ಜಿಂದಾಲ್​ಗೆ ನೀರು ಹರಿಸುವುದು ನಿಲ್ಲಿಸಿ

ಹುನಗುಂದ: ತಾಲೂಕಿನಲ್ಲಿ ಬರ ಆವರಿಸಿದ್ದು, ಜನ ಜಾನು ವಾರುಗಳಿಗೆ ಕುಡಿಯಲು, ಹಿಂಗಾರು ಬೆಳೆಗೆ ನೀರಿನ ಕೊರತೆಯಾಗಿದೆ. ಕೂಡಲೇ ಜಿಂದಾಲ್ ಕಾರ್ಖಾ ನೆಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಮರೋಳ ಹತ್ತಿರದ ಜಾಕ್​ವೆಲ್ ಮುಂಭಾಗ ಗುರುವಾರ ಕೃಷ್ಣಾ ತೀರದ ರೈತರು ಪ್ರತಿಭಟಿಸಿದರು.

ರೈತ ಮುಖಂಡ ಶಿವಾನಂದ ಕಾಶಪ್ಪನವರ ಮಾತನಾಡಿ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಪ್ರಾಣ ಹೋದರೂ ಜಮೀನುಗಳಿಗೆ ನೀರು ಪಡೆದೇ ತೀರುತ್ತೇವೆ. ವಾರದಿಂದ ಕಾಲುವೆಗೆ ನೀರು ಹರಿಸಿಲ್ಲ. ಬೆಳೆಗಳು ಬಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಸಂಗನಬಸಯ್ಯ ಶಿವಮೂರ್ತಿ ಮಠ ನೇತೃತ್ವದಲ್ಲಿ ರೈತರು ನಾರಾಯಣಪುರ ಜಲಾ ಶಯದ ಇಂಜಿನಿಯರ್ ಎನ್.ಡಿ. ಶಂಕರ ಅವರಿಗೆ ಘೕರಾವ್ ಹಾಕಿ ಜಿಂದಾಲ್ ನೀರು ಪೂರೈಸುವ ಜಾಕ್​ವೆಲ್ ಪಂಪ್​ಗಳನ್ನು ಬಂದ್ ಮಾಡಬೇಕು. ಇಲ್ಲದಿದ್ದರೆ ಗೇಟ್ ಮುರಿಯಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಸ್ಪಂದಿಸಿದ ಇಂಜಿನಿ ಯರ್ ಮೇಲಧಿಕಾರಿಗಳೊಂದಿಗೆ ರ್ಚಚಿಸಿ ಜಿಂದಾಲ್ ಕಾರ್ಖಾನೆಗೆ ನೀರು ಹರಿಸುವುದನ್ನು ಬಂದ್ ಮಾಡಿಸಿ ಜಾಕ್​ವೆಲ್​ನಲ್ಲಿನ ಸಿಬ್ಬಂದಿ ಹೊರಹಾಕಿದರು. ಹೊಸ ಬೀಗ ಹಾಕಿ ಬೀಗದ ಕೈ ತಮ್ಮ ಬಳಿ ಇಟ್ಟುಕೊಂಡ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.

ಸಿಪಿಐ ಸಂಜಯ್ ಬಳಿಗಾರ, ಪಿಎಸ್​ಐ ಪುಂಡಲೀಕ ಪಟಾತ್ತರ ಸಿಬ್ಬಂದಿಯೊಂದಿಗೆ ಭದ್ರತೆ ನೀಡಿದ್ದರು. ಮಹಾಂತೇಶ ಕಾಶಪ್ಪನವರ, ಮಲ್ಲಪ್ಪ ಸವಳಿ, ತಿರುಪತಿ ಬಳೂಲದ, ಅಡವೆಪ್ಪ ಕುರಿ, ವೀರೇಶ ಹುಲ್ಲಳ್ಳಿ, ಮಲ್ಲಪ್ಪ ತುಂಬಗಿ, ಸಂಗಪ್ಪ ಗಾಳಿ, ಚಂದುಸಾಬ ಗಡೇದ, ಈರಪ್ಪ ಕಟಗಿ, ಚನ್ನಯ್ಯ ನಂದಿಹಾಳಮಠ, ದೇವಪ್ಪ ಕಟ್ಟಿಮನಿ, ಶೇಖಣ್ಣ ಭೂಪರದ, ಬಸವಂತಪ್ಪ ಹಡಪದ, ಬಸನಗೌಡ ಪೊಲೀಸ್​ಪಾಟೀಲ, ಶೇಖರಪ್ಪ ಕಾಶಪ್ಪನವರ, ಬಸವಂತ ಕಟ್ಟಿಮನಿ, ಬಸವಂತ ಹಡಪದ, ಸಂಗಪ್ಪ ಉಮಲೂಟಿ ಇತರರು ಇದ್ದರು.