24.9 C
Bangalore
Wednesday, December 11, 2019

ಮಳೆಗಾಳಿ ಅಬ್ಬರಕ್ಕೆ ಜೆಟ್ಟಿ ನದಿಪಾಲು

Latest News

ಮೈಸೂರಿನ ಬನುಮಯ್ಯ ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ

ಮೈಸೂರು: ಧರ್ಮಪ್ರಕಾಶ ಡಿ.ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವ ಸಮಾರಂಭವನ್ನು ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಂತವೀರ...

ಮೊದಲ ಪತ್ನಿ, ಮೂವರು ಮಕ್ಕಳನ್ನು ಮನೆಯಿಂದ ಹೊರದಬ್ಬಿದ ಪತಿ: ಚಳಿಯಲ್ಲೇ ಇಡೀ ರಾತ್ರಿ ಕಳೆದ ಪತ್ನಿ, ಮಕ್ಕಳು

ಬೆಳಗಾವಿ: ಮೊದಲ ಪತ್ನಿ ಹಾಗೂ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಳಗಾವಿಯ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ, ಮೊದಲ...

ಚಿತ್ರದುರ್ಗ: ಆರ್ ಒಗಳ ನಿರ್ವಣೆ ಇನ್ನು ಮುಂದೆ ಇಲಾಖೆ ಹೊಣೆ

ಚಿತ್ರದುರ್ಗ: ಶುದ್ಧ ಕುಡಿವ ನೀರು ಘಟಕಗಳ ಹೊಣೆ ಇನ್ನು ಮುಂದೆ ಕುಡಿವ ನೀರು ‌ಮತ್ತು ನೈರ್ಮಲ್ಯ ಇಲಾಖೆಯದ್ದಾಗಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮ ಹೇಳಿದರು. ಜಿಪಂ ಮಾಸಿಕ...

ಪೌರತ್ವ ತಿದ್ದುಪಡಿ ಮಸೂದೆ ದೇಶದ ಈಶಾನ್ಯ ಭಾಗದ ಜನರ ಮೇಲಿನ ಕ್ರಿಮಿನಲ್​ ದಾಳಿ: ರಾಹುಲ್​ ಗಾಂಧಿ ಟೀಕೆ

ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಟೀಕಿಸಿದ್ದು, ದೇಶದ...

ಹುಣಸೂರು ಚುನಾವಣೆಯಲ್ಲಿ ತಟಸ್ಥನಾಗಿರುತ್ತೇನೆ ಎಂದು ಮೊದಲೇ ಘೋಷಿಸಿದ್ದೆ : ಶಾಸಕ ಜಿ.ಟಿ.ದೇವೇಗೌಡ

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್​.ವಿಶ್ವನಾಥ್​ ಅವರನ್ನು ಬೆಂಬಲಿಸುತ್ತೇನೆ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ ಎಂದು ಶಾಸಕ...

ಅನ್ಸಾರ್ ಇನೋಳಿ ಉಳ್ಳಾಲ

ಕುಂಟುತ್ತಾ ಸಾಗಿ ಕೊನೆಗೂ ಮೂರು ವರ್ಷಗಳ ಹಿಂದೆ ಪೂರ್ಣಗೊಂಡಿದ್ದ, ಹರೇಕಳ ಬೋಟ್ ಜೆಟ್ಟಿ ಮೇಲ್ಛಾವಣಿ ಮಳೆಗಾಳಿ ಅಬ್ಬರಕ್ಕೆ ನದಿ ಪಾಲಾದ ಪರಿಣಾಮ ಈಗ ಈ ಭಾಗದಿಂದ ದೋಣಿಯಲ್ಲಿ ಪಯಣಿಸುವವರಿಗೆ ಮತ್ತೊಮ್ಮೆ ಮಳೆ, ಬಿಸಿಲಿನಲ್ಲಿ ಕಳೆಯುವಂತಾಗಿದೆ.

ಹರೇಕಳ ಭಾಗದ ಜನರು ಮಂಗಳೂರಿಗೆ ಬಸ್ಸಿನಲ್ಲಿ ಹೋಗಲು ಒಂದೂಕಾಲು ಗಂಟೆ ಪ್ರಯಾಣಿಸಬೇಕು. ಅಲ್ಲದೆ ಇಲ್ಲಿನ ಬಸ್‌ಗಳ ಕಥೆಯೂ ಅಷ್ಟಕ್ಕಷ್ಟೆ. ನದಿ ಮೂಲಕ ಬೋಟ್‌ನಲ್ಲಿ ಕೇವಲ ಹತ್ತು ನಿಮಿಷ ಪ್ರಯಾಣಿಸಿದರೆ ಅಡ್ಯಾರ್ ತಲುಪಿ ಅಲ್ಲಿಂದ ಪಂಪ್‌ವೆಲ್ ಮೂಲಕ ಮಂಗಳೂರಿಗೆ 20 ನಿಮಿಷದಲ್ಲೇ ತಲುಪಬಹುದು. ಈ ಕಾರಣಕ್ಕೂ ಹರೇಕಳ ಮಾತ್ರವಲ್ಲದೆ ಪಜೀರು ಮತ್ತು ಪಾವೂರಿನ ಜನರೂ ಬೋಟು ಬಳಸುತ್ತಾರೆ.
ಮಳೆಗಾಲದಲ್ಲಿ ಬೋಟಿನ ಮೂಲಕ ಪ್ರಯಾಣಿಸುವ ಜನರು ಕೆಸರಲ್ಲಿ ಕಾಲೆಳೆದುಕೊಂಡು, ನೀರಲ್ಲಿ ಎದ್ದು ಬಿದ್ದು ಬೋಟು ಏರಬೇಕಾಗದ ಪರಿಸ್ಥಿತಿ ಇತ್ತು. ಇದರಿಂದಾಗಿ ಮಕ್ಕಳು, ಮಹಿಳೆಯರು, ವಯಸ್ಸಾದವರು ತೀರಾ ಕಷ್ಟಪಡಬೇಕಾಗಿತ್ತು. ಇಲ್ಲಿನ ದುಸ್ಥಿತಿಯನ್ನು ಹತ್ತಿರದಿಂದಲೇ ಕಂಡಿದ್ದ್ದ ಆಗಿನ ತಾಲೂಕು ಪಂಚಾಯಿತಿ ಸದಸ್ಯ ಮುಸ್ತಫಾ ಮಲಾರ್ ಜೆಟ್ಟಿ ನಿರ್ಮಾಣಕ್ಕಾಗಿ ಸಲ್ಲಿಸಿದ ಬೇಡಿಕೆ ಮೇರೆಗೆ 2013ರಲ್ಲಿ ಶಾಸಕ ಯು.ಟಿ.ಖಾದರ್ 36ಮೀ. ಉದ್ದದ ಬೋಟು ಜೆಟ್ಟಿ ನಿರ್ಮಾಣಕ್ಕೆ 21ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದರು.

ಕುಂಟುತ್ತಾ ಪೂರ್ಣಗೊಂಡಿದ್ದ ಜೆಟ್ಟಿ!
2013 ಮೇ ತಿಂಗಳಲ್ಲಿ ಜೆಟ್ಟಿ ಕಾಮಗಾರಿ ಆರಂಭಿಸಿ, ಜೂನ್‌ನಲ್ಲಿ ಮಳೆ ಆರಂಭಗೊಂಡಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ನಂತರ ಒಳ ಗುತ್ತಿಗೆ ನೀಡುತ್ತಾ ಕಾಮಗಾರಿ ನಡೆದಿದ್ದರಿಂದ ಮೂರುವರೆ ವರ್ಷಗಳ ಬಳಿಕ ಅಂದರೆ, 2016ರಲ್ಲಿ ಪೂರ್ಣಗೊಂಡಿತು.

ಮೇಲ್ಛಾವಣಿ ನದಿಪಾಲು
ಇಲ್ಲಿ ಜೆಟ್ಟಿ ನಿರ್ಮಾಣ ಆಗಿದ್ದರಿಂದ ಬೋಟ್ ಮೂಲಕ ಪ್ರಯಾಣಿಸುವವರು ಮಳೆ, ಬಿಸಿಲಲ್ಲಿ ರಕ್ಷಣೆ ಪಡೆಯಲು ಅನುಕೂಲವಾಗಿತ್ತು. ಆದರೆ ಕಳೆದ ತಿಂಗಳು ಬಂದ ಭಾರಿ ಮಳೆ, ಗಾಳಿಯಿಂದ ಜೆಟ್ಟಿಯ ಮೇಲ್ಛಾವಣಿ ಹಾರಿ ನದಿ ಪಾಲಾಗಿದೆ. ಈಗ ಮತ್ತೊಮ್ಮೆ ಹೊಸ ಮೇಲ್ಛಾವಣಿ ನಿರ್ಮಿಸುವ ಪ್ರಯತ್ನದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ತಲ್ಲೀನರಾಗಿದ್ದಾರೆ. ಪ್ರಕೃತಿ ವಿಕೋಪದಡಿ ಮೇಲ್ಛಾವಣಿ ಕೆಲಸ ನಡೆಸುವ ಅವಕಾಶ ಇದೆಯಾದರೂ ಯಾವಾಗ ಕೆಲಸ ನಡೆಯಲಿದೆ ಎನ್ನುವುದು ಗೊತ್ತಾಗಿಲ್ಲ. ಅದುವರೆಗೆ ಬೋಟ್‌ನಲ್ಲಿ ಹೋಗುವವರಿಗೆ ಮಳೆಯಲ್ಲಿ ನೆನೆಯುವ, ಬಿಸಿಲಿನಲ್ಲಿ ಒಣಗುವ ಪರಿಸ್ಥಿತಿ ಎದುರಾಗಿದೆ

ಮಳೆಗಾಳಿಗೆ ಜೆಟ್ಟಿಯ ಮೇಲ್ಛಾವಣಿ ಹಾರಿ ಹೋಗಿರುವುದರಿಂದ ಪ್ರತಿದಿನ ಬೋಟು ಮೂಲಕ ಪ್ರಯಾಣಿಸುವ ಸಾವಿರಕ್ಕೂ ಅಧಿಕ ಜನರು ಮೇಲ್ಛಾವಣಿ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ, ಶೀಘ್ರ ಮೇಲ್ಛಾವಣಿ ನಿರ್ಮಾಣ ಮಾಡಿಸುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ.
ಮಹಮ್ಮದ್ ಮುಸ್ತಫಾ ಮಲಾರ್ ತಾಪಂ ಮಾಜಿ ಸದಸ್ಯ

ಈಗಾಗಲೇ ಹರೇಕಳ-ಅಡ್ಯಾರ್ ಅಣೆಕಟ್ಟು ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎನ್ನುವ ಮಾಹಿತಿಯಿರುವುದರಿಂದ ಜೆಟ್ಟಿಗೆ ಮೇಲ್ಛಾವಣಿ ಅಳವಡಿಕೆ ಅನಗತ್ಯ. ಅಷ್ಟಕ್ಕೂ ಅಗತ್ಯ ಎಂದಾದರೆ ಪಂಚಾಯಿತಿಯಿಂದ ತಾತ್ಕಾಲಿಕ ಮೇಲ್ಛಾವಣಿ ಅಳವಡಿಕೆ ಬಗ್ಗೆ ಚರ್ಚಿಸುತ್ತೇವೆ.
ಮಹಾಬಲ ಹೆಗ್ಡೆ ದೆಬ್ಬೇಲಿಗುತ್ತು ಗ್ರಾಪಂ ಉಪಾಧ್ಯಕ್ಷ

Stay connected

278,741FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...