ಉಗ್ರರ ಗ್ರನೇಡ್​ ದಾಳಿ: ಇಬ್ಬರು ಸಿಆರ್​ಪಿಎಫ್​ ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿ ಉಗ್ರರ ಗ್ರನೇಡ್​ ದಾಳಿಗೆ ಇಬ್ಬರು ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶೀರ್​ ಪೊರದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಯೋಧರು ಗಸ್ತು ತಿರುಗುತ್ತಿದ್ದಾಗ ಈ ದಾಳಿ ನಡೆದಿದೆ. ದಾಳಿಯಲ್ಲಿ ಗಾಯಗೊಂಡ ಒಬ್ಬ ಯೋಧ ಹಾಗೂ ಒಬ್ಬ ನಾಗರಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

2018ರಲ್ಲಿ ಉಗ್ರರ ದಾಳಿಗೆ ಇದುವರೆಗೆ 41 ನಾಗರೀಕರು ಮೃತಪಟ್ಟಿದ್ದರೆ, 43 ಯೋಧರು ಹುತಾತ್ಮರಾಗಿದ್ದಾರೆ. 107 ಉಗ್ರರನ್ನು ಹತ್ಯೆ ಮಾಡಲಾಗಿದೆ. (ಏಜೆನ್ಸೀಸ್​)