More

    ಜೆಎನ್​ಯು ಹಿಂಸಾಚಾರಕ್ಕೆ ವಿವಿ ಕುಲಪತಿ ಹೊಣೆಗಾರರನ್ನಾಗಿ ಮಾಡಿ, ವಜಾಗೊಳಿಸಿ ಎಂದು ವರದಿ ನೀಡಿದ ಕಾಂಗ್ರೆಸ್​ ಸತ್ಯ ಶೋಧನಾ ಸಮಿತಿ

    ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ಜ.5ರಂದು ನಡೆದ ಹಿಂಸಾಚಾರಕ್ಕೆ ವಿವಿಯ ಉಪ ಕುಲಪತಿ ಎಂ. ಜಗದೀಶ್​ ಕುಮಾರ್​ ಅವರನ್ನು ಹೊಣೆಗಾರರನ್ನಾಗಿ ಮಾಡಿ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್​ ಸತ್ಯ ಶೋಧನಾ ಸಮಿತಿ ತಿಳಿಸಿದೆ.
    ಕಾಂಗ್ರೆಸ್ ನಾಯಕಿ ಸುಷ್ಮಿತಾ ದೇವ್ ನೇತೃತ್ವದ ಸಮಿತಿ ತನಿಖೆ ನಡೆಸಿ ವರದಿ ಬಿಡುಗಡೆ ಮಾಡಿದೆ.

    ವಿವಿ ಆವರಣದಲ್ಲಿ ನಡೆದ ಹಿಂಸಾಚಾರವನ್ನು ತಡೆಯಲು ಉಪ ಕುಲಪತಿ ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಹುದ್ದೆಯಿಂದ ವಜಾಗೊಳಿಸಿ ತನಿಖೆ ನಡೆಸಬೇಕು ಎಂದು ಸಮಿತಿ ಆಗ್ರಹಿಸಿದೆ.

    ಹಿಂಸಾಚಾರವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ವಿವಿ ಉಪ ಕುಲಪತಿಯಾಗಿ ಜಗದೀಶ್​ ಕುಮಾರ್​ ನೇಮಕವಾದ ನಂತರ ವಿವಿಯಲ್ಲಿ ನಡೆದ ನೇಮಕಾತಿ, ಹಣಕಾಸು ಹಾಗೂ ಆಡಳಿತಾತ್ಮಕ ನಿರ್ಧಾರಗಳನ್ನು ಕೂಡ ತನಿಖೆಗೆ ಒಳಪಡಿಸಬೇಕು ಎಂದು ತಿಳಿಸಿದೆ.

    ಭದ್ರತಾ ಸಂಸ್ಥೆ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲು: ಜೆಎನ್​ಯುಗೆ ಭದ್ರತೆ ಒದಗಿಸುವ ಸಂಸ್ಥೆಯ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸಬೇಕು. ಅಲ್ಲದೆ ವಿವಿಯ ಭದ್ರತೆಯನ್ನು ಬೇರೆ ಕಂಪನಿಗೆ ಗುತ್ತಿಗೆ ನೀಡಬೇಕು. ವಿವಿಗೆ ಅಪರಿಚಿತರು ಆಗಮಿಸಿ ತೊಂದರೆ ಕೊಡುತ್ತಿದ್ದಾರೆ ಎಂದು ದೆಹಲಿ ಪೊಲೀಸರಿಗೆ ಜೆಎನ್​ಯು ವಿದ್ಯಾರ್ಥಿಗಳು ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೂಡ ತನಿಖೆ ನಡೆಸಬೇಕು ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.
    ತನಿಖಾ ಸಮಿತಿಯಲ್ಲಿ ಕಾಂಗ್ರೆಸ್ ನಾಯಕಿ ಸುಷ್ಮಿತಾ ದೇವ್, ಸಂಸದ ಹಿಬಿ ಈಡನ್, ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಮಾಜಿ ಅಧ್ಯಕ್ಷ ಸೈಯದ್ ಅನ್ವರ್​ ಹುಸೇನ್ ಹಾಗೂ ಎನ್‌ಎಸ್‌ಯುಐ ಮಾಜಿ ಅಧ್ಯಕ್ಷ ಅಮೃತ ಧವನ್ ಇದ್ದಾರೆ. ಸಮಿತಿ ಗಲಭೆ ನಂತರ ಜೆಎನ್​ಯುಗೆ ತೆರಳಿ ಮಾಹಿತಿ ಸಂಗ್ರಹಿಸಿ ವರದಿ ತಯಾರಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts