More

    ಜೆಎನ್​ಯು ಗುಂಪು ಹಲ್ಲೆ: ದಾಳಿಯ ಹೊಣೆ ಹೊತ್ತುಕೊಂಡ ಹಿಂದು ರಕ್ಷಾ ದಳದ ನಾಯಕ ಹೇಳಿದ್ದೇನು?

    ನವದೆಹಲಿ: ಭಾನುವಾರ ಜೆಎನ್​ಯು ವಿಶ್ವವಿದ್ಯಾಲಯದಲ್ಲಿ ನಡೆದ ಗುಂಪು ಹಲ್ಲೆಯ ಹೊಣೆಯನ್ನು “ಹಿಂದು ರಕ್ಷಾ ದಳ” ಹೆಸರಿನ ಸಣ್ಣ ಸಂಘಟನೆಯೊಂದು ಹೊತ್ತುಕೊಂಡಿದ್ದು, ಪ್ರಮುಖ ವಿಶ್ವವಿದ್ಯಾಲಯವು ರಾಷ್ಟ್ರವಿರೋಧಿ ಚಟುವಟಿಕೆಯಂತಹ ಗೊಬ್ಬರ ಗುಂಡಿಯಾಗಿದೆ ಎಂದು ಆರೋಪಿಸಿದೆ.

    ಮುಖ್ಯಸ್ಥ ಪಿಂಕಿ ಚೌಧರಿ ಅವರು ಜೆಎನ್​ಯು ಹಿಂಸೆಯ ಹೊಣೆಯನ್ನು ಹೊತ್ತುಕೊಂಡಿರುವ ವಿಡಿಯೋವನ್ನು ಹಿಂದು ರಕ್ಷಾ ದಳ ಬಿಡುಗಡೆ ಮಾಡಿದೆ.

    ವಿಡಿಯೋದಲ್ಲಿ ಏನಿದೆ?: ಜೆಎನ್​ಯು ರಾಷ್ಟ್ರ ವಿರೋಧಿ ಚಟುವಟಿಕೆ ಗೊಬ್ಬರ ಗುಂಡಿಯಾಗಿದ್ದು, ಇದನ್ನು ನಾವು ಸಹಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಜೆಎನ್​ಯುನಲ್ಲಿ ಭಾನುವಾರ ನಡೆದ ದಾಳಿಯ ಹೊಣೆಯನ್ನು ನಾವೇ ಹೊತ್ತುಕೊಳ್ಳುತ್ತೇವೆ. ದಾಳಿ ನಡೆಸಿದವರು ನಮ್ಮ ಕಾರ್ಯಕರ್ತರು ಎಂಬುದನ್ನು ಹೇಳ ಬಯಸುತ್ತೇನೆ ಎಂದು ವಿಡಿಯೋದಲ್ಲಿ ಪಿಂಕಿ ಚೌಧರಿ ಹೇಳಿದ್ದಾರೆ.

    ಹಲವು ವರ್ಷಗಳಿಂದ ಈ ಜನರು ವರ್ತಿಸುತ್ತಿರುವ ರೀತಿ ಅದರಲ್ಲೂ ಜೆಎನ್​ಯು ಮಂದಿಯ ವರ್ತನೆ ನಮ್ಮ ಧರ್ಮದ ವಿರುದ್ಧವಾಗಿದೆ. ಇಂತಹ ರಾಷ್ಟ್ರ ವಿರೋಧಿ ಚಟುವಟಿಕೆಯನ್ನು ನಾವು ಸಹಿಸಲಾಗುವುದಿಲ್ಲ ಎಂದಿದ್ದಾರೆ.

    ಈ ದೇಶದಲ್ಲೇ ವಾಸಿಸಿ, ಇಲ್ಲಿನ ಆಹಾರವನ್ನೇ ಸೇವಿಸಿ, ಇಲ್ಲಿಯೇ ಅಧ್ಯಯನ ನಡೆಸಿ ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸುತ್ತಾರೆ. ಹಿಂದು ರಕ್ಷಾ ದಳ ಎಂದಿಗೂ ಇದನ್ನು ಸಹಿಸುವುದಿಲ್ಲ. ಇಂತಹ ಆದರ್ಶಗಳನ್ನು ಹೊಂದಿರುವವರು ಕಂಡುಬಂದರೆ ಅವರ ಮೇಲೆಯೂ ಮುಂದಿನ ದಿನಗಳಲ್ಲಿ ದಾಳಿ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.


    ಇನ್ನು ಈ ಬಗ್ಗೆ ಹೇಳಿಕೆ ನೀಡಿರುವ ಸರ್ಕಾರ ಪಿಂಕಿ ಚೌಧರಿ ಅವರು ದಾಳಿ ಹೊಣೆ ಹೊತ್ತುಕೊಂಡಿರುವ ಬಗ್ಗೆ ತನಿಖೆ ನಡೆಸುತ್ತೇವೆ. ಪ್ರಕರಣದ ಮೇಲೆ ದೆಹಲಿ ಪೊಲೀಸರು ತುಂಬಾ ನಿಗಾವಹಿಸಿದ್ದಾರೆ. ಮುಸುಕುಧಾನಿ ವ್ಯಕ್ತಿ ಹಾಗೂ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ಪುಟೇಜ್​ ಸಹಾಯ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಭಾನುವಾರ ರಾತ್ರಿ ಸುಮಾರು 70 ರಿಂದ 100 ಮಂದಿ ಮುಸುಕುಧಾರಿಗಳು ಶಸ್ತ್ರಾಸ್ತ್ರಗಳನ್ನು ಹಿಡಿದು ಜೆಎನ್​ಯು ಆವರಣಕ್ಕೆ ನುಗ್ಗಿ ಜೆಎನ್​ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಐಷೆ ಘೋಷ್​ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ ಸುಮಾರು 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ತೀವ್ರ ಆಕ್ಷೇಪ ವ್ಯಕ್ತವಾಗಿತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts