾರಿ ಅವರ ಕಟ್ಟಡದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ 58ನೇ ಹುಟ್ಟುಹಬ್ಬದ ಪ್ರಯುಕ್ತ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ, ಯಕ್ಸಂಬಾದ 48ನೇ ನೂತನ ಶಾಖೆಯನ್ನು ಗುರುವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು. ದಕ್ಷ, ಪ್ರಾಮಾಣಿಕತೆಯ ಮೂಲಕ ಸಹಕಾರಿ ರಂಗದಲ್ಲಿ ಸಾಗಿರುವ ಜೊಲ್ಲೆ ಸಮೂಹ ಸಂಸ್ಥೆಗಳು, ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿವೆ. ಗ್ರಾಹಕರದಿಂದ ಪಡೆದ ಠೇವಣಿಗೆ ಅಗತ್ಯ ಭದ್ರತೆ ನೀಡುವ ಜತೆಗೆ ಬಡವರಿಗೆ ಆರ್ಥಿಕ ಸಹಕಾರ ನೀಡಿ, ಅವರನ್ನು ಬಲಪಡಿಸುತ್ತಿವೆ. ನೂತನವಾಗಿ ಆರಂಭಿಸಿರುವ ಈ ಶಾಖೆಯು ಪ್ರಗತಿ ಸಾಧಿಸಲಿ ಎಂದು ಹಾರೈಸಿದರು.
ಸಹಕಾರಿಯ ನಿರ್ದೇಶಕ ಕಲ್ಲಪ್ಪ ನಾಯ್ಕ ಮಾತನಾಡಿ, ಜ್ಯೋತಿ ಸಹಕಾರಿಯಿಂದ ಗ್ರಾಹಕರಿಗಾಗಿ ಹಲವಾರು ಉಪಯುಕ್ತ ಯೋಜನೆಗಳನ್ನು ಕಲ್ಪಿಸಲಾಗಿದ್ದು, ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು. ಪ್ರಧಾನ ವ್ಯವಸ್ಥಾಪಕ ವಿಜಯ ಕಟಕಬಾವಿ ಸಹಕಾರಿಯ ಎಲ್ಲ ಯೋಜನೆಗಳ ಬಗ್ಗೆ ವಿವರಿಸಿದರು.
ಸಂಸ್ಥೆಯ ನಿರ್ದೇಶಕ ಶ್ರೀಕಾಂತ ಚೌಗಲೆ, ಎನ್.ಸಿ.ಗಣಾಚಾರಿ, ಚಿನ್ನಪ್ಪ ಮುತ್ನಾಳ, ಜಿ.ಎಸ್.ಹಲಸಗಿ, ದೊಡ್ಡಪ್ಪ ಗಣಾಚಾರಿ, ಶಿವಾನಂದ ವಿಭೂತಿಮಠ, ಬಾಳಪ್ಪ ಮಾವಿನಕೊಪ್ಪ, ಮಹಾಂತೇಶ ಗಾಣಿಗೇರ, ರಾಜು ಬೆಂಡಿಗೇರಿ, ರುದ್ರಪ್ಪ ಕರವಿನಕೊಪ್ಪ, ವೇ.ಮೂ.ಶಿವಯ್ಯ ಮುಗದೈನವರಮಠ, ಶಾಖಾ ವ್ಯವಸ್ಥಾಪಕ ಸುರೇಶ ಮಠದ, ಬಾಲಕೃಷ್ಣ ಪೂಜೇರ, ವಿಜಯ ಪಾಟೀಲ, ಶಿವಾನಂದ ಮಾವಿನಕೊಪ್ಪ, ಬಸವರಾಜ ಗಣಾಚಾರಿ, ರುದ್ರಪ್ಪ ಸಂಗೊಳ್ಳಿ ಇತರರು ಇದ್ದರು.