19 C
Bengaluru
Saturday, January 18, 2020

ನೀತಿ ರೂಪಿಸಿದ ಜಿಪಂನಿಂದಲೇ ಫ್ಲೆಕ್ಸ್!

Latest News

ಸನ್ನಡತೆ ತೋರಿದರೆ ರೌಡಿ ಪಟ್ಟಿಯಿಂದ ಖುಲಾಸೆ

ಧಾರವಾಡ: ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ತೆರೆಯಲಾಗಿರುವ ರೌಡಿಶೀಟರ್ ಪಟ್ಟಿಯನ್ನು ಅವರು ತೋರಿದ ಸನ್ನಡತೆ ಹಾಗೂ ಪುನಃ ಪ್ರಕರಣಗಳಲ್ಲಿ ಭಾಗಿಯಾಗದ ಬಗ್ಗೆ ಪರಿಶೀಲಿಸಿದ...

ಉಣಕಲ್ ಸಿದ್ಧಪ್ಪಜ್ಜನವರ ವಿಜೃಂಭಣೆಯ ರಥೋತ್ಸವ

ಹುಬ್ಬಳ್ಳಿ: ಶ್ರೀ ಸದ್ಗುರು ಸಿದ್ಧಪ್ಪಜ್ಜನವರ 99ನೇ ಪುಣ್ಯಾರಾಧನೆ ನಿಮಿತ್ತ ಉಣಕಲ್ ಸಾಯಿ ನಗರ ರಸ್ತೆಯ ಶ್ರೀ ಸಿದ್ಧಪ್ಪಜ್ಜನವರ ಮೂಲಗದ್ದುಗೆಯ ಮಠದ ಆವರಣದಲ್ಲಿ ಶುಕ್ರವಾರ...

ಸಿಎಎ ಜಾಗೃತಿಗೆ ಷಾ ಗರ್ಜನೆ

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಸಮ್ಮುಖದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಮಾವೇಶ ನಡೆಯಲಿರುವ ಹುಬ್ಬಳ್ಳಿ ನೆಹರು ಮೈದಾನದ...

ಕೃಷಿ ಜಾತ್ರೆ ಇಂದಿನಿಂದ

ಧಾರವಾಡ: ಉತ್ತರ ಕರ್ನಾಟಕ ಭಾಗದ ರೈತರ ಪಾಲಿನ ಒಕ್ಕಲುತನದ ಜಾತ್ರೆ ಎಂದೇ ಖ್ಯಾತವಾಗಿರುವ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕೃಷಿ ಮೇಳ ಜ....

ಧರ್ಮ ಆಚರಣೆಯಿಂದ ಬೆಲೆ-ನೆಲೆ

ಹುಬ್ಬಳ್ಳಿ: ಭೌತಿಕ ಬದುಕು ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕಾಗಿದೆ. ಸತ್ಯದ ತಳಹದಿ ಮೇಲೆ ಧರ್ಮ, ಸಂಸ್ಕೃತಿ ಗಟ್ಟಿಗೊಳ್ಳಬೇಕಾಗಿದೆ. ಸತ್ಯ ಶುದ್ಧವಾದ ಧರ್ವಚರಣೆಯಿಂದ ವ್ಯಕ್ತಿತ್ವಕ್ಕೆ...

ವೇಣುವಿನೋದ್ ಕೆ.ಎಸ್, ಮಂಗಳೂರು
ಕಳೆದ ವರ್ಷ ದ.ಕ ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ ನೀತಿಯನ್ನು ಜಾರಿಗೆ ತಂದಿತ್ತು.
ಅದರ ಪ್ರಸ್ತಾವನೆಯಲ್ಲಿ ಯಾವುದೇ ವ್ಯಕ್ತಿ, ಅಂಗಡಿ ಮಾಲೀಕ, ಮಾರಾಟಗಾರ, ಸಗಟು ಮಾರಾಟಗಾರ, ವ್ಯಾಪಾರಿ ಯಾವುದೇ ದಪ್ಪದ ಯಾವುದೇ ರೀತಿಯ ಪ್ಲಾಸ್ಟಿಕ್ ಭಿತ್ತಿಪತ್ರ, ಕ್ಯಾರಿಬ್ಯಾಗ್, ತೋರಣ, ಫ್ಲೆಕ್ಸ್, ತಟ್ಟೆ, ಬಾವುಟ, ಲೋಟ, ಚಮಚ, ಕ್ಲಿಂಗ್ ಫಿಲ್ಮ್, ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮೋಕೋಲ್, ಪ್ಲಾಸ್ಟಿಕ್ ಮೈಕ್ರೋಬೀಡ್ಸ್‌ನಿಂದ ತಯಾರಾದ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆ ನಿಷೇಧಿಸಿ ಸರ್ಕಾರ ನಿರ್ದೇಶನ ಹೊರಡಿಸಿದೆ ಎಂಬ ಸರ್ಕಾರಿ ಆದೇಶದ ಒಕ್ಕಣೆಯನ್ನು ಮಹತ್ವ ನೀಡಿ ಮುದ್ರಿಸಲಾಗಿದೆ.
ಅಚ್ಚರಿ ಎಂದರೆ ಇಷ್ಟೆಲ್ಲ ಇದ್ದರೂ ‘ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ’ ಸಮೀಕ್ಷೆ ಕುರಿತು ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಫ್ಲೆಕ್ಸ್ ಬ್ಯಾನರ್ ಹಾಕಲಾಗಿದೆ. ಇದನ್ನು ದ.ಕ. ಜಿಲ್ಲಾ ಪಂಚಾಯಿತಿಯೇ ಪೂರೈಸಿದೆ. ಆಗಸ್ಟ್ 1ರಿಂದ 31ರ ವರೆಗೆ ನಡೆಯುವ ಈ ಅಭಿಯಾನದಲ್ಲಿ ನಾಗರಿಕರು ಭಾಗವಹಿಸುವಂತೆ ಕೋರಿ ಹಾಕಿರುವ ಫ್ಲೆಕ್ಸ್‌ಗಳು ಗ್ರಾಮ ಪಂಚಾಯಿತಿ ವಠಾರದಲ್ಲಿ ರಾರಾಜಿಸುತ್ತಿವೆ.
2017ರ ಸ್ವಚ್ಛತಾ ನೀತಿಯನ್ನು ಸುಂದರ ವರ್ಣರಂಜಿತ ಪುಸ್ತಕದಲ್ಲಿ ಮುದ್ರಿಸಿ ನೀಡಲಾಗಿದೆ, ವಾರ್ಡ್/ಗ್ರಾಮ ಪಂಚಾಯಿತಿ/ತಾಲೂಕು ಹಾಗೂ ಜಿಲ್ಲಾ ಹಂತದ ಸಮಿತಿಗಳು ಯಾವ ರೀತಿ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ನಿರ್ಮೂಲನೆಗೆ ಶ್ರಮಿಸಬೇಕು ಎಂಬ ಸೂತ್ರಗಳನ್ನು, ಸೂಚನೆಗಳನ್ನೂ ವಿವರಿಸಿ ಹೇಳಲಾಗಿದೆ. ಈಗ ಸ್ವಚ್ಛ ಸರ್ವೇಕ್ಷಣಾ ಅಭಿಯಾನಕ್ಕೆ ಮಾತ್ರ ಫ್ಲೆಕ್ಸ್ ಅಳವಡಿಸಿದ್ದು ಯಾಕೆ ಎನ್ನುವುದು ನಾಗರಿಕರ ಪ್ರಶ್ನೆಯಾಗಿದೆ.

ಜಿ.ಪಂನಿಂದಲೇ ಪೂರೈಕೆ: ಆಗಾಗ ಸ್ವಚ್ಛತೆ ಬಗ್ಗೆ ಕಾರ್ಯಾಗಾರ ಏರ್ಪಡಿಸುವ, ಸ್ವಚ್ಛತಾ ನೀತಿ ಹೊರತಂದಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯವರೇ ಫ್ಲೆಕ್ಸ್‌ಗಳನ್ನು ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಪೂರೈಕೆ ಮಾಡಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಯ ಹೆಸರನ್ನು ಮಾತ್ರವೇ ಬದಲಾವಣೆ ಮಾಡಿ ಉಳಿದಂತೆ ಒಂದೇ ವಿನ್ಯಾಸದ ಫ್ಲೆಕ್ಸ್‌ಗಳನ್ನು ಪೂರೈಕೆ ಮಾಡಲಾಗಿದೆ.
ಜಿಲ್ಲೆಯ ಮೆನ್ನಬೆಟ್ಟು, ಕೊಳ್ನಾಡು ಮುಂತಾದ ಗ್ರಾಮ ಪಂಚಾಯಿತಿಗಳು ಈಗಾಗಲೇ ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿವೆ. ಜಿಲ್ಲೆಯಲ್ಲೇ ಕೊಳ್ನಾಡು ಮೊದಲ ಬಾರಿಗೆ ಪ್ಲಾಸ್ಟಿಕ್ ನಿಷೇಧ ಜಾರಿಗೆ ತಂದ ಗ್ರಾ.ಪಂ ಎಂಬ ಖ್ಯಾತಿ ಪಡೆದಿದೆ. ಅಲ್ಲಿಗೂ ಇಂಥದ್ದೇ ಫ್ಲೆಕ್ಸ್ ತಲುಪಿದೆ.
ನಾವೇ ಆಗಿದ್ದರೆ ಬಟ್ಟೆಯ ಬ್ಯಾನರ್ ಮಾಡಿ ಹಾಕುತ್ತಿದ್ದೆವು, ಜಿ.ಪಂ ಕಚೇರಿಯಿಂದ ಬಂದ ಕಾರಣ ಅದನ್ನೇ ಹಾಕಿದ್ದೇವೆ ಎನ್ನುತ್ತಾರೆ ಗ್ರಾ.ಪಂ ಸಿಬ್ಬಂದಿ.

ಸ್ವಚ್ಛತಾ ನೀತಿಯನ್ನೇ ಹೊರತಂದಿರುವ ಜಿಲ್ಲಾ ಪಂಚಾಯಿತಿ ಈ ರೀತಿ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ ಕುರಿತ ಫ್ಲೆಕ್ಸ್ ಮುದ್ರಿಸಿ ನೀಡಿದ್ದು ಬೇಜವಾಬ್ದಾರಿ. ಈ ಬಗ್ಗೆ ಜಿಲ್ಲಾಧಿಕಾರಿಯವರು ಹಾಗೂ ಜಿ.ಪಂ ಸಿಇಒ ಅವರ ಗಮನಕ್ಕೆ ತಂದಿದ್ದೇವೆ.
|ಕೃಷ್ಣ ಮೂಲ್ಯ, ಸಂಯೋಜಕರು, ಅಪ್ನಾದೇಶ್ ಆಂದೋಲನ

ದ.ಕ ಜಿಲ್ಲಾ ಪಂಚಾಯಿತಿಯಿಂದ ಫ್ಲೆಕ್ಸ್ ನೀಡಿಲ್ಲ. ನೀಡಿದ್ದರೆ ತಪ್ಪು. ನಮ್ಮಲ್ಲಿಂದ ಬಟ್ಟೆ ಅಥವಾ ಕಾಗದದ ಬ್ಯಾನರ್‌ಗಳನ್ನೇ ಕೊಟ್ಟಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಹೇಗೆ ಫ್ಲೆಕ್ಸ್ ಸಿಕ್ಕಿದೆ ಎನ್ನುವುದನ್ನು ವಿಚಾರಿಸುತ್ತೇನೆ.
|ಮೀನಾಕ್ಷಿ ಶಾಂತಿಗೋಡು ದ.ಕ ಜಿಪಂ ಅಧ್ಯಕ್ಷೆ

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...