ಟೀಸರ್‌ನಲ್ಲಿ ‘ಜಾಂಟಿ ಸನ್ ಆಫ್ ಜಯರಾಜ್’

ಬೆಂಗಳೂರು: ‘ಆ ದಿನಗಳು’, ‘ಎದೆಗಾರಿಕೆ’, ‘ಡೆಡ್ಲಿ ಸೋಮ’, ‘ಹೆಡ್ ಬುಷ್’ ಸೇರಿ ಬೆಂಗಳೂರು ಭೂಗತ ಲೋಕದ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ. ಆ ಸಾಲಿಗೆ ಇದೀಗ ಮತ್ತೊಂದು ಸೇರ್ಪಡೆ ‘ಜಾಂಟಿ ಸನ್ ಆ್ ಜಯರಾಜ್’. 1980ರ ದಶಕದಲ್ಲಿ ನಡೆದ ಭೂಗತ ಜಗತ್ತಿನ ಸುತ್ತ ಕಥೆ ಹೆಣೆಯಲಾಗಿದೆ. ಚಿತ್ರಕ್ಕೆ ಆನಂದ್‌ರಾಜ್ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಎಂ.ಪಿ. ಜಯರಾಜ್ ಪುತ್ರ ಅಜಿತ್ ಜಯರಾಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇತ್ತೀಚೆಗೆ ವಿನೋದ್ ಪ್ರಭಾಕರ್ ಮತ್ತು ಶ್ರೀನಗರ ಕಿಟ್ಟಿ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ನಿರ್ದೇಶಕ ಆನಂದ್‌ರಾಜ್, ‘ಜಯರಾಜ್ ನಂತರದ ದಿನಗಳಲ್ಲಿ ಬೆಂಗಳೂರಿನ ಮಾರ್ಕೆಟ್ ದಂಧೆ, ರೌಡಿಸಂ ಹೇಗೆ ರಾರಾಜಿಸುತ್ತಿದ್ದವು ಎಂಬುದನ್ನೇ ಕಥೆ ಮಾಡಿಕೊಂಡಿದ್ದೇನೆ. ಜಯರಾಜ್ ಮಗ, ಅವರ ಸಾವಿಗೆ ಕಾರಣರಾದಂತ ಪಾತ್ರಗಳು ಬಂದು ಹೋಗುತ್ತವೆ. ಆಗಿನ ಕಾಲಘಟ್ಟದಲ್ಲಿ ಇದ್ದಂತ ಪಾತ್ರಗಳನ್ನು ಕಾಲ್ಪನಿಕವಾಗಿ ತೋರಿಸಲಾಗಿದೆ. ಜತೆಗೆ ತಾಯಿ ಸೆಂಟಿಮೆಂಟ್, ಲವ್‌ಸ್ಟೋರಿ, ಸ್ನೇಹದ ಸಾರವನ್ನು ತಿಳಿಸಲಾಗಿದೆ’ ಎಂದರು. ಅಜಿತ್ ಜಯರಾಜ್, ‘ಅಪ್ಪನ ಪಾತ್ರ ಮಾಡುವಾಗ ನರ್ವಸ್ ಆಗಿದ್ದೆ. ಕ್ಯಾಮರಾ ಮುಂದೆ ನಿಂತಾಗ ಮೊದಲಿಗೆ ಭಯವಾಯಿತು. ಅಷ್ಟು ಪವರ್‌ಫುಲ್ ರೋಲ್ ಹೇಗೆ ಮಾಡುವುದು? ಅಂತ ಟೆನ್ಶನ್ ಆಗಿತ್ತು. ಆದರೆ, ಒಂದು ದೃಶ್ಯದಲ್ಲಿ ನಟಿಸಿದಾಗ ಧೈರ್ಯ ಬಂತು. ನಾನಿಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು. ನಾಯಕಿ ನಿವಿಶ್ಕಾ ಪಾಟೀಲ್, ‘ಬೆಂಗಳೂರಿನ ಹಳೆಯ ದಿನಗಳನ್ನು ನೆನಪಿಸುವ ಚಿತ್ರವಿದು. ಕಡಿಮೆ ಅವಧಿಯಲ್ಲಿ ಶೂಟಿಂಗ್ ನಡೆಸಿದರೂ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಸೇತುವೆ ಕೆಳಗೆ ಒಂದು ಸಾಹಸ ದೃಶ್ಯಕ್ಕಾಗಿ ಕೊಚ್ಚೆಯಲ್ಲಿ ಚಿತ್ರೀಕರಣ ಮಾಡಿದ್ದು ಚಾಲೆಂಜಿಂಗ್ ಆಗಿತ್ತು’ ಎಂದರು. ರಾಜವರ್ಧನ್, ಶರತ್ ಲೋಹಿತಾಶ್ವ, ಪೆಟ್ರೋಲ್ ಪ್ರಸನ್ನ, ಕಿಶನ್, ಸೋನುಪಾಟೀಲ್, ಸಚಿನ್ ಪುರೋಹಿತ್, ಮೈಕೋ ನಾಗರಾಜ್ ತಾರಾಗಣದಲ್ಲಿದ್ದಾರೆ.

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…