ಸೊರಬ: ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದು ಚಿಂತಕ ರಾಜಪ್ಪ ಮಾಸ್ಟರ್ ಹೇಳಿದರು.
ತಾಲೂಕಿನ ಮಾವಲಿ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಂವಿಧಾನದ ಆಶಯದಂತೆ ಸಮಾಜದ ಪ್ರತಿಯೊಬ್ಬರೂ ನಡೆಯಬೇಕು. ಯುವಜನರು ಉತ್ತಮ ಮಾರ್ಗದಲ್ಲಿ ನಡೆಯುವ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.
ಕಾಲೇಜಿನ ಉಪನ್ಯಾಸಕ ಡಿ.ವಿ.ಚಿದಾನಂದ ಮಾತನಾಡಿ, ಯುವಜನರಿಗೆ ಆರೋಗ್ಯ, ಸ್ವಚ್ಛತೆ, ಶಿಕ್ಷಣದ ಅರಿವು ಮೂಡಿಸಲು ಎನ್‌ಎಸ್‌ಎಸ್ ಸಹಕಾರಿ ಎಂದರು. ಎನ್‌ಎಸ್‌ಎಸ್ ಅಧಿಕಾರಿ ಡಾ. ಉಮೇಶ್, ಉಪನ್ಯಾಸಕರಾದ ವಿ.ಚಿದಾನಂದ, ವೈ.ರವಿ, ವಿಜಯ್ ದಟ್ಟೇರ್, ರೇವಣಪ್ಪ, ಬಸವರಾಜ್, ಶಿವಕುಮಾರ್, ಶ್ರೀಕಾಂತ್, ಗುರುಪಾದಪ್ಪ ಇತರರಿದ್ದರು.