ಜೇವರ್ಗಿ: ಪ್ರತಿಯೊಬ್ಬರೂ ಶಿಕ್ಷಿತರಾಗಬೇಕು ಎಂಬ ಕನಸ್ಸು ಕಂಡಿದ್ದ ಶ್ರೇಷ್ಠ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳಾಗಿದ್ದು, ಅವರ ಆದರ್ಶ, ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪನ್ಯಾಸಕ ಡಾ.ಪದ್ಮರಾಜ ರಾಸಣಗಿ ಹೇಳಿದರು.
ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಡಿ.ದೇವರಾಜ ಅರಸು ಅವರ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ, ದೇವಾಲಯಗಳ ಪ್ರವೇಶ ನಿರ್ಬಂಧಕ್ಕೊಳಗಾಗಿದ್ದ ಶೋಷಿತರಿಗೆ ಧಾರ್ಮಿಕ ಸ್ವಾತಂತ್ರö್ಯ ತಂದು ಕೊಟ್ಟ ಕೀರ್ತಿ ಗುರುಗಳಿಗೆ ಸಲ್ಲುತ್ತದೆ. ಇಂದು ಕೇರಳದಲ್ಲಿ ಶೇ.100 ಸಾಕ್ಷರತೆ ಇದೆ ಎಂದರೆ ಅದಕ್ಕೆ ನಾರಾಯಣ ಗುರುಗಳು ಕಾರಣ ಎಂದರು.
ತಹಸೀಲ್ದಾರ್ ಮಲ್ಲಣ್ಣ ಯಲಗೋಡ, ಟಿಎಚ್‌ಒ ಡಾ.ಸಿದ್ದು ಪಾಟೀಲ್, ಸಿಪಿಐ ರಾಜೇಸಾಬ್ ನದಾಫ್, ಸಮಾಜ ಕಲ್ಯಾಣ ಅಧಿಕಾರಿ ಅಂಬವ್ವ, ಆರ್ಯ ಈಡಿಗ ಸಮಾಜ ತಾಲೂಕು ಅಧ್ಯಕ್ಷ ನಾಗರಾಜ ಗುತ್ತೇದಾರ್, ಪ್ರಮುಖರಾದ ಮಾನಯ್ಯ ಗುತ್ತೇದಾರ್, ಭೀಮಯ್ಯ ಗುತ್ತೇದಾರ್, ಮಂಜುನಾಥ ಗುತ್ತೇದಾರ್, ಮಹೇಶ ಅವರಾದ, ನವೀನ್ ಗುತ್ತೇದಾರ್, ಶಿವರಾಜ ಗುತ್ತೇದಾರ್, ಶಿವರಾಜ ಗುತ್ತೇದಾರ್ ಸೊನ್ನ, ಸಾಬಯ್ಯ ಅವರಾದ, ನಿಂಗಯ್ಯ ಖಾಕಂಡಕಿ, ದೇವಿಂದ್ರ ಗುತ್ತೇದಾರ್ ಜೇವರ್ಗಿ, ಬಾಲಯ್ಯ ಜೇವರ್ಗಿ, ರಮೇಶ ಗುತ್ತೇದಾರ್ ಬಿರಾಳ, ರವಿ ಕುರಳಗೇರಾ, ಬಸಣ್ಣ ಸರ್ಕಾರ ಇತರರಿದ್ದರು.
ರಿಲಯನ್ಸ್ ಪೆಟ್ರೋಲ್ ಬಂಕ್‌ನಿAದ ಕನ್ನಡ ಭವನದವರೆಗೆ ನಾರಾಯಣ ಗುರುಗಳು ಹಾಗೂ ಡಿ.ದೇವರಾಜ ಅರಸು ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು.