ಸಿನಿಮಾ

ಸ್ಟಾರ್​ ವೇಗಿ ಐಪಿಎಲ್​ನಿಂದ ಔಟ್​!

ಮುಂಬೈ: ಪ್ರಸಕ್ತ ಸಾಲಿನ ಐಪಿಎಲ್ ನಿರ್ಣಾಯಕ ಘಟ್ಟವನ್ನು ತಲುಪಿದ್ದು, ಈಗಾಗಲೇ ಹಲವು ತಂಡಗಳು ಪ್ಲೇಆಫ್​ ಪ್ರವೇಶಿಸುವ ಕನಸು ಕಾಣುತ್ತಿವೆ. ಆದರೆ ಇಂಗ್ಲೆಂಡ್​​ನ ವೇಗದ ಬೌಲರ್ ಜೋಪ್ರಾ ಆರ್ಚರ್​ ​ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್​ ತಂಡಕ್ಕೆ ಹಿನ್ನಡೆಯಾಗಿದೆ.

ಇದನ್ನೂ ಓದಿ: ಈ ಚಿತ್ರ ನೋಡಿದಾಗ ನಿಮಗೆ ಮೊದಲು ಕಂಡಿದ್ದೇನು?; ಈ ಫೋಟೋ ನೋಡಿ ನಿಮ್ಮ ವ್ಯಕ್ತಿತ್ವ ತಿಳಿಯಿರಿ..

ಫಿಟ್​ನೆಸ್​ ಸಮಸ್ಯೆಯನ್ನು ಎದುರಿಸುತ್ತಿರುವ ಜೋಪ್ರಾ ಆರ್ಚರ್​ ಐಪಿಎಲ್​ನಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಇಂಗ್ಲೆಂಡ್​ ಆಲ್​ರೌಂಡರ್​ ಕ್ರಿಸ್​ ಜೋರ್ಡಾನ್​ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ. ಕಳೆದೆರಡು ವರ್ಷಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆರ್ಚರ್, ಮೇಲಿಂದ ಮೇಲೆ ಗಾಯಗೊಳ್ಳುತ್ತಿದ್ದಾರೆ.

​ಪರಿಣಾಮಕಾರಿಯಾಗಿ ಬೌಲಿಂಗ್​ ಮಾಡಲು ವಿಫಲರಾಗಿದ್ದ ಆರ್ಚರ್​, ಮುಂಬೈ ಪರ 5 ಪಂದ್ಯಗಳ ಮೂಲಕ ಕೇವಲ ಎರಡು ವಿಕೆಟ್​ ಕಿತ್ತಿದ್ದಾರೆ. ಇನ್ನು, ತಂಡವನ್ನು ಸೇರಿಕೊಂಡಿರುವ ಜೋರ್ಡಾನ್​ ಸಿಎಸ್​ಕೆ, ಪಂಜಾಬ್​ ಕಿಂಗ್ಸ್​, ಆರ್​ಸಿಬಿ, ಮತ್ತು ಹೈದರಾಬಾದ್​ ತಂಡದ ಪರವಾಗಿ ಆಡಿದ್ದಾರೆ. ಇದುವರೆಗೆ 28 ಐಪಿಎಲ್​ ಪಂದ್ಯಗಳನ್ನು ಆಡಿದ್ದು, ಒಟ್ಟು 27 ವಿಕೆಟ್​ ಪಡೆದಿದ್ದಾರೆ.(ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್