More

    ಜೆಎನ್​ಯು ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಅಪರಾಧ ವಿಭಾಗದ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ ವಿದ್ಯಾರ್ಥಿ ಸಂಘಟನೆ…

    ನವದೆಹಲಿ: ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿರುವ ರೀತಿ ಸರಿಯಾಗಿಲ್ಲ. ಇದೊಂದು ಮೋಸದಿಂದ ಕೂಡಿದ ಹಾಗೂ ವಂಚನಾತ್ಮಕ ತನಿಖೆ ಎಂದು ಜೆಎನ್​ಯು ವಿದ್ಯಾರ್ಥಿ ಸಂಘಟನೆ ಶನಿವಾರ ಆರೋಪಿಸಿದೆ.

    ದೆಹಲಿ ಪೊಲೀಸರು ನಡೆಸಿದ ಸುದ್ದಿಗೋಷ್ಠಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ (ಎಬಿವಿಪಿ) ನ ಸುದ್ದಿಗೋಷ್ಠಿಯಂತೆ ಭಾಸವಾಗುತ್ತಿತ್ತು. ಎಬಿವಿಪಿ ಪದಾಧಿಕಾರಿಗಳು ಬರೆದುಕೊಟ್ಟಿದ್ದನ್ನು ಪೊಲೀಸರು ಓದುತ್ತಿದ್ದಾರೇನೋ ಎಂದು ಅನ್ನಿಸುತ್ತಿತ್ತು. ದೆಹಲಿ ಪೊಲೀಸರು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ನಕಲಿ ತನಿಖೆ ನಡೆಸುತ್ತಿದ್ದಾರೆ. ವಂಚನೆ ಮಾಡುತ್ತಿದ್ದಾರೆ ಎಂದು ಜೆಎನ್​ಯುಎಸ್​ಯು ಸದಸ್ಯರು ಇಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

    ಹಿಂಸಾಚಾರದಲ್ಲಿ ಎಬಿವಿಪಿ ಪಾತ್ರ ಇದೆ ಎಂಬುದು ಈಗಾಗಲೇ ಹಲವು ವಿಡಿಯೋಗಳ ಮೂಲಕ ಸಾಬೀತಾಗಿದೆ. ಹಲವು ಮಾಧ್ಯಮಸಂಸ್ಥೆಗಳೂ ಇದನ್ನೂ ವರದಿ ಮಾಡಿವೆ. ಈ ಹಿಂಸಾಚಾರಕ್ಕೆ ಪೊಲೀಸ್​ ಹಾಗೂ ಇಲ್ಲಿನ ಆಡಳಿತದ ಬೆಂಬಲವಿದೆ. ಕೆಲವು ಸುಳ್ಳು ಹಾಗೂ ಫೇಕ್​ ಫೋಟೋ, ವಿಡಿಯೋಗಳನ್ನು ವೈರಲ್​ ಮಾಡಿ ಜೆಎನ್​ಯುಗೆ ಬೆದರಿಕೆ ಒಡ್ಡುವ ಪಿತೂರಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

    ಜ.5ರಂದು ನಡೆದ ಹಿಂಸಾಚಾರದ ತನಿಖೆ ನಡೆಸುತ್ತಿರುವ ದೆಹಲಿ ಕ್ರೈಂ ಬ್ರಾಂಚ್​ನ ಪೊಲೀಸರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದರು. ಅಲ್ಲದೆ, 9 ಜನ ಶಂಕಿತರ ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ಅಷ್ಟೇ ಅಲ್ಲದೆ, ಶಂಕಿತರ ವಿಚಾರಣೆಯನ್ನು ಆದಷ್ಟು ಬೇಗ ಶುರು ಮಾಡುವುದಾಗಿ ತಿಳಿಸಿದ್ದಾರೆ. ಪೊಲೀಸರು ಹೆಸರಿಸಿದ ಶಂಕಿತರಲ್ಲಿ ಜೆಎನ್​ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​ ಸೇರಿ ಮತ್ತೂ ಕೆಲವರಿದ್ದಾರೆ. ಈಗ ಇದೇ ವಿಚಾರಕ್ಕೆ ಪ್ರತಿ ಸುದ್ದಿಗೋಷ್ಠಿ ನಡೆಸಿದ ಜೆಎನ್​ಯು ಸ್ಟುಡೆಂಟ್ ಯೂನಿಯನ್​ ಸದಸ್ಯರು ಪೊಲೀಸರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts