More

    ಎನ್​ಆರ್​ಸಿ-ಸಿಎಎ ವಿಚಾರದಲ್ಲಿ ಗೃಹ ಸಚಿವ ಅಮಿತ್​ ಷಾಗೆ ಸವಾಲೆಸೆದ ಚುನಾವಣಾ ಚಾಣಕ್ಯ ಪ್ರಶಾಂತ್​ ಕಿಶೋರ್​

    ನವದೆಹಲಿ: ಗೃಹಸಚಿವ ಅಮಿತ್​ ಷಾ ವಿರುದ್ಧ ವಾಗ್ದಾಳಿ ನಡೆಸಿರುವ ಸಂಯುಕ್ತ ಜನತಾದಳ ಪಕ್ಷದ ನಾಯಕ ಮತ್ತು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್​, ನೀವು ಧೈರ್ಯವಾಗಿ ಘೋಷಿಸಿದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಸಮಯ ಮಿತಿಯೊಳಗೆ ಅನುಷ್ಠಾನ ಮಾಡಿ ಎಂದು ಸವಾಲು ಹಾಕಿದ್ದಾರೆ.

    ಬುಧವಾರ ಟ್ವೀಟ್​ ಮಾಡುವ ಮೂಲಕ ಅಮಿತ್​ ಷಾ ಅವರನ್ನು ಪ್ರಶಾಂತ್​ ಕಿಶೋರ್ ತರಾಟೆಗೆ ತೆಗೆದುಕೊಂಡಿದ್ದಾರೆ.​ ದೇಶದ ನಾಗರಿಕರ ಭಿನ್ನಾಭಿಪ್ರಾಯವನ್ನು ಒಪ್ಪದಿರುವುದು ಯಾವುದೇ ಸರ್ಕಾರದ ಬಲದ ಸಂಕೇತವಲ್ಲ. ಅಮಿತ್​ ಷಾ ಜಿ, ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ನೀವು ಲೆಕ್ಕಿಸುವುದೇ ಇಲ್ಲ ಎಂದಾದಲ್ಲಿ, ರಾಷ್ಟ್ರದ ಎದುರು ಧೈರ್ಯವಾಗಿ ಘೋಷಣೆ ಮಾಡಿದ ಸಿಎಎ ಮತ್ತು ಎನ್ಆರ್​ಸಿಯನ್ನು ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತನ್ನಿ ಎಂದು ಸವಾಲೆಸೆದಿದ್ದಾರೆ.

    ಎನ್​ಆರ್​ಸಿಯನ್ನು ಔಪಚಾರಿಕ ಮತ್ತು ಸ್ಪಷ್ಟವಾಗಿ ತಿರಸ್ಕರಿಸಿರುವ ಕಾಂಗ್ರೆಸ್​ಗೆ ಭಾನುವಾರವಷ್ಟೇ ಪ್ರಶಾಂತ್​ ಧನ್ಯವಾದಗಳನ್ನು ಹೇಳಿದ್ದರು. ಅದರಲ್ಲೂ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರಾಗೆ ವಿಶೇಷ ಧನ್ಯವಾದ ತಿಳಿಸಿದ್ದರು. ಇದರೊಂದಿಗೆ ತಮ್ಮ ಆಡಳಿತದ ಬಿಹಾರದಲ್ಲಿ ಸಿಎಎ ಮತ್ತು ಎನ್​ಆರ್​ಸಿ ಅನುಷ್ಠಾನ ಮಾಡುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್​ ಹೊಗಳುವ ಮೂಲಕ ಜೆಡಿಯು ಮಿತ್ರ​ಪಕ್ಷದ ಬಿಜೆಪಿಗೆ ತಿರುಗೇಟು ನೀಡಿದ್ದರು.

    ಇದರ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ, ತುಂಬಾ ಬುದ್ಧಿವಂತ ಜನರು ಎನ್​ಆರ್​ಸಿ ಮತ್ತು ಸಿಎಎ ವಿಚಾರದಲ್ಲಿ ಯೋಜಿತ ಪ್ರಚಾರವನ್ನು ಮಾಡಿಕೊಳ್ಳುತ್ತಿದ್ದರೆ. ಜೆಡಿಯು ಬೆಂಬಲದೊಂದಿಗೆ ಸಂಸತ್ತಿನಲ್ಲಿ ಬಿಲ್​ ಪಾಸ್​ ಆಗಿದ್ದರು. ಇದೀಗ ವಿರೋಧಿಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿ, ಬಿಹಾರ ಸೇರಿ ಎಲ್ಲ ರಾಜ್ಯಗಳಲ್ಲೂ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಪ್ರತಿ ಸವಾಲು ಹಾಕಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts