ನವಲಗುಂದ: ಹುಬ್ಬಳ್ಳಿ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಎಸ್.ಪಿ. ಫೌಂಡೇಷನ್ ಆಸ್ರಯದಲ್ಲಿ ಫೆ. 8ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಮಾಡಲ್ ಹೈಸ್ಕೂಲ್ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಎಸ್.ಪಿ. ಫೌಂಡೇಷನ್ ಉಪಾಧ್ಯಕ್ಷ ರಾಜಣ್ಣ ಕಂಪಲಿ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಲಗುಂದ ವಿಧಾನಸಭಾ ಕ್ಷೇತ್ರದ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿದೆ. 50ಕ್ಕೂ ಹೆಚ್ಚು ವಿವಿಧ ಕಂಪನಿಗಳು ಪಾಲ್ಗೊಳ್ಳಲಿದ್ದು, ಯಾವುದೇ ಪ್ರದೇಶದ ನಿರುದ್ಯೋಗಿಗಳು ಮೇಳದಲ್ಲಿ ಭಾಗವಹಿಸಿ ಕೆಲಸ ಗಿಟ್ಟಿಸಿಕೊಳ್ಳಲು ಅವಕಾಶವಿದೆ ಎಂದರು.
ಹುಂಡೈ, ಎಸ್ಬಿಐ, ಟಾಟಾ, ಟಿವಿಎಸ್, ಫೋನ್ ಫೇ, ಆಕ್ಸಿಸ್, ಫೋರ್ಟಿಯಾ ಮೆಡಿಕೊ, ಮೆಡ್ಪ್ಲಸ್, ಐಸಿಐಸಿಐ, ವೈಸ್ಸ್ ಆಫ್ ಇಂಡಿಯಾ, ಯೂತ್ ಫಾರ್ ಜಾಬ್ ಸೇರಿದಂತೆ ವಿವಿಧ ಕಂಪನಿಗಳಿಂದ ಒಟ್ಟು 2500 ಉದ್ಯೋಗಾವಕಾಶ ಲಭ್ಯವಿವೆ ಎಂದರು.
ಉದ್ಯೋಗ ವಿನಿಮಯ ಕೇಂದ್ರ ಅಧಿಕಾರಿ ರಾಜು ಪಾಟೀಲ, ಫೌಂಡೇಷನ್ ಪದಾಧಿಕಾರಿಗಳಾದ ಸದಾನಂದ ಗಾಳಪ್ಪಣ್ಣವರ, ಪ್ರಭು ಬುಳಗಣ್ಣವರ, ರೋಹಿತ ಮತ್ತಿಹಳ್ಳಿ, ಮುತ್ತಣ್ಣ ಚಾಕಲಬ್ಬಿ, ಅಣ್ಣಪ್ಪ, ಸುಭಾಸ್ ಕಿತ್ತಲಿ ಇದ್ದರು.