ಕಾಂಗ್ರೆಸ್​ ಶಾಸಕನಿಗೆ ಆಮಿಷ: ಜನಾರ್ದನ ರೆಡ್ಡಿ ಆಡಿಯೋ ಬಿಡುಗಡೆ!

<<ಆಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್​ ನಾಯಕ ವಿ.ಎಸ್​.ಉಗ್ರಪ್ಪ>>

ಬೆಂಗಳೂರು: ಶನಿವಾರ ಸಂಜೆ 4 ಗಂಟೆಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಇಂದು ಸುಪ್ರೀಂಕೋರ್ಟ್​ ಆದೇಶಿಸಿರುವ ಬೆನ್ನಲ್ಲೇ ರಾಜ್ಯದಲ್ಲಿ ಶಾಸಕರ ಕುದುರೆ ವ್ಯಾಪಾರ ಜೋರಾಗಿದ್ದು, ಬಿಜೆಪಿ ನಾಯಕ ಆಮಿಷವೊಡ್ಡಿದ್ದಾರೆನ್ನಲಾದ ಆಡಿಯೋ ಬಿಡುಗಡೆ ಮಾಡಲಾಗಿದೆ.

ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಕುದುರೆ ವ್ಯಾಪಾರದ ನೇತೃತ್ವ ವಹಿಸಿ ನಮ್ಮ ಶಾಸಕರನ್ನು ಕೊಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​ ನಾಯಕ ವಿ.ಎಸ್​.ಉಗ್ರಪ್ಪ ಆರೋಪಿಸಿದ್ದಾರೆ.

ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಕಾಂಗ್ರೆಸ್​ ಶಾಸಕ ದದ್ದಲ ಬಸನಗೌಡ ಅವರಿಗೆ ಆಮಿಷವೊಡ್ಡಿರುವ ಆಡಿಯೋವನ್ನು ಕೆಪಿಸಿಸಿ ಕಚೇರಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಇಷ್ಟು ವರ್ಷ ಏನ್​ ನೀನ್​ ಆಸ್ತಿ ಗೀಸ್ತಿ ಮಾಡಿದ್ದೀಯಾ ಅದರ ನೂರರಷ್ಟು ಮಾಡಬಹುದು. ಕೆಟ್ಟ ಗಳಿಗೆಯನ್ನೆಲ್ಲ ಮರೆತುಬಿಡು. ಈಗ ನನ್ನ ಟೈಮು ಚೆನ್ನಾಗಿ ಶುರುವಾಗಿದೆ. ನಿನಗೆ ಯಾವ ಪದವಿ ಬೇಕು? ಏನು ಬೇಕೆಂಬುದನ್ನು ರಾಷ್ಟ್ರೀಯ ನಾಯಕರ ಜತೆ ಕುಳಿತು ಒನ್​ ಟು ಒನ್​ ಮಾತನಾಡಿಸುವಂತೆ ನಾನು ಮಾಡುತ್ತೇನೆ ಎಂದು ಜನಾರ್ದನ ರೆಡ್ಡಿ ಬಸನಗೌಡ ಅವರ ಜತೆ ಮಾತನಾಡಿದ್ದಾರೆನ್ನಲಾದ ಸಂಗತಿ ಆಡಿಯೋದಲ್ಲಿದೆ.

Leave a Reply

Your email address will not be published. Required fields are marked *