ಸಿರಗುಪ್ಪ: ಅಪೌಷ್ಠಿಕ ಮುಕ್ತ ಭಾರತ ಮಾಡಲು ಗರ್ಭಿಣಿಯರು ಕೈಜೋಡಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಧೀಶ ಹಾಜಿ ಹುಸೇನ್‌ಸಾಬ್ ಯಾದವಾಡ ಹೇಳಿದರು.
ನಗರದ ಸಿಡಿಪಿಒ ಕಚೇರಿಯಲ್ಲಿ ಶಿಶು ಅಭಿವೃದ್ಧಿ ಯೋಜನೆ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಪೋಷಣ ಮಾಸಾಚರಣೆ, ಮಾತೃವಂದನಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ: ವೃದ್ಧೆಯ ಮಾಂಗಲ್ಯಸರ ಅಪಹರಣ
ಗರ್ಭಿಣಿಯರು ನಿತ್ಯ ಪೌಷ್ಠಿಕ ಸೇವಿಸುವುದರಿಂದ ಮಗು ಆರೋಗ್ಯವಾಗಿರಲು ಸಾಧ್ಯವಾತ್ತದೆ. ಪ್ರತಿ ದಿನ ಧ್ಯಾನ, ವ್ಯಾಯಾಮ ಮಾಡಬೇಕು. ಹಾಲು, ಮೊಸರು, ತುಪ್ಪ ಸೇವಿಸಬೇಕು. ಅಲ್ಲದೆ ಯಾರೂ ದುಶ್ಚಟಗಳಿಗೆ ಬಲಿಯಾಗಬಾರದು ಎಂದರು.
ಸಿಡಿಪಿಒ ಪ್ರದೀಪ್ ಕುಮಾರ್ ಮಾತನಾಡಿದರು. ಹಿರಿಯ ವಕೀಲ ಎನ್.ಅಬ್ದುಲ್‌ಸಾಬ್, ಟಿ.ವೆಂಕಟೇಶ, ಜಗದೀಶಸ್ವಾಮಿ, ರುದ್ರಗೌಡ. ಅಂಗನವಾಡಿ ಮೇಲ್ವಿಚಾರಕಿ ಉಮಾದೇವಿ, ಗಂಗಮ್ಮ ಅಂಗನವಾಡಿ ಕಾರ್ಯಕರ್ತರು, ಗರ್ಭಿಣಿಯರು ಇದ್ದರು.