More

    ಪ್ರಕ್ಷುಬ್ಧಗೊಂಡಿದ್ದ ಜೆಎನ್​ಯುನಲ್ಲಿ ಮರಳಿದ ಶಾಂತಿ: ಜ.13ರಿಂದ ಮತ್ತೆ ತರಗತಿ ಆರಂಭ

    ನವದೆಹಲಿ: ಗಲಭೆಯಿಂದ ಪ್ರಕ್ಷುಬ್ಧಗೊಂಡಿದ್ದ ಜವಾಹರಲಾಲ್​ ನೆಹರು ವಿಶ್ವವಿದ್ಯಾಲಯದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದು ಜ.13ರಿಂದ ತರಗತಿಗಳು ಮತ್ತೆ ಆರಂಭವಾಗಲಿವೆ ಎಂದು ವಿವಿ ಉಪಕುಲಪತಿ ಜಗದೀಶ್​ ಕುಮಾರ್​ ಹೇಳಿದ್ದಾರೆ.

    ವಿಶ್ವವಿದ್ಯಾಲಯದ ಪರಿಸ್ಥಿತಿ ಶಾಂತಿಯುತ ಮತ್ತು ಸಹಜವಾಗಿದೆ. ಹೀಗಾಗಿ ವಿವಿಯಲ್ಲಿ ಮತ್ತೆ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಲಿವೆ. ಪ್ರತಿ ವಿದ್ಯಾರ್ಥಿಯು ತಮ್ಮ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದೇನೆ ಎಂದು ಅವರು ವರದಿಗಾರರಿಗೆ ತಿಳಿಸಿದರು.

    ಮಾನವ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ವಿವಿಯಲ್ಲಿ ಶಾಂತಿ ಮರಳಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ವಿವಿಯಲ್ಲಿ ಪರಿಸ್ಥಿತಿ ಸಂಪೂರ್ಣ ತಿಳಿಗೊಂಡಿದ್ದು ತರಗತಿಗಳನ್ನು ನಡೆಸಬಹುದಾಗಿದೆ ಎಂದು ಕಾರ್ಯದರ್ಶಿ ಅವರಿಗೆ ಮಾಹಿತಿ ನೀಡಿದ್ದೇನೆ. ವಿವಿಯಲ್ಲಿ ಮುಂದೆ ಈ ರೀತಿ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಅವರು ಹೇಳಿದರು.

    ಜೆಎನ್​ಯು ಆವರಣಕ್ಕೆ ಜ.5ರ ಭಾನುವಾರ ಮುಸುಕುಧಾರಿಗಳು ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ವಿವಾದಕ್ಕೆ ತಿಗುಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts