ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಭಾರತ ತಂಡ ಪ್ರಕಟ, ಏಕೈಕ ಕನ್ನಡತಿಗೆ ಸ್ಥಾನ

ನವದೆಹಲಿ: ಮಾರ್ಚ್ 4ರಿಂದ ಏಪ್ರಿಲ್ 3ರವರೆಗೆ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಅನುಭವಿ ಬ್ಯಾಟುಗಾರ್ತಿ ಮಿಥಾಲಿ ರಾಜ್ ಸಾರಥ್ಯದಲ್ಲಿ 15 ಆಟಗಾರ್ತಿಯರ ಭಾರತ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ. ಯುವ ಬ್ಯಾಟರ್ ಜೆಮೀಮಾ ರೋಡ್ರಿಗಸ್ ಮತ್ತು ಅನುಭವಿ ವೇಗಿ ಶಿಖಾ ಪಾಂಡೆ ಅವರನ್ನು ತಂಡದಿಂದ ಹೊರಗಿಡಲಾಗಿದೆ. ವಿಜಯಪುರದ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡತಿಯಾಗಿದ್ದಾರೆ. ಮುಂಬೈನ 21 ವರ್ಷದ ಆಟಗಾರ್ತಿ ಜೆಮೀಮಾ ಫಾರ್ಮ್ ಕೊರತೆಯಿಂದಾಗಿ ಕಡೆಗಣಿಸಲ್ಪಟ್ಟಿದ್ದಾರೆ. ಕಳೆದ ವರ್ಷ ಆಡಿದ … Continue reading ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಭಾರತ ತಂಡ ಪ್ರಕಟ, ಏಕೈಕ ಕನ್ನಡತಿಗೆ ಸ್ಥಾನ