ಹುಬ್ಬಳ್ಳಿ: ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ ಮಂಜುನಾಥ ಹೆಬಸೂರ ಗೆಳೆಯರ ಬಳಗ ಹಾಗೂ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಧಾರವಾಡದ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಡಿ. 5ರಂದು ಏರ್ಪಡಿಸಲಾಗಿದೆ ಎಂದು ಉದ್ಯೋಗ ಮೇಳ ಆಯೋಜಕ ಮಂಜುನಾಥ ಹೆಬಸೂರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9ಗಂಟೆಯಿಂದ ಸಂಜೆ 4ರವರೆಗೆ ಸಂದರ್ಶನ ಪ್ರಕ್ರಿಯೆ ನಡೆಯಲಿದೆ. ಈ ಉದ್ಯೋಗ ಮೇಳದಲ್ಲಿ ಬೆಲ್ಲದ್ ಗ್ರೂಪ್ ಆಫ್ ಕಂಪನೀಸ್, ಬೆಳಗಾವಿ ಕಿಯಾ ಶೋರೂಂ, ಮಾನಿಕಬಾಗ ಆಟೋಮೊಬೈಲ್ಸ್ ಸೇರಿ 50ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗವಹಿಸಲಿವೆ. ಎರಡೂ ಸಾವಿರಕ್ಕೂ ಹೆಚ್ಚು ಉದ್ಯೋಗಗಳ ನಿರೀಕ್ಷೆ ಇದ್ದು, ವಿಶೇಷವಾಗಿ ಈ ಉದ್ಯೋಗ ಮೇಳದಲ್ಲಿ ವಿಕಲಚೇತನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಕೆಲ ಕಂಪನಿಗಳು ಭಾಗಿಯಾಗಲಿವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಯಾವುದೇ ಪದವಿ, ಡಿಪ್ಲೊಮಾ, ಎಂಬಿಎ, ಬಿಇ, ಐಟಿಐ ಕಲಿತಿರುವ ಯುವಕ-ಯುವತಿಯರಿಗೆ ಆದ್ಯತೆ ನೀಡಲಾಗುವುದು ಎಂದರು.
ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ್ ಅವರು ಉದ್ಯೋಗ ಮೇಳೆ ಉದ್ಘಾಟಿಸುವರು. ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ಕೆಎಲ್ಇ ಆಡಳಿತ ಮಂಡಳಿ ನಿರ್ದೇಶಕ ಡಾ.ವಿ.ಐ. ಪಾಟೀಲ್, ಉದ್ಯೋಗಾಧಿಕಾರಿ ಮಹೇಶ ಮಾಳವಡೇಕರ ಇತರರು ಉಪಸ್ಥಿತರಿರುವರು ಎಂದರು.
ರಾಜು ಪಾಟೀಲ, ಅಭಿಷೇಕ ಗೌಡರ, ಮಿಥುನ್ ಡಿ.ಕೆ. ಸುದ್ದಿಗೋಷ್ಠಿಯಲ್ಲಿದ್ದರು.
ಉದ್ಯೋಗ ಮೇಳ ಡಿ. 5ರಂದು
You Might Also Like
ಮನೆಯಲ್ಲೇ ಮಾಡಿ ಟೇಸ್ಟಿ ಸ್ಪೈಸಿ ಬಟರ್ ಕಿಚಡಿ; ಇಲ್ಲಿದೆ ಸಿಂಪಲ್ ವಿಧಾನ | Recipe
ಪ್ರತಿ ಬಾರಿ ಮನೆಯಲ್ಲಿ ಸಿಂಪಲ್ ಕಿಚಡಿ ತಿಂದು ಬೇಜಾರಾಗಿದ್ಯಾ. ವಿಶೇಷ ರೀತಿಯ ಹೋಟೆಲ್ ಸ್ಟೈಲ್ ಟೇಸ್ಟಿ…
ತುಪ್ಪ ಸೇವಿಸಿದರೆ ಪಿರಿಯಡ್ಸ್ ನೋವು ಇರುವುದಿಲ್ಲವೇ; ತಜ್ಞರು ಹೇಳೋದೇನು? | Health Tips
ಋತುಚಕ್ರದ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ನೋವು, ಉಬ್ಬುವುದು ಮತ್ತು ಹೆಪ್ಪುಗಟ್ಟುವಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು…
ಜಿಮ್ಗೆ ಹೋಗದೆ ಮನೆಯಲ್ಲೆ ಮಾಡಿ ಈ 3 ವ್ಯಾಯಾಮ; ಸ್ಲಿಮ್ ಆಗಲು ಈ ಟಿಪ್ಸ್ | Health Tips
ಸಿನಿಮಾ ನಟಿಯರನ್ನು ನೋಡಿ ನನಗೂ ಅವರಂತಹ ದೇಹಾಕೃತಿ ಇದ್ದಿದ್ದರೆ ಚೆನ್ನಾಗಿರುತಿತ್ತು ಎಂದು ಅನಿಸುತ್ತದೆಯೇ? ಹೌದು ಎಂದಾದರೆ…