ಸಿನಿಮಾ

ಧಾರವಾಡದಲ್ಲಿ 10.56 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ಧಾರವಾಡ: ಕೀಲಿ ಹಾಕಿಕೊಂಡು ಹೋಗಿದ್ದ ಮನೆಗೆ ಕನ್ನ ಹಾಕಿದ ಕಳ್ಳರು 10.56 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿದ ಘಟನೆ ನಗರದ ಮಾಳಮಡ್ಡಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ದತ್ತರಾಜ್ ಅಶೋಕ ಚೌಡಪುರಕರ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ದತ್ತರಾಜ್ ಪತ್ನಿ ಶ್ರುತಿ ಅವರೊಂದಿಗೆ ಮಾಳಮಡ್ಡಿಯ 2ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಮೇ 20ರಂದು ಮಧ್ಯಾಹ್ನ 1.30ರ ಸುಮಾರಿಗೆ ಪತ್ನಿಯೊಂದಿಗೆ ಹರಿಹರದ ಸಂಬಂಧಿಕರ ಮನೆಗೆ ಹೋಗಿದ್ದರು. ಮೇ 21ರಂದು ಸಂಜೆ 7.30ರ ಸುಮಾರಿಗೆ ಮನೆಗೆ ವಾಪಸ್ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಮುಂಬಾಗಿಲಿಗೆ ಹಾಕಿದ್ದ ಕೀಲಿ ಮುರಿದು ಒಳನುಗ್ಗಿದ ಕಳ್ಳರು, ಬೆಡ್‌ರೂಂನಲ್ಲಿದ್ದ ಅಲ್ಮೇರಾದ ಲಾಕರ್‌ಗಳನ್ನು ಮೀಟಿ ಕಳ್ಳತನ ಮಾಡಿದ್ದಾರೆ. ಅಲ್ಮೇರಾದಲ್ಲಿದ್ದ 9.80 ಲಕ್ಷ ರೂ. ಮೌಲ್ಯದ 197 ಗ್ರಾಂ ಚಿನ್ನಾಭರಣ, 54,600 ರೂ. ಮೌಲ್ಯದ 910 ಗ್ರಾಂ ಬೆಳ್ಳಿಯ ಆಭರಣ, 16,000 ರೂ. ನಗದು ಸೇರಿ 10,56,600 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ಕಳ್ಳತನವಾಗಿದೆ.

ಈ ಕುರಿತು ದತ್ತರಾಜ ನೀಡಿದ ದೂರಿನ ಅನ್ವಯ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

Latest Posts

ಲೈಫ್‌ಸ್ಟೈಲ್