ಕೊಲ್ಹಾರ: ಸಮೀಪದ ಯುಕೆಪಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ 218ರ ಅಂಡರ್ ಪಾಸ್ ರಸ್ತೆಯಲ್ಲಿ ಮಂಗಳವಾರ ಸ್ವಿಫ್ಟ್ ಡಿಸೈರ್ ಕಾರ್ ಹಾಗೂ ಇನ್ನೋವಾ ಕಾರ್ ನಡುವೆ ಅಪಘಾತ ಸಂಭವಿಸಿದಾಗ ದೊರೆತ ಗಾಯಾಳುಗಳ ಚಿನ್ನಾಭರಣೆ, ಹಣ ಹಾಗೂ ಮೊಬೈಲ್‌ಗಳನ್ನು ಆಂಬುಲೆನ್ಸ್ ಸಿಬ್ಬಂದಿ ಬುಧವಾರ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ಸ್ವಿಫ್ಟ್ ಡಿಸೈರ್ ಕಾರ್ ಕಾರಿನಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ನರಸಿಂಹ ಭಟ್ (52) ಶಶಿಕಲಾ ಭಟ್ (50) ದಂಪತಿ ಗಂಭೀರವಾಗಿ ಗಾಯಗೊಂಡು ಬಾಗಲಕೋಟೆ ಕಟ್ಟಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಸಂಭವಿಸುವಾಗ ಗಾಯಾಳುಗಳಲ್ಲಿದ್ದ 50 ಗ್ರಾಂ ಬಂಗಾರ, 60 ಸಾವಿರ ರೂ. ನಗದು ಹಣ ಹಾಗೂ ಮೂರು ಮೊಬೈಲ್‌ಗಳನ್ನು ಆಸ್ಪತ್ರೆಯಲ್ಲಿದ್ದ ಗಾಯಾಳುಗಳ ಮುಂದೆ ಅವರ ಸಂಬಂಧಿಕ ಕಾರು ಚಾಲಕ ದಿನೇಶ ಮರಾಠಿ ಅವರ ಕೈಗೆ ನೀಡಿ ಕೊಲ್ಹಾರ 108 ಆಂಬ್ಯುಲೆನ್ಸ್ ಚಾಲಕ ಶೌಕತಲಿ ಮಕಾಂದಾರ ಹಾಗೂ ಸ್ಟಾಪ್ ನರ್ಸ್ ಸುಖದೇವ ಕಾಳೆ ಮಾನವಿಯತೆ ಮೆರೆದಿದ್ದಾರೆ.