More

    ಗಲಭೆಯಿಂದ ಪ್ರಕ್ಷುಬ್ಧಗೊಂಡಿರುವ ಜೆಎನ್​ಯು ವಾತಾವರಣ ತಿಳಿಗೊಳಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸೂಚನೆ

    ನವದೆಹಲಿ: ಮುಸುಕುಧಾರಿಗಳು ನಡೆಸಿದ ಗಲಭೆಯಿಂದ ಪ್ರಕ್ಷುಬ್ಧಗೊಂಡಿದ್ದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಾತಾವರಣವನ್ನು ಸಹಜ ಸ್ಥಿತಿಗೆ ತರುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಜೆಎನ್​ಯು ಉಪಕುಲಪತಿ ಜಗದೀಶ್​ ಕುಮಾರ್​ ಅವರಿಗೆ ಸೂಚಿಸಿದೆ.

    ಪ್ರೊ. ಸತೀಶ್​ ಚಂದ್ರ ಗರ್ಕೋಟಿ ಹಾಗೂ ಇತರ ಉಪನ್ಯಾಸಕರು ಬುಧವಾರ ಬೆಳಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಯಲಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ನಂತರ ಮಾನವ ಸಂಪನ್ಮೂಲ ಸಚಿವಾಯ ವಿವಿಯಲ್ಲಿ ಸಹಜ ಸ್ಥಿತಿ ತರುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.

    ಗಲಭೆಯಿಂದ ಪ್ರಕ್ಷುಬ್ಧಗೊಂಡಿದ್ದ ವಿವಿಯಲ್ಲಿ ಶಾಂತಿ ನೆಲೆಸುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ತಿಳಿಗೊಳ್ಳಲಿದೆ. ಇದಕ್ಕೆ ವಿವಿ ಆಡಳಿತ ಮಂಡಳಿ ಎಲ್ಲ ಪ್ರಯತ್ನ ಮಾಡುತ್ತಿದೆ ಎಂದು ಉಪನ್ಯಾಸಕರು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಗೆ ಮನವರಿಕೆ ಮಾಡಿಕೊಟ್ಟರು.

    ಪ್ರತಿಭಟನೆಗೆ ಕಾರಣವಾಗಿದ್ದ ಚಳಿಗಾಲದ ಸೆಮಿಷ್ಟರ್​ 2020ರ ವಿದ್ಯಾರ್ಥಿಗಳ ನೋಂದಣಿ ದಿನವನ್ನು ದಂಡ ಇಲ್ಲದೆ ಜ.20ರವರೆಗೆ ವಿಸ್ತರಿಸಲಾಗಿದೆ ಎಂದು ಸಚಿವಾಲಯ ಇದೆ ವೇಳೆ ತಿಳಿಸಿದೆ.

    ಕಳೆದ ಭಾನುವಾರ ಮುಸುಕುಧಾರಿಗಳು ವಿವಿ ಆವರಣಕ್ಕೆ ನುಗ್ಗಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷೆ ಘೋಷ್​ ಸೇರಿದಂತೆ 15 ಮಂದಿ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೆ ರಾಷ್ಟ್ರಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ನಟಿ ದಿಪೀಕಾ ಪಡುಕೋಣೆ ಘಟನೆಯಲ್ಲಿ ಗಾಯಗೊಂಡಿದ್ದ ಐಷೆ ಘೋಷ್​ ಆರೋಗ್ಯ ವಿಚಾರಿಸಿ ಬೆಂಬಲ ಸೂಚಿಸಿದ್ದರು. ಇದರಿಂದ ಎಚ್ಚೆತ್ತ ಕೇಂದ್ರ ಸರ್ಕಾರ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದೆ. ಅಲ್ಲದೆ ವಿವಿಗೆ ಅಧಿಕಾರಿಗಳನ್ನು ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸುವಂತೆ ಸೂಚಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts